For Quick Alerts
  ALLOW NOTIFICATIONS  
  For Daily Alerts

  ಸ್ಟೇಡಿಯಂನಲ್ಲಿ ಪ್ರಿಯಾಮಣಿಯ ಚುಂಬಿಸಿದನೇ ಸಚಿನ್?

  By Srinath
  |

  ಸಿಸಿಎಲ್ ಪಂದ್ಯಾವಳಿಯ ವೇಳೆ, ಮೊನ್ನೆ ಹೈದರಾಬಾದಿನ ಸ್ಟೇಡಿಯಂನಲ್ಲಿ ಮುಂಬೈ ಮತ್ತು ತೆಲುಗು ಚಿತ್ರ ತಂಡಗಳ ಮಧ್ಯೆ ಪಂದ್ಯ ನಡೆದಾಗ ಮಾದಕ ನಟಿ ಪ್ರಿಯಾಮಣಿ ಜತೆ ಮುಂಬೈ ಕ್ರಿಕೆಟ್ ಹೀರೊ, ಬಾಲಿವುಡ್ ನಟ ಸಚ್ಚಿನ್ ಜೋಷಿ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

  ಸಿಸಿಎಲ್ ನಿಮಿತ್ತ ಆಯಾ ತಂಡಗಳ ಬ್ರ್ಯಾಂಡ್ ಅಂಬಾಸಿಡರ್ ಗಳು (ಚೀರ್ ಗರ್ಲ್ಸ್!) ಪಂದ್ಯ ಮುಗಿದಾದ ಮೇಲೆ ಮೋಜು ಮಸ್ತಿ ಮಾಡುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಸಚ್ಚಿನ್, ರಿಚರ್ಡ್ ಗೇರ್ ಸ್ಟೈಲಿನಲ್ಲಿ ಪ್ರಿಯಾಮಣಿಯನ್ನು ಬರಸೆಳೆದು (ಶಿಲ್ಪಾ ಶೆಟ್ಟಿ, ರಾಖಿ ಸಾವಂತ್ ಮಾದರಿಯಲ್ಲಿ) ಮುತ್ತಿನ ಸುರಿಮಳೆಗೆರೆದಿದ್ದ ಎಂದು ವರದಿಯಾಗಿತ್ತು. ಇದನ್ನು ಸ್ವತಃ ಪ್ರಿಯಾಮಣಿಯೇ ತನ್ನ ಸಾಮಾಜಿಕ ಅಂತರ್ಜಾಲ ತಾಣವಾದ ಟ್ವಿಟ್ಟರಿನಲ್ಲಿ ಗೀಚಿಕೊಂಡಿದ್ದಳು.

  ಆದರೆ ಪ್ರಿಯಾಮಣಿಗೆ ತನ್ನ ತಪ್ಪಿನ ಅರಿವಾಗಿ ಅಂದರೆ ಡ್ಯಾಮೇಜ್ ಕಂಟ್ರೋಲ್ ಸಲುವಾಗಿ 'ಇಲ್ಲ ಅಂಥದ್ದೇನೂ ಆಗೇ ಇಲ್ಲ. ಅವ ನನಗೆ ಒಂದು ವರ್ಷದ ಗೆಳೆಯ, ಅವ ಸಚಿನ್ ಮ್ಯಾಚ್ ಮುಗಿದ ಮೇಲೆ ಸಂಭ್ರಮದಲ್ಲಿ ಓಲಾಡುತ್ತಿದ್ದ. ಹಾಗೇ ನಾನೂ ಎದುರಿಗೆ ಸಿಕ್ಕಿದೆ. ಹಾಗೇ ಚುಮ್ಮ ಒಂದೇ ಒಂದು ಚುಮ್ಮ ಕೊಟ್ಟಿದ್ದ ಅಷ್ಟೇ. ಅದಕ್ಯಾಕೆ ಮೀಡಿಯಾ ಇಷ್ಟೊಂದು ರಂಪಾ ರಾಮಾಯಣ ಮಾಡುತ್ತಿದೆ' ಎಂದು ಅಮಾಯಕವಾಗಿ ಮತ್ತದೇ ಟ್ವಿಟ್ಟರಿನಲ್ಲಿ ಪ್ರಶ್ನಿಸಿದ್ದಾಳೆ.

  English summary
  After reports of Priyamani being miffed with Sachiin Joshi of Mumbai Heroes at a Celebrity Cricket afterparty, as Sachiin allegedly tried to misbehave with her, the actress denies any such incident happened. The incident became a talking point after Priya apparently posted messages on her micro-blogging page.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X