ಸುಹಾಸಿನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಚಿದಂಬರಂ

ಸುಹಾಸಿನಿ ಈ ಕಾರ್ಯಕ್ರಮದ ಮೂಲಕ ತನ್ನ ಅಭಿಪ್ರಾಯಗಳನ್ನು ನಿಚ್ಚಳವಾಗಿ ಹೇಳುವುದು ಕಾರ್ಯಕ್ರಮದ ವಿಶೇಷ. ಕಳೆದ ಕೆಲ ದಿನಗಳಿಂದ ತಮಿಳು ನಿರ್ಮಾಪಕರು ಈ ಕಾರ್ಯಕ್ರಮದ ಬಗ್ಗೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸುಹಾಸಿನಿ ವಿಮರ್ಶೆ ಇರುಸುಮುರುಸು ಉಂಟುಮಾಡುತ್ತಿವೆ ಎಂದು ಆರೋಪಿಸಿದ್ದರು.
ಇತ್ತೀಚೆಗೆ ಬಿಡುಗಡೆಯಾದ 'ರಾಜಾಧಿರಾಜ' ಚಿತ್ರದ ಬಗ್ಗೆ ವಿಮರ್ಶಿಸುತ್ತಾ, ಎಂಜಿಆರ್, ರಜನಿಕಾಂತ್, ವಿಜಯ್ ಚಿತ್ರಗಳ ನಕಲಿನಂತಿದೆ. ತಮಿಳು ಚಿತ್ರೋದ್ಯಮ ಇಪ್ಪತ್ತು ವರ್ಷಗಳಷ್ಟು ಹಿಂದೆ ಸರೊದಿದೆ ಎಂದಿದ್ದರು. ಈ ಹೇಳಿಕೆಯಿಂದ ಬೇಸರಗೊಂಡಿರುವ ಆ ಚಿತ್ರದ ನಿರ್ಮಾಪಕ ಶಕ್ತಿ ಚಿದಂಬರಂ ನ್ಯಾಯಲಯದ ಮೆಟ್ಟಿಲು ಹತ್ತಲು ಹೊರಟಿದ್ದಾರೆ.
ತಮಿಳು ನಿರ್ಮಾಪಕ ಸಂಘಕ್ಕೂ ದೂರು ಸಲ್ಲಿಸಿರುವ ಚಿದಂಬರಂ ಮಾತನಾಡುತ್ತಾ, ನನ್ನ ಚಿತ್ರವನ್ನು ನಕಲು ಎನ್ನುತ್ತಿದ್ದಾರೆ.ಹಾಗಿದ್ದರೆ ಆಕೆಯ ಗಂಡ ಮಣಿರತ್ನಂ ಅವರು ರಾಮಾಯಣದ ಸ್ಪೂರ್ತಿಯಿಂದ 'ರಾವಣ' ತೆಗೆಯುತ್ತಿದ್ದಾರೆ. ಸತಿ ಸಾವಿತ್ರಿ ಕತೆಯೊಂದಿಗೆ ರೋಜಾ, ಕರ್ಣನ ಕತೆಯೊಂದಿಗೆ ದಳಪತಿ ಚಿತ್ರಗಳನ್ನು ತೆಗೆಯಲಿಲ್ಲವೇ? ಅದು ನಕಲಲ್ಲವೇ? ಎಂದು ಆರೋಪಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











