»   »  ವಿವಾಹಪೂರ್ವ ಲೈಂಗಿಕತೆ ತಪ್ಪಲ್ಲ: ಅಮೃತಾರಾವ್

ವಿವಾಹಪೂರ್ವ ಲೈಂಗಿಕತೆ ತಪ್ಪಲ್ಲ: ಅಮೃತಾರಾವ್

Subscribe to Filmibeat Kannada

'ಮದುವೆಗೂ ಮುನ್ನ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡರೆ ತಪ್ಪೇನು ಇಲ್ಲ' ಎಂದು ಈಗಾಗಲೇ ಹಲವಾರು ನಟಿಯರು ಹಲವಾರು ಸಲ ಹೇಳಿ ವಿವಾದಕ್ಕೆ ಸಿಕ್ಕಿಕ್ಕೊಂಡಿದ್ದರು. ಇದೀಗ ಆ ಸಾಲಿಗೆ ಹೊಸದಾಗಿ ಬಾಲಿವುಡ್ ನಟಿ ಅಮೃತಾರಾವ್ ಸೇರ್ಪಡೆಯಾಗಿದ್ದಾರೆ.

''ಮದುವೆಗೂ ಮುನ್ನ ಹೆಣ್ಣುಮಕ್ಕಳು ವಿವಾಹಪೂರ್ವ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ತಪ್ಪೇನು ಇಲ್ಲ'' ಎಂದು ಅಮೃತಾರಾವ್ ಹೇಳಿದ್ದಾರೆ. ಆಕೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ವಾವ್, ಲೈಫ್ ಹೋತೊ ಐಸಿ, ಶಿಕಾರ್, ವಿವಾಹ್, ವಿಕ್ಟರಿ, ಷಾರ್ಟ್ ಕಟ್ ನಂತಹ ಚಿತ್ರಗಳ ಮೂಲಕ ಜನಪ್ರಿಯರಾದ ನಟಿ ಅಮೃತಾ.

ಮದುವೆಗೂ ಮುನ್ನ ಇಬ್ಬರೂ ಹತ್ತಿರವಾಗುವುದು ನನ್ನ ದೃಷ್ಟಿಯಲ್ಲಿ ತಪ್ಪಲ್ಲ. ಆದರೆ ಅವರಿಬ್ಬರೂ ಎಷ್ಟರ ಮಟ್ಟಿಗೆ ಹತ್ತಿರವಾಗಬೇಕು ಎಂಬುದು ಅವರವರ ಆಲೋಚನಾ ವ್ಯಾಪ್ತಿಗೆ ಒಳಪಟ್ಟಿದೆ. ಮದುವೆಗೂ ಮುನ್ನ ಲೈಂಗಿಕ ಕ್ರಿಯೆಗೆ ಕಡ್ಡಾಯವಾಗಿ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎನ್ನುತ್ತಾರೆ ಅಮೃತಾರಾವ್.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada