For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ತಂದೆಗೆ ಜೂನಿಯರ್ ಮಲ್ಯ ಬಾಡಿ ಗಾರ್ಡ್!

  By Rajendra
  |

  ಇದೊಂಥರಾ ಮಗಳನ್ನು ಪಟಾಯಿಸಲು ಅಪ್ಪನನ್ನು ಬಲೆಗೆ ಕೆಡವುವ ತಂತ್ರ! ಈ ತಂತ್ರವನ್ನು ಸಿದ್ಧಾರ್ಥ್ ಮಲ್ಯ ಚಾಕಚಕ್ಯತೆಯಿಂದ ಮಾಡಿ ಮುಗಿಸಿದ್ದಾರೆ. ಫಲಿತಾಂಶ ನಿರೀಕ್ಷಿಸಲಾಗಿದೆ. ಆದರೆ ಗುಳಿಕೆನ್ನ್ನೆ ಸುಂದರಿ ದೀಪಿಕಾ ಪಡುಕೋಣೆ ಅವರ ತಂದೆ ಪ್ರಕಾಶ್ ಪಡುಕೋಣೆ ಈ ತಂತ್ರಕ್ಕೆ ಮರುಳಾಗಿದ್ದರೋ ಇಲ್ಲವೋ ಎಂಬುದು ನಂತರದ ದಿನಗಳಲ್ಲಿ ಗೊತ್ತಾಗಲಿದೆ.

  ಇಷ್ಟಕ್ಕೂ ನಡೆದದ್ದೇನೆಂದರೆ, ದೀಪಿಕಾ ಅಭಿನಯಿಸಿರುವ 'ಕೇಲೆ ಹಮ್ ಜೀ ಜಾನ್ ಸೆ' ಚಿತ್ರದ ಪ್ರೀಮಿಯರ್ ಪ್ರದರ್ಶನವನ್ನು ಇತ್ತೀಚೆಗೆ ಮುಂಬೈನಲ್ಲಿ ಏರ್ಪಡಿಸಲಾಗಿತ್ತು. ಸಿದ್ಧಾರ್ಥ್ ಮಲ್ಯ ಕೂಡ ಆಗಮಿಸಿದ್ದ. ಪ್ರೀಮಿಯರ್ ಪ್ರದರ್ಶನ ಮುಗಿಯುವ ತನಕ ಪ್ರಕಾಶ್ ಪಡುಕೋಣೆ ಅವರಿಗೆ ಸಿದ್ಧಾರ್ಥ್ ಅಂಟಿಕೊಂಡೇ ಕೂತಿದ್ದ.

  ಇನ್ನೇನು ಪ್ರೀಮಿಯರ್ ಪ್ರದರ್ಶನ ಮುಗಿಯ ಬೇಕು ಅನ್ನುವಷ್ಟರಲ್ಲಿ ದಿಗ್ಗನೆ ಎದ್ದು ನಿಂತ ಸಿದ್ಧಾರ್ಥ್, ಪ್ರಕಾಶ್ ಪಡುಕೋಣೆ ಅವರನ್ನು ಯಾರೂ ಮುಟ್ಟದಂತೆ ಅವರ ಹಿಂದೆ ಬಾಡಿಗಾರ್ಡ್‌ನಂತೆ ನಿಂತು ಭದ್ರತಾ ಸಿಬ್ಬಂದಿಗಿಂತಲೂ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದಾನೆ. ಸಿದ್ಧಾರ್ಥನ ಈ ಮಂಗ್ಯಾಟಗಳನ್ನು ನೋಡಿ ಪ್ರಕಾಶ್ ಮುಸಿಮುಸಿ ನಕ್ಕಿದ್ದಾಗಿ ಕಂಡವರು ಹೇಳಿದ್ದಾರೆ.

  ಪ್ರೀಮಿಯರ್ ಶೋ ಮುಗಿದ ಮೇಲೂ ಸಿದ್ಧಾರ್ಥ್‌ನ ಮಂಗ್ಯಾಟಗಳು ಮುಂದುವರಿದಿತ್ತು. ಪ್ರಕಾಶ್ ಪಡುಕೋಣೆ ಜೊತೆ ಹಿಂದಿನ ಸೀಟಿನಲ್ಲಿ ಸಿದ್ಧಾರ್ಥ್ ಕೂತು ಮನೆ ಗೇಟಿನ ತನಕ ಬಿಟ್ಟುಬಂದಿರುವುದಾಗಿ ಸುದ್ದಿ. ಅದೇ ಕಾರಿನಲ್ಲಿ ದೀಪಿಕಾ ಕೂಡ ಇದ್ದರೂ ಸಿದ್ಧಾರ್ಥನ ಮಂಗ್ಯಾಟಗಳಿಗೆ ಬೇಸತ್ತು ಆಕೆ ಮುಂದಿನ ಸೀಟಿನಲ್ಲಿ ಕೂತಿದ್ದರು ಎನ್ನಲಾಗಿದೆ.

  English summary
  Siddharth Mallya acts like body guard to Deepika"s dad Prakash Padukone at premiere of her film Khelein Hum Jee Jaan Sey. The premiere of film Khelein Hum Jee Jaan Sey held at a suburban theatre on Thursday night. His attentiveness towards Deepika"s dad did not go unnoticed and quite a few present at the event were impressed by Siddharth"s actions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X