For Quick Alerts
  ALLOW NOTIFICATIONS  
  For Daily Alerts

  ಗೋವಾ ತೀರದಲ್ಲಿ ಮದ್ಯಕ್ಕಿಂತಲೂ ಮಹಿಳೆ ಅಗ್ಗವಂತೆ

  By Rajendra
  |

  ಚಿತ್ರದ ಟ್ರೈಲರ್‌ನಲ್ಲಿ ಬಾಲಿವುಡ್ ತಾರೆ ಬಿಪಾಶಾ ಬಸು ಈ ರೀತಿ ಡೈಲಾಗ್ ಹೇಳುವ ಮೂಲಕ 'ದಮ್ ಮಾರೋ ದಮ್' ಚಿತ್ರಕ್ಕೆ ಹೊಸ ವಿವಾದ ಎದುರಾಗಿದೆ. ಈ ವಿಷಯವನ್ನು ಗೋವಾ ಸರ್ಕಾರವೂ ಸೀರಿಯಸ್ಸಾಗಿ ತೆಗೆದುಕೊಂಡಿದ್ದು ಚಿತ್ರದ ನಿರ್ದೇಶಕ ರೋಹನ್ ಸಿಪ್ಪಿ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

  "ಗೋವಾ ಸಣ್ಣ ರಾಜ್ಯವಾದರೂ ಅಲ್ಲಿನವರು ಹೃದಯ ವೈಶಾಲ್ಯವುಳ್ಳವರು. ಚಿತ್ರದ ನಿರ್ಮಾಪಕರು ತಮ್ಮ ಜೇಬನ್ನು ತುಂಬಿಸಿಕೊಳ್ಳಲು ಈ ಅಗ್ಗದ ಪ್ರಚಾರತಂತ್ರ ಬಿಟ್ಟು ಇನ್ಯಾವುದಾರೂ ಪ್ರದೇಶನ್ನು ಆಯ್ಕೆ ಮಾಡಿಕೊಳ್ಳಲಿ. ಗೋವಾ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತಾನಾಡಿದರೆ ಸುಮ್ಮನಿರಲ್ಲ" ಎಂದು ಶಿವಸೇನೆ ಕೂಡ ಗುಡುಗಿದೆ.

  ಗೋವಾ ಮಹಿಳೆಯರ ಅಭಿಮಾನ, ಸ್ವಾಭಿಮಾನಕ್ಕೆ ಚಿತ್ರ ಭಂಗ ತಂದಿದೆ. ಸದಾ ಬಾಲಿವುಡ್ ಗೋವಾದವರನ್ನು ಕುಡುಕರು ಎಂದು ಬಿಂಬಿಸುತ್ತಿದೆ. ಮಹಿಳೆಯರ ವ್ಯಕ್ತಿತ್ವಕ್ಕ್ಕೂ ಮಸಿ ಬಳಿಯುತ್ತಿದೆ. ಈ ವಿಚಾರದಲ್ಲಿ ಮಾಧ್ಯಮಗಳು ಕೂಡ ಹಿಂದೆಬಿದ್ದಿಲ್ಲ ಎಂದಿದ್ದಾರೆ ಗೋವಾ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾದ ಪ್ರಮೋದ್ ಸಲಗಾಂವ್‌ಕರ್. ಒಟ್ಟಿನಲ್ಲಿ ಈ ಚಿತ್ರದ ಬಗ್ಗೆ ನಿಷೇಧ ಹೇರುವಂತೆ ಮುಂಬೈ ಹೈಕೋರ್ಟ್ ಮೊರೆಹೋಗಲು ಗೋವಾ ಸರ್ಕಾರ ತೀರ್ಮಾನಿಸಿದೆ.

  ಬಿಪಾಶಾ ಬಸು, ಅಭಿಷೇಕ್ ಬಚ್ಚನ್, ದಗ್ಗುಬಾಟಿ ರಾಣಾ, ದೀಪಿಕಾ ಪಡುಕೋಣೆ ಮುಂತಾದವರು ಚಿತ್ರದ ತಾರಾಬಳಗದಲ್ಲಿರುವ ಚಿತ್ರಕ್ಕೆ ರಮೇಶ್ ಸಿಪ್ಪಿ ನಿರ್ಮಾಪಕರು. ಈ ಚಿತ್ರದಲ್ಲಿ ಕೆಂಪಿರುವೆಗಳೊಂದಿಗೆ ಚಿತ್ರೀಕರಿಸಿರುವ ದೀಪಿಕಾ ಪಡುಕೋಣೆ ಮಸ್ತ್ ಐಟಂ ಸಾಂಗ್ ಕೂಡ ಇದೆ.

  English summary
  "Over here (in Goa)....liquor is cheap, and the women are cheaper," are lines that actress Bipasha Basu delivers in the trailor of the Bollywood movie Dum Maaro Dum. The Goa government has decided to approach the Bombay High Court, seeking a ban on director Rohan Sippy's new Bollywood film Dum Maro Dum for its bad portrayal of the state.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X