For Quick Alerts
  ALLOW NOTIFICATIONS  
  For Daily Alerts

  ದಿನೇಶ್ ಗಾಂಧಿಗೆ 'ಕಿರಿಕ್ ರಾಣಿ'ಯಾಗಿ ಕಾಡಿದ ರಾಗಿಣಿ

  |

  ನಟಿ ರಾಗಿಣಿ ದ್ವಿವೇದಿ ಈಗ ಕನ್ನಡದ ಟಾಪ್ ಹೀರೋಯಿನ್. ಜೊತೆಗೆ ಇಡೀ ಸೌತ್ ಇಂಡಿಯಾಗೇ ಗೊತ್ತಿರುವ ನಟಿ ಕೂಡ. ಇಂಥ ರಾಗಿಣಿಗೆ ಗಾಡ್ ಫಾದರ್, ಕನ್ನಡ ಚಿತ್ರನಿರ್ಮಾಪಕ ದಿನೇಶ್ ಗಾಂಧಿ. ಕನ್ನಡದಲ್ಲಿ ರಾಗಿಣಿಯ ಮೊದಲ ಚಿತ್ರ ವೀರಮದಕರಿ. ಆ ಚಿತ್ರದ ನಿರ್ಮಾಪಕರೇ ದಿನೇಶ್ ಗಾಂಧಿ. ಆದರೆ ಅವರಿಗೇ ಈಗ ರಾಗಿಣಿ ಕೈಗೆ ಸಿಗುತ್ತಿಲ್ಲ.

  ರಾಗಿಣಿಯನ್ನು ಯಾಕೆ ಹಿಡಿಯಲು ಹೋಗಿದ್ದರು ದಿನೇಶ್ ಗಾಂದಿ ಅಂತ ಕೇಳಬೇಡಿ. ಅವರು ಇದೀಗ ನಿರ್ಮಿಸಲು ಹೊರಟಿರುವ ರೀಮೇಕ್ ಚಿತ್ರ ಛತ್ರಪತಿಗೆ ನಾಯಕಿಯಾಗಿ ನಟಿಸಲು ರಾಗಿಣಿಗೆ ಆಫರ್ ನೀಡುವ ಸಂಬಂಧ ದಿನೇಶ್ ಗಾಂಧಿ ಆಕೆಗೆ ಫೋನ್ ಕಾಲ್ ಮಾಡಿದ್ದರಂತೆ. ಅವರ ಮಾತಿಗೆ ಕಾಟಾಚಾರಕ್ಕೋ ಎಂಬಂತೆ ಮಾತನಾಡಿದ ರಾಗಿಣಿ, ಕನ್ನಡದಲ್ಲಿ ಯಾರೂ ಕೊಡದಷ್ಟು, ಯಾರೂ ತೆಗೆದುಕೊಳ್ಳದಷ್ಟು ಸಂಭಾವನೆ ಕೇಳಿದರಂತೆ.

  ಮೊದಲೇ ದಿನೇಶ್ ಗಾಂಧಿ ರಾಗಿಣಿಗಿಂತಲೂ ಕಿರಿಕ್. ಅವರು ಆಕೆಯ ಸಹವಾಸವೇ ಬೇಡವೆಂದು ಮುಂಬೈನಿಂದ ಪೂಜಾ ವರ್ಮಾ ಎಂಬ ಬೆಡಗಿಯನ್ನು ಕರೆತಂದಿದ್ದಾರೆ. ರಾಗಿಣಿಯ ಜಾಗಕ್ಕೆ ಈಗ ಪೂಜಾ ವರ್ಮಾ ಬಂದು ಕುಳಿತಿದ್ದಾರೆ. ನಾಯಕರಾಗಿ AK 56 ಚಿತ್ರದ ಹೀರೋ ಸಿದ್ಧಾಂತ್ ಆಯ್ಕೆಯಾಗಿದ್ದಾರೆ. ಅಂದಹಾಗೆ, ತೆಲುಗಿನಲ್ಲಿ ಛತ್ರಪತಿ ಚಿತ್ರವನ್ನು ರಾಜಮೌಳಿ ನಿರ್ದೇಶಿಸಿದ್ದರು, ಪ್ರಭಾಸ್ ನಟಿಸಿದ್ದರು.

  ಇಲ್ಲಿಯ ಕಥೆ ಗೊತ್ತಾಯ್ತಲ್ಲ! ರಾಗಿಣಿಗೆ ಕನಿಷ್ಟ ಸೌಜನ್ಯಕ್ಕೂ ಬರಗಾಲವೇ ಎಂದು ಕೇಳುತ್ತಿದ್ದಾರೆ ಗಾಂಧಿನಗರದ ಗಲ್ಲಿಗಳಲ್ಲಿರುವ ಕೆಲವು ಪಂಡಿತರು. ಆದರೆ ಇದಕ್ಕೆ ರಾಗಿಣಿಯ ಕಡೆಯಿಂದ ಯಾವ ಉತ್ತರ ಬರುತ್ತೋ! ಏಕೆಂದರೆ ಈ ದಿನೇಶ್ ಗಾಂಧಿಯನ್ನೂ ಕೂಡ ಪೂರ್ತಿ ನಂಬುವಂತಿಲ್ಲ ಎಂಬುದೂ ಬಹಳಷ್ಟು ಜನರ ಅಂಬೋಣ. (ಒನ್ ಇಂಡಿಯಾ ಕನ್ನಡ)

  English summary
  Actress Ragini Dwivedi Rejects Dinesh Gandhi Offer of Telugu Remake Chatrapati Movie. Now, Pooja Varma from Mubai selected for Ragini replacement role. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X