For Quick Alerts
  ALLOW NOTIFICATIONS  
  For Daily Alerts

  ರಮ್ಯಾ 'ಚಂದ್ರ'ನಿಂದ ಹೊರನಡೆದ ಗುಟ್ಟು ಬಹಿರಂಗ

  |
  <ul id="pagination-digg"><li class="next"><a href="/gossips/08-roopa-iyer-movie-chandra-ramya-out-prem-kumar-aid0172.html">Next »</a></li></ul>

  ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಟಿ ರೂಪಾ ಅಯ್ಯರ್ 'ಚಂದ್ರ' ಚಿತ್ರದಿಂದ ರಮ್ಯಾ ಔಟ್ ಆಗಿರುವ ಸುದ್ದಿ ಎಲ್ಲರಿಗೂ ತಿಳಿದ ವಿಚಾರ. ಆದರೆ ಅದರ ಹಿಂದೆ ಅವಿತಿದ್ದ ಕಾರಣ ಇದೀಗ ಬಹಿರಂಗವಾಗಿದೆ, ಅದಕ್ಕೆ ಕಾರಣ ರಮ್ಯಾ ಹಾಗೂ ಚಿತ್ರತಂಡ ಎರಡೂ. ಅಂದರೆ ರಮ್ಯಾ ಹೇಳಿದಂತೆ ಚಿತ್ರತಂಡ ಕೇಳಿಲ್ಲ, ಚಿತ್ರತಂಡ ಹೇಳಿದ್ದನ್ನು ರಮ್ಯಾ ಒಪ್ಪಿಲ್ಲ.

  ರೂಪಾ ಅಯ್ಯರ್ ಚಂದ್ರ ಚಿತ್ರ ತಿರುವನಂತಪುರ ರಾಯಲ್ ಫ್ಯಾಮಿಲಿ ಕಥೆ ಹೊಂದಿದೆ. ಪ್ರಾರಂಬದಲ್ಲಿ ನಾಯಕಿ ರಮ್ಯಾ ಚಿತ್ರದಿಂದ ಹೊರನಡೆದು ವಿಘ್ನ ಎದುರಾಗಿದೆ. ಆದರೆ ಅದನ್ನು ಚಿತ್ರತಂಡ ಅದನ್ನು ತೊಂದರೆ ಅಂದುಕೊಂಡಿಲ್ಲ.ಕಾರಣ ಚಿತ್ರಕ್ಕೆ ಕಥೆ ಮುಖ್ಯವೇ ಹೊರತು ನಾಯಕಿಯಲ್ಲ, ಅಷ್ಟಕ್ಕೂ ಈ ಚಿತ್ರದಲ್ಲಿ ನಾಯಕನೇ ಮುಖ್ಯ ಅಂತ ನಿರ್ಮಾಪಕರು ನಿರ್ಧರಿಸಿದ್ದಾರೆ.

  'ಚಂದ್ರ' ಚಿತ್ರದ ನಿರ್ದೇಶಕಿ ರೂಪಾ ಅಯ್ಯರ್ ಒಬ್ಬರೇ. ಆದರೆ ನಿರ್ಮಾಪಕರು ಒಬ್ಬರಲ್ಲ, ಒಂದಷ್ಟು ಸಮಾನ ಮನಸ್ಕರು ಸೇರಿ ನಿರ್ಮಿಸುತ್ತಿರುವ ಚಿತ್ರವಿದು. ಹಾಗಾಗಿ ಅವರು ಎಲ್ಲೂ ರಾಜಿಯಾಗುತ್ತಿಲ್ಲ. ಕಥೆ ಒಪ್ಪಿಕೊಂಡು ನಟಿಸುವವರಷ್ಟೇ ಬೇಕು ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ. ಇದಕ್ಕೆ ಬದ್ಧರಾಗಿ ಲವ್ಲಿ ಸ್ಟಾರ್ ಪ್ರೇಮ್ ನಟಿಸುತ್ತಿದ್ದಾರೆ. ಆದರೆ ರಮ್ಯಾ ಅದಕ್ಕೆ ವಿರುದ್ಧ ನಡೆ ಅನುಸರಿಸಿದ್ದಾರೆ.

  ಚಿತ್ರರಂಗದಲ್ಲಿ ನಾಯಕ-ನಾಯಕಿಯರು ಹೆಸರು ಮಾಡಿದ ಮೇಲೆ ನಿರ್ದೇಶಕರ ಮೇಲೆ ಒತ್ತಡ ಹಾಕುವುದು ಹೊಸ ವಿಷಯವೇನಲ್ಲ. ಕಥೆ ಬದಲಾಯಿಸಬೇಕು, ತನ್ನ ಪಾತ್ರಕ್ಕೆ ಹೆಚ್ಚು ಸ್ಕೋಪು ನೀಡಬೇಕು, ಹಾಡು ಬೇಕು, ಅದು ಇದು ಅಂತ ಹಲವು ಬದಲಾವಣೆಗಳಿಗೆ ಬಲವಂತ ಮಾಡುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ನಿರ್ದೇಶಕರು ಮಾಡುತ್ತಾರೆ ಕೂಡ. ಆದರೆ ಆದರೆ 'ಚಂದ್ರ' ಟೀಮ್ ಮಾಡಿಲ್ಲ, ರಮ್ಯಾ ಹೊರಬಂದಿದ್ದಾರೆ. ಹಾಗಾದರೆ ರಮ್ಯಾ ಮಾಡಿದ್ದೇನೆ? ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/gossips/08-roopa-iyer-movie-chandra-ramya-out-prem-kumar-aid0172.html">Next »</a></li></ul>
  English summary
  Actress Ramya went out from Kannada Movie Chandra, which is directing by her friend, director Roopa Iyer, The reason is revealed. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X