For Quick Alerts
  ALLOW NOTIFICATIONS  
  For Daily Alerts

  ಹೃತಿಕ್ ಗೆ ಮಾರಕ ನೋವು, ಕೈ ತಪ್ಪಿದ ಚಿತ್ರಗಳು

  By Mahesh
  |

  ಗ್ರೀಕ್ ದೇವತೆಯಂಥ ಆಕರ್ಷಕ ಮೈಕಟ್ಟು ಹೊಂದಿರುವ ನೀಲಿ ಕಂಗಳ ಚೆಲುವ ಹೃತಿಕ್ ರೋಷನ್ ಯಾಕೋ ಈ ನಡುವೆ ಸಪ್ಪಗಾಗಿದ್ದಾನೆ. ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಕ್ರಿಶ್ 3 ಬಿಟ್ಟರೆ ಬೇರೆ ಚಿತ್ರ ಹೃತಿಕ್ ಕೈಲಿಲ್ಲ.

  ಇದಕ್ಕೆ ಕಾರಣವೂ ಇದೆ ಕಟ್ಟು ಮಸ್ತಾದ ದೇಹ ಹೊಂದಿದ್ದರೂ ಹೃತಿಕ್ ಗೆ ಮಾರಕವಾದ ನೋವು ಕಾಡುತ್ತಿದೆ. ಅದೇ ನೋವಿನಲ್ಲಿ ಕ್ರಿಶ್ 3 ಮುಗಿಸುತ್ತಿದ್ದಾರೆ.

  ಹೌದು, ಹೃತಿಕ್ ಅಸಾಧ್ಯ ಕೀಲು ನೋವಿನಿಂದ ಬಳಲುತ್ತಿದ್ದಾರೆ. ಅದೆಲ್ಲ ಶುರುವಾಗಿದ್ದು ಕ್ರಿಶ್ ಚಿತ್ರ ಹಾಗೂ ಧೂಮ್ 2 ಚಿತ್ರೀಕರಣದ ಸಂದರ್ಭದಲ್ಲಿ...2008ರಲ್ಲಿ ಕೀಲು ನೋವು ತಡೆಯಲಾರದೆ ಶಸ್ತ್ರಚಿಕಿತ್ಸೆಗೆ ಹೃತಿಕ್ ಒಳಗಾಗಬೇಕಾಯಿತು.

  ಆದರೆ, ನಂತರ ಕೈಟ್ಸ್ ಚಿತ್ರದ ಸಂದರ್ಭದಲ್ಲಿ ಸ್ಟಂಟ್ ಮಾಡಲು ಹೋಗಿ ಮತ್ತೆ ಗಾಯಗೊಂಡ ಹೃತಿಕ್ ಗೆ ಅಗ್ನಿಪಥ್ ಚಿತ್ರೀಕರಣದಲ್ಲಿ ನೋವು ಉಲ್ಬಣವಾಗಿಬಿಟ್ಟಿತು.

  38 ವರ್ಷದ ಹೃತಿಕ್ ನಂತರ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳದೆ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿದ್ದಾನೆ. ಆದರೆ, ಕರಣ್ ಜೋಹರ್ ಅವರ ಹೊಸ ಚಿತ್ರ Immortals of Meluha ಕಾದಂಬರಿ ಚಿತ್ರಕ್ಕೆ ಹೃತಿಕ್ ನಾಯಕ ಎಂಬ ಸುದ್ದಿ ಹಬ್ಬಿದೆ. ಆದರೆ, ಅದು ಇನ್ನೂ ಅಧಿಕೃತವಾಗಿಲ್ಲ.

  2013ರ ಹೊತ್ತಿಗೆ ಹೃತಿಕ್ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿ ತನಕ ಕೀಲುನೋವಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಸಿಕೊಳ್ಳುವುದೇ ಕಾಯಕವಾಗಿದೆ.

  English summary
  The Greek God of Bollywood, Hrithik Roshan is currently working on his home production ‘Krrish 3’ and seems like the film has taken a toll on his health. Hrithik, who has been coping with health problems off late, plans to take it slow post ‘Krrish 3’.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X