»   »  ಜಗ್ಗೇಶ್, ಅಂಬರೀಷ್ ಅಭಿಮಾನಿಗಳ ಮಾತಿನ ಕಾದಾಟ

ಜಗ್ಗೇಶ್, ಅಂಬರೀಷ್ ಅಭಿಮಾನಿಗಳ ಮಾತಿನ ಕಾದಾಟ

Posted By:
Subscribe to Filmibeat Kannada
Jaggesh
ಕೆಲದಿನ ತಣ್ಣಗಾಗಿದ್ದ ನಟ ಜಗ್ಗೇಶ್ ಮತ್ತು ಅಂಬರೀಷ್ ನಡುವಿನ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. ಈ ಬಾರಿ ಜಗ್ಗೇಶ್ ಅಭಿಮಾನಿಗಳು ಮತ್ತು ಅಂಬರೀಷ್ ಬೆಂಬಲಿಗರು ಮಾತಿನ ಚಕಮಕಿ ನಡೆಸಿದ್ದಾರೆ. ರಾಜಕೀಯ ಅಂಗಳದಲ್ಲಿ ಕಾಲಿಟ್ಟಿರುವ ಇಬ್ಬರೂ ನಟರ ನಡುವಿನ ವಿವಾದ ಒಬ್ಬರನ್ನೊಬ್ಬರು ದ್ವೇಷಿಸುವ ಹಂತಕ್ಕೆ ಬೆಳೆದು ನಿಂತಿದೆ.

'ಜಗ್ಗೇಶ್ ಎಂಥವನೆಂದು ನನಗೆ ಗೊತ್ತು. ನಾನೆಂಥವನೆಂದು ಜಗ್ಗೇಶ್ ಗೂ ಗೊತ್ತು' ಎಂದು ಮಂಡ್ಯದಲ್ಲಿ ಅಂಬರೀಷ್ ಹೇಳಿದ್ದು ಜಗ್ಗೇಶ್ ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸಿತ್ತು. ಈ ಕುರಿತು ಪ್ರತಿಭಟನೆ ನಡೆಸಲು ಜಗ್ಗೇಶ್ ಅಭಿಮಾನಿಗಳ ಸಂಘ ರಾಜಾಜಿನಗರದಲ್ಲಿರುವ ನವರಂಗ್ ಥಿಯೇಟರ್ ಬಳಿ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಇದು ತಿಳಿಯುತ್ತಿದ್ದಂತೆ ಅಂಬಿ ಅಭಿಮಾನಿಗಳು ಕೂಡ ನವರಂಗ್ ಥಿಯೇಟರ್ ಬಳಿ ಜಮಾಯಿಸಿದ್ದಾರೆ. ಆಗ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ತೀವ್ರ ಸ್ವರೂಪ ಪಡೆಯುವ ಮೊದಲೇ ಪೊಲೀಸರು ಉದ್ರಿಕ್ತ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಆದರೂ, ತಣ್ಣಗಾಗದ ಜಗ್ಗೇಶ್ ಅಭಿಮಾನಿಗಳು ಜಗ್ಗೇಶ್ ಚಿತ್ರಗಳಿಗೆ ನಿರ್ಬಂಧ ಹೇರಿದರೆ ಅಂಬರೀಷ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನಾ ರ‌್ಯಾಲಿ ನಡೆಸುವುದಾಗಿ ಬೆದರಿಕೆ ಹಾಕಿದರು.

'ನನ್ನ ಪಾಲಿಗೆ ಅಂಬರೀಷ್ ಸರ್ವೋತ್ತಮ ನಾಯಕನಲ್ಲ, ಡಾ ರಾಜ್ ಅವರು' ಎಂದು ಹೇಳಿ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಪಕ್ಷಾಂತರ ಮಾಡಿರುವ ನಟ ಜಗ್ಗೇಶ್ ವಿವಾದವನ್ನು ಹುಟ್ಟು ಹಾಕಿದ್ದರು. ಈ ಮಾತುಗಳಿಂದ ಉದ್ರಿಕ್ತರಾಗಿದ್ದ ಅಂಬರೀಷ್ ಅಭಿಮಾನಿಗಳು ಬಹಿರಂಗ ಕ್ಷಮೆಯಾಚನೆ ಮಾಡಬೇಕೆಂದು ಪಟ್ಟುಹಿಡಿದಿದ್ದರು. ಜಗ್ಗೇಶ್ ಅಂಬರೀಷ್ ಅವರಿಂದಲೇ ಬೆಳೆದಿದ್ದಾರೆ. ಈಗ ಅವರ ವಿರುದ್ಧ ಮಾತಾಡುತ್ತಿದ್ದಾರೆ. ಅಂಬರೀಷ್ ಮನೆ ಬಾಗಿಲು ಕಾಯುವಾಗ ಅವರು ಸರ್ವೋತ್ತಮ ನಾಯಕನಲ್ಲ ಎಂದಿರುವುದು ಮರೆತುಹೋಗಿತ್ತಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಪೂರಕ ಓದಿಗೆ

ಜಗ್ಗೇಶ್ ವಿರುದ್ಧ ಸಿಡಿದೆದ್ದ ಅಂಬಿ ಅಭಿಮಾನಿಗಳು
ಜಗ್ಗೇಶ್, ಅಂಬರೀಶ್ ಈಗ ಒಡೆದ ಹೃದಯಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada