»   »  ಜೆನ್ನಿ ಮತ್ತು ಯುವರಾಜ್ ಸಿಂಗ್ ನಡುವೆ ಟ್ವೆಂಟಿ20!

ಜೆನ್ನಿ ಮತ್ತು ಯುವರಾಜ್ ಸಿಂಗ್ ನಡುವೆ ಟ್ವೆಂಟಿ20!

Subscribe to Filmibeat Kannada
ನಟಿ ಜೆನ್ನಿಫರ್ ಕೊತ್ವಾಲ್ ಮತ್ತು ಕ್ರಿಕೆಟಿಗೆ ಯುವರಾಜ್ ಸಿಂಗ್ ನಡುವೆ ಟ್ವೆಂಟಿ20 ಮ್ಯಾಚ್ ನಡೆದಿದೆ ಎಂಬ ಗುಸುಗುಸು ಸುದ್ದಿ ಹಬ್ಬಿದೆ! ಇಂಗ್ಲೆಂಡ್ ಗೆ ತೆರಳುವುದಕ್ಕೂ ಮುನ್ನ ಯುವಿ ಸ್ಪೋರ್ಟ್ಸ್ ಬಾರ್ ನಲ್ಲಿ ಜೆನ್ನಿಫರ್ ಕೊತ್ವಾಲ್ ರನ್ನು ಭೇಟಿಯಾಗಿದ್ದ ಎಂಬ ಮಾತುಗಳಿಗೆ ಬಲ ಬಂದಿದೆ.

ನನ್ನ ಮತ್ತು ಯುವಿ ನಡುವೆ ಯಾವುದೇ ಕಣ್ಣಾಮುಚ್ಚಾಲೆ, ಐಸ್ ಪೈಸ್ ನಡೆದಿಲ್ಲ. ಇಷ್ಟಕ್ಕೂ ಜನ ಯಾಕೆ ಈ ರೀತಿಯ ಸುದ್ದಿಗಳನ್ನು ಹಬ್ಬಿಸುತ್ತಾರೋ. ಅದರಿಂದ ಅವರಿಗಾಗುವ ಲಾಭವಾದರೂ ಏನು. ಇದುವರೆಗೂ ನಾನು ಯುವಿಯನ್ನು ಮುಖಾಮುಖಿ ಭೇಟಿಯಾಗಿಲ್ಲ ಎಂದು ಜೆನ್ನಿ ಅಲವತ್ತ್ತುಕೊಂಡಿದ್ದಾರೆ.

ನಾನು ಫುಟ್ ಬಾಲ್ ನ ಹುಚ್ಚು ಅಭಿಮಾನಿ. ಪಂದ್ಯಾವಳಿಯನ್ನು ನೋಡುತ್ತಿರಬೇಕಾದರೆ, ಯುವಿಯೂ ಅಲ್ಲಿಗೆ ಬಂದಿದ್ದ ನನ್ನನು ಕಂಡು ಹತ್ತಿರ ಬಂದು ಹಾಯ್ ಎಂದ. ನಾನೂ ವಿಶ್ ಮಾಡ್ತೆ ಅಷ್ಟೇ. ಇಷ್ಟೆಲ್ಲಾ ರಾದ್ಧಾಂತ ಮಾಡ್ತಾರೆ ಅಂತ ಗೊತ್ತಿರಲಿಲ್ಲ.ಜೆನ್ನಿಯನ್ನು ಯುವಿ ವಿಶ್ ಮಾಡಿದ ಸುದ್ದಿ ಗಾಸಿಪ್ ಅಂಕಣಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಬಿರುಗಾಳಿ ಸುಂಟರಗಾಳಿಯಾಗಿ ಜೆನ್ನಿ ಮನಸ್ಸನ್ನೂ ಚಿಂದಿ ಉಡಾಯ್ಸಿಸಿದೆ. ಈಗ ಆಕೆ ನನ್ನಲಿ ನಾನಿಲ್ಲ...ಬಹಳಷ್ಟು ಡಿಸ್ಟರ್ಬ್ ಆಗಿದ್ದಾರಂತೆ. ಜಾಹೀರಾತು ಚಿತ್ರೀಕರಣದಲ್ಲಿ ಮುಂಬೈನಲ್ಲಿ ಸದ್ಯಕ್ಕೆ ಬಿಜಿಯಾಗಿದ್ದೇನೆ. ಬಿಸಿಲೆ ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಶೀಘ್ರದಲ್ಲೇ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದೇನೆ ಎನ್ನುತ್ತಾರೆ ಜೆನ್ನಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada