»   »  ಹೇಮಂತ್ ಹೆಗಡೆ ಚಾಪ್ಲಿನ್ ಮೂರ್ತಿ ಕನಸು ಭಗ್ನ!

ಹೇಮಂತ್ ಹೆಗಡೆ ಚಾಪ್ಲಿನ್ ಮೂರ್ತಿ ಕನಸು ಭಗ್ನ!

Subscribe to Filmibeat Kannada
Director Hemanth Hegde
'ಹೌಸ್ ಫುಲ್' ಚಿತ್ರಕ್ಕಾಗಿ ನಿರ್ದೇಶಕ ಹೇಮಂತ್ ಹೆಗಡೆ 62 ಅಡಿ ಎತ್ತರದ ಚಾರ್ಲಿ ಚಾಪ್ಲಿನ್ ಮೂರ್ತಿಯನ್ನು ನಿರ್ಮಿಸುತ್ತಿರುವುದು ಗೊತ್ತೇ ಇದೆ. ಇನ್ನೋವೇಟೀವ್ ಫಿಲ್ಮ್ ಸಿಟಿಯಲ್ಲಿ ಚಾಪ್ಲಿನ್ ಮೂರ್ತಿ ನಿರ್ಮಾಣ ಹಂತದಲ್ಲಿದೆ. ಈಗ ಚಾರ್ಲಿ ಚಾಪ್ಲಿನ್ ಮೂರ್ತಿಗೆ ಇನ್ನೊಂದು ವಿಘ್ನ ಎದುರಾಗಿದೆ!

ಇತ್ತೀಚೆಗೆ 'ಹೌಸ್ ಫುಲ್' ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹೇಮಂತ್ ಮಾತನಾಡುತ್ತಾ, ಚಾರ್ಲಿ ಚಾಪ್ಲಿನ್ ಮೂರ್ತಿ ಇನ್ನೂ ನಿರ್ಮಾಣವಾಗಿಲ್ಲ. ಕಾರಣ ವಿಮಾನಯಾನ ಪ್ರಾಧಿಕಾರ ಮೂರ್ತಿಯನ್ನು 40 ಅಡಿ ಎತ್ತರಕ್ಕಷ್ಟೇ ನಿರ್ಮಿಸಲು ಅನುಮತಿ ನೀಡಿದೆ ಎಂದರು. ಆದರೆ ಹೇಮಂತ್ ನಿರ್ಮಿಸಲು ಹೊರಟಿರುವುದು 62 ಅಡಿ ಎತ್ತರದ ಮೂರ್ತಿ.

ಜೂನ್ 26ರಂದು ಹೌಸ್ ಫುಲ್ ಚಿತ್ರವನ್ನ್ನು ಬಿಡುಗಡೆಗೆ ಮಾಡಲು ಸಿದ್ಧತೆ ನಡೆಯುತ್ತಿದೆ. ಚಿತ್ರದಒಂದು ಹಾಡನ್ನು ಚಾಪ್ಲಿನ್ ಮೂರ್ತಿ ಎದುರಲ್ಲೇ ಚಿತ್ರಿಸುತ್ತಾರೆ. ಈ ವಿಶೇಷ ಹಾಡು ಚಿತ್ರೀಕರಿಸದ ಹೊರತು ಹೌಸ್ ಫುಲ್ ಪೂರ್ಣಗೊಳ್ಳುವುದಿಲ್ಲ. ''ಶಾಶ್ವತವಾದ ಮೂರ್ತಿಯೊಂದನ್ನು ನಿರ್ಮಿಸಬೇಕೆಂದಿದ್ದೇವೆ. ಈ ಕೆಲಸಕ್ಕಾಗಿ ಆರು ತಿಂಗಳ ಸಮಯ ಬೇಕಾಗುತ್ತದೆ. ಆದರೆ ಈಗಾಗಲೇ ಚಿತ್ರ ಬಿಡುಗಡೆ ಒಂಬತ್ತು ತಿಂಗಳಷ್ಟು ಮುಂದೂಡಲ್ಪಟ್ಟಿದೆ ಎನ್ನುತ್ತಾರೆ ಹೇಮಂತ್.

ಈ ಎಲ್ಲಾ ಸಮಸ್ಯೆಗಳು ತಲೆದೋರಿರುವ ಕಾರಣ ಚಾಪ್ಲಿನ್ ಹಾಡನ್ನೇ ಕೈ ಬಿಡುತ್ತಿದ್ದಾರೆ ಹೇಮಂತ್. ಹೌಸ್ ಫುಲ್ ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡು ಶತಕ ಬಾರಿಸಿದರೆ ಆಗ ಈ ವಿಶೇಷ ಹಾಡನ್ನು ಚಿತ್ರದಲ್ಲಿ ಸೇರಿಸಲು ನಿರ್ಧರಿಸಿದ್ದಾರೆ. ಇಷ್ಟೆಲ್ಲಾ ವಿವಾದಕ್ಕೆ ಕಾರಣವಾದ ಚಾಪ್ಲಿನ್ ಮೂರ್ತಿಯೇ ಚಿತ್ರದ ಪ್ರಧಾನ ಆಕರ್ಷಣೆ. ಅದೇ ಇಲ್ಲದಿದ್ದರೆ ಚಿತ್ರ ಶತಕ ಬಾರಿಸುವುದು ಅನುಮಾನ ಎಂಬುದು ಹಲವರ ಅಭಿಪ್ರಾಯ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada