For Quick Alerts
  ALLOW NOTIFICATIONS  
  For Daily Alerts

  ವಿವಾದದ ಸುಳಿಯಲ್ಲಿ ಗೋವಿಂದಾಯ ನಮಃ ಚಿತ್ರ

  By Rajendra
  |

  ಕನ್ನಡ ಚಿತ್ರೋದ್ಯಮದಲ್ಲಿ ಇನ್ನೂ ಹೊಗೆಯಾಡುತ್ತಿರುವ 'ಭೀಮಾ ತೀರದಲ್ಲಿ' ಚಿತ್ರ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅಷ್ಟರಲ್ಲಾಗಲೇ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ವಿವಾದ ತಲೆಯೆತ್ತಿದೆ. ಈಗಾಗಲೆ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ 'ಗೋವಿಂದಾಯ ನಮಃ' ಚಿತ್ರ ಕಥೆ ಕದ್ದ ಆರೋಪಕ್ಕೆ ಗುರಿಯಾಗಿದೆ.

  ತಮ್ಮ ಕಥೆಯನ್ನು ಕದ್ದು ಸಿನಿಮಾ ಮಾಡಿದ್ದಾರೆ ಎಂದು ನಿರ್ದೇಶಕ ವೇಣುಗೋಪಾಲ್ ಎಂಬುವವರು ಆರೋಪಿಸಿದ್ದಾರೆ. 2006ರಲ್ಲಿ ತೆರೆಕಂಡ 'ಅವ್ನಂದ್ರೆ ಅವನೇನಾ' ಚಿತ್ರವನ್ನು ಕದ್ದು 'ಗೋವಿಂದಾಯ ನಮಃ' ಚಿತ್ರ ಮಾಡಿದ್ದಾರೆ ಎಂಬುದು ಅವರ ಆರೋಪ.

  ಈ ಸಂಬಂಧ ಅವರು ನಿರ್ದೇಶಕರ ಸಂಘಕ್ಕೂ ದೂರು ನೀಡಿದ್ದಾರೆ. ತಮ್ಮ ಅವ್ನಂದ್ರೆ ಅವನೇನಾ ಚಿತ್ರದ ಡಿವಿಡಿ ಪ್ರತಿಯೊಂದನ್ನೂ ದೂರಿನ ಜೊತೆಗೆ ಲಗತ್ತಿಸಿ ಕೊಟ್ಟಿದ್ದಾರೆ. ನಿರ್ದೇಶಕರ ಸಂಘ ಸತ್ಯಾಸತ್ಯತೆಗಳನ್ನು ಇನ್ನಷ್ಟೇ ನಿರ್ಧರಿಸಬೇಕಾಗಿದೆ.

  ಏತನ್ಮಧ್ಯೆ ಅನಂತನಾಗ್ ಮುಖ್ಯಭೂಮಿಕೆಯಲ್ಲಿದ್ದ 'ಸಮಯಕ್ಕೊಂದು ಸುಳ್ಳು' ಚಿತ್ರವನ್ನೂ 'ಗೋವಿಂದಾಯ ನಮಃ' ಚಿತ್ರ ಬಹುತೇಕ ಹೋಲುತ್ತದೆ ಎಂಬ ಮಾತುಗಳೂ ಕೇಳಿಬಂದಿವೆ. ಈ ಬಗ್ಗೆ 'ಗೋವಿಂದಾಯ ನಮಃ' ಚಿತ್ರ ತಂಡ ಇನ್ನೂ ಪ್ರತಿಕ್ರಿಯಿಸಿಲ್ಲ. (ಒನ್‌ಇಂಡಿಯಾ ಕನ್ನಡ)

  English summary
  Kannada movie Govindaya Namaha faces Plagiarism Charges. Director Venugopal has claims that 'Govindaya Namaha' has a lot similar to his film Avnandre Avanena (2006). The director lodged a complaint with the directors association.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X