»   » ಹಿಂದಿಗೆ ಆಟೋ ಶಂಕರ್ : ಕೆರಳಿ ಕೆಂಡವಾದಳು ಶಿಲ್ಪಾ!

ಹಿಂದಿಗೆ ಆಟೋ ಶಂಕರ್ : ಕೆರಳಿ ಕೆಂಡವಾದಳು ಶಿಲ್ಪಾ!

Posted By: Staff
Subscribe to Filmibeat Kannada

ನೀಳ ಕಾಲ್ಗಳ ಸುಂದರಿ ಶಿಲ್ಪಾ ಶೆಟ್ಟಿಗೆ ಸಕತ್ತು ಸಿಟ್ಟು ಬಂದಿದೆ. ತಮ್ಮ ಗಮನಕ್ಕೇ ತಾರದೇ ಕನ್ನಡದ 'ಆಟೋ ಶಂಕರ್' ಚಿತ್ರವನ್ನು ಹಿಂದಿಗೆ ಡಬ್ ಮಾಡಿ, ಬಿಡುಗಡೆ ಮಾಡುತ್ತಿರುವುದು ಅವರನ್ನು ಕೆರಳಿಸಿದೆ.

'ಶಿಲ್ಪಾ ದ ಬಿಗ್ ಡಾನ್'ಹೆಸರಲ್ಲಿ 2005ರಲ್ಲಿ ಬಿಡುಗಡೆಯಾಗಿದ್ದ 'ಆಟೋ ಶಂಕರ್' ಚಿತ್ರವನ್ನು ಹಿಂದಿಗೆ ಡಬ್ ಮಾಡಲಾಗಿದೆ. ಸಿನಿಮಾ ಪತ್ರಿಕೆಗಳಲ್ಲಿ ಚಿತ್ರದ ಪೋಸ್ಟರ್ ಗಳನ್ನು ಕಂಡಾಗ ಶಿಲ್ಪಾಗೆ ಶಾಕ್ ಆಗಿದೆ. ಅವರ ಬಿಗ್ ಬ್ರದರ್ ಖ್ಯಾತಿಯನ್ನು ಬಳಸಿಕೊಂಡು, ದುಡ್ಡು ಮಾಡಿಕೊಳ್ಳುವ ಹುನ್ನಾರ ಈ ಪ್ರಯತ್ನದ ಹಿಂದಿದೆ ಎಂದು ಶಿಲ್ಪಾರ ಪ್ರಚಾರಕರ್ತ ದಲೆ ಭಗವಾಗ್ಬರ್ ದೂರಿದ್ದಾರೆ.

ಆಟೋ ಶಂಕರ್ ಚಿತ್ರದಲ್ಲಿ ಲೇಡಿ ಡಾನ್ ಪಾತ್ರದಲ್ಲಿ ಶಿಲ್ಪಾ ಕಾಣಿಸಿಕೊಂಡಿದ್ದು, ಉಪೇಂದ್ರ ಚಿತ್ರದ ನಾಯಕ. ರಾಧಿಕಾ, ಸುಧಾರಾಣಿ ತಾರಾಬಳಗದಲ್ಲಿದ್ದಾರೆ. ಡಿ.ರಾಜೇಂದ್ರ ಬಾಬು ನಿರ್ದೇಶನದ ಈ ಚಿತ್ರಕ್ಕೆ ದುಡ್ಡು ಸುರಿದು, ನಷ್ಟ ಅನುಭವಿಸಿದ ನಿರ್ಮಾಪಕರ ಹೆಸರು; ಕೋಟಿ ರಾಮು.!

ಆಟೋ ಚಾಲಕ ಶಂಕರ್ ಮಧ್ಯಮ ವರ್ಗಕ್ಕೆ ಸೇರಿದವನು. ಬಡವರಿಗೆ ಹೆಚ್ಚಿನ ಬಡ್ಡಿಗೆ ಹಣ ಕೊಟ್ಟು ಹಿಂಸಿರುವ ಕೊಬ್ಬಿನ ನಾಯಕಿ(ಶಿಲ್ಪಾ)ಗೆ ಪಾಠ ಕಲಿಸುವುದು.. ಪ್ರೇಮ ಸಲ್ಲಾಪ.. ಇದು ಚಿತ್ರದ ಸಾರಾಂಶ. ಈ ಚಿತ್ರದ ಛಾಯಾಚಿತ್ರವೊಂದು ವಿವಾದಕ್ಕೆ ಕಾರಣವಾಗಿದ್ದ ಅಂಶ ಇಲ್ಲಿ ಉಲ್ಲೇಖನೀಯ. ಶಿಲ್ಪಾ ಶೆಟ್ಟಿಯ ಅಸಭ್ಯಕರ ಛಾಯಾಚಿತ್ರವನ್ನು ಮಧುರೈ ಮೂಲದ ವಕೀಲ ಶೆಟ್ಟಿ ಖಂಡಿಸಿದ್ದರು. ಶಿಲ್ಪಾ ವಿರುದ್ಧ ಕೋರ್ಟಿನಲ್ಲಿ ಅವರು ದೂರು ದಾಖಲಿಸಿದ್ದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada