ನಯನತಾರಾ ಮತಾಂತರ ಶಾಕ್ ನಲ್ಲಿ ಕ್ರೈಸ್ತರು
ಸಿನಿಮಾ ತಾರೆ ನಯನತಾರಾ ಕ್ರೈಸ್ತ ಧರ್ಮಕ್ಕೆ ಗುಡ್ ಬೈ ಹೇಳಿ ಹಿಂದು ಧರ್ಮಕ್ಕೆ ಕೈ ಮುಗಿದಿದ್ದು ಕೇರಳದ ಕ್ರೈಸ್ತರನ್ನು ಕೆರಳಿಸಿದೆ. ಮತಾಂತರ ಹೆಸರಿನಲ್ಲಿ ಕ್ರೈಸ್ತ ಸಿದ್ಧಾಂತವನ್ನು ಬಲಿಕೊಟ್ಟ ಡಯಾನಾಗೆ ಬಹಿಷ್ಕಾರ ಏಕೆ ಹೇರಬಾರದು ಎಂದು ಮಂಡಿಯೂರಿ ಪ್ರಶ್ನಿಸಲಾಗುತ್ತಿದೆ.
ಕೇರಳದ ಕಟ್ಟಾ ಬ್ಯಾಪ್ಟಿಸಮ್ ಕುಟುಂಬದಿಂದ ಬಂದಿರುವ ಡಯಾನಾ ಕುರಿಯನ್ ಅಲಿಯಾಸ್ ನಯನತಾರಾ ಮತಾಂತರ ಆಗಿರುವುದು ಕ್ರೈಸ್ತ ವಿರೋಧಿ ಕಾರ್ಯವಾಗಿದೆ. ಬೈಬಲ್ ನಲ್ಲಿ ಹೇಳಿರುವಂತೆ ಮದುವೆಯಾದ ಮೇಲೂ ಆಕೆ ಕ್ರೈಸ್ತ ಸಮುದಾಯ ಪೂಜೆ, ಬಲಿ ಪೂಜೆ, ಸಮೂಹ ಪ್ರಾರ್ಥನೆಯಲ್ಲಿ ಭಾಗವಹಿಸಬಹುದಿತ್ತು.
ಆದರೆ ಆಕೆ ಹಿಂದೂ ಧರ್ಮವನ್ನು ಅನುಸರಿಸಿ ತಪ್ಪು ಮಾಡುತ್ತಿರುವುದು ನಮಗೆ ಶಾಕ್ ತಂದಿದೆ ಎಂದು ಕ್ರೈಸ್ತ ಸಂಘಟನೆಯ ಮುಖ್ಯಸ್ಥ ಇನಿಯಾನ್ ಜಾನ್ ಹೇಳಿದ್ದಾರೆ.
ಇದಲ್ಲದೆ ಇನ್ನೊಬ್ಬರ ವಸ್ತುವನ್ನು ಕಸಿದುಕೊಳ್ಳುವುದು ಮಹಾಪಾಪ ಎಂದು ಬೈಬಲ್ ನಲ್ಲಿ ಹೇಳಿದೆ. ಪ್ರಭುದೇವ ಅವರ ಮೊದಲ ಪತ್ನಿ ರಾಮಲತಾ ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಈಗ ನಯನತಾರಾಗೆ ಸವತಿಯಾಗಿರುವ ಕಾರಣ ಆಕೆಯ ಕೋಪಕ್ಕೆ ನಯನತಾರಾ ಗುರಿಯಾಗಬೇಕಾಗುತ್ತದೆ ಎಂದು ಜಾನ್ ಹೇಳಿದ್ದಾರೆ.
ಆದರೆ, ಕೇರಳ ಕ್ರೈಸ್ತರ ಆಕ್ರೋಶದ ನುಡಿಗಳಿಗೆ ಪ್ರಭುದೇವ ಆಗಲಿ, ನಯನತಾರಾ ಆಗಲಿ ಉತ್ತರ ನೀಡಿಲ್ಲ. ಮುಂಬೈನಲ್ಲಿ ಮದುವೆಯಾಗಿ, ಸಿಂಗಪುರದಲ್ಲಿ ಇಬ್ಬರು ನೆಲೆಸುವ ಇರಾದೆ ಎನ್ನಲಾಗಿದೆ. ಬಲವಂತದ ಮತಾಂತರ ಕ್ರಿಮಿನಲ್ ಕೃತ್ಯಕ್ಕೆ ಸಮವಂತೆ.


Click it and Unblock the Notifications











