»   » ಶ್ಯಾಮ್ ಕ್ಷಮೆ ಯಾಚಿಸಿದ ನಿರ್ಮಾಪಕ ಗಾಂಧಿ

ಶ್ಯಾಮ್ ಕ್ಷಮೆ ಯಾಚಿಸಿದ ನಿರ್ಮಾಪಕ ಗಾಂಧಿ

Posted By:
Subscribe to Filmibeat Kannada

ಹೂ ಚಿತ್ರದ ವಿಮರ್ಶೆಯನ್ನು 'ಸರಿಯಾಗಿ ಬರೆದಿಲ್ಲ' ಎಂದು ಸಿನಿ ಪತ್ರಕರ್ತ ಶ್ಯಾಮ್ ಗೆ ಧಮಕಿ ಹಾಕಿದ ನಿರ್ಮಾಪಕ ದಿನೇಶ್ ಗಾಂಧಿ, ಗುರುವಾರ ಗ್ರೀನ್ ಹೌಸ್ ನಲ್ಲಿ ಪ್ರತ್ಯಕ್ಷರಾದರು. ಕಪ್ಪು ದಿರಿಸಿನಲ್ಲಿದ್ದ ಗಾಂಧಿ, ಶ್ವೇತ ವಸ್ತ್ರಧಾರಿ ಶ್ಯಾಮ್ ಅವರಿಗೆ ಸ್ಸಾರಿ ಎಂದರು.

ಶ್ಯಾಮ್ ಪ್ರಸಾದ್ ಮೇಲೆ ಕೆಟ್ಟ ಕೆಟ್ಟ ಪದ ಬಳಸಿ ಬೈಯ್ದು ಬಿಟ್ಟೆ. ನನ್ನ ಕೋಪ ನಿಗ್ರಹ ಮಾಡಿಕೊಳ್ಳಲಾಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕ್ಷಮೆಯಾಚನೆ ಪತ್ರವನ್ನು ಬೆಂಗಳೂರು ಮಿರರ್ ಪತ್ರಕರ್ತ ಶ್ಯಾಂಗೆ ನೀಡಿದರು.

ಪತ್ರ ಪಡೆದ ಶ್ಯಾಂ ಮಾತನಾಡಿ, ನಾನು ನನ್ನ ಸಹದ್ಯೋಗಿಗಳು ಹಾಗೂ ನಮ್ಮ ಕಚೇರಿ ಮುಖ್ಯಸ್ಥರೊಡನೆ ಮಾತನಾಡಿ ಚರ್ಚಿಸಿ ದಿನೇಶ್ ಗಾಂಧಿ ವಿರುದ್ಧದ ಕೇಸ್ ವಾಪಾಸ್ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ಹಿರಿಯ ಪತ್ರಕರ್ತ ಎಎಸ್ ಮೂರ್ತಿ ಮಾತನಾಡಿ, ಗಾಂಧಿಯೊಳಗೆ ಗೋಡ್ಸೆ ಇರಬಾರದು ಎಂದರು. ಗಾಂಧಿ ಕ್ಷಮೆಯಾಚನೆ ಕನ್ನಡ ಚಿತ್ರರಂಗದ ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚೆಗೆ ನಿರ್ಮಾಪಕ ದಿನೇಶ್ ಗಾಂಧಿ ಧೋರಣೆಯನ್ನು ಖಂಡಿಸಿ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಮೂಹ ಒಂದು ತಾತ್ಕಾಲಿಕ ಸಮಿತಿಯ ರಚಿಸಿ ಹೋರಾಟ ನಡೆಸಲು ಸದಾಶಿವ ಶೆಣೈ ನೇತೃತ್ವ ಪತ್ರಕರ್ತರು ನಿರ್ಣಯ ಕೈಗೊಂಡಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada