For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಬಾರ್ನಾಗೆ ಮದುವೆಯೇ ಸದ್ಯಕ್ಕೆ ಬೇಡ್ವಂತೆ

  |

  ಅಚ್ಚಕನ್ನಡದ ನಟಿ ರಮ್ಯಾ ರಮ್ಯಾ ಬಾರ್ನೆ ಮೂರ್ನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಅದೇಕೋ ಆರಕ್ಕೇರಲೇ ಇಲ್ಲ, ಹಾಗೇ ಮೂರಕ್ಕಿಳಿಯಲೂ ಇಲ್ಲ. ಸದ್ಯಕ್ಕೆ ಶ್ರೀನಗರ ಕಿಟ್ಟಿಯ 'ಅನಾರ್ಕಲಿ' ಚಿತ್ರದ ನಾಯಕಿಯರಲ್ಲೊಬ್ಬರು ರಮ್ಯಾ ಬಾರ್ನಾ. ಅವರನ್ನು ಮಾತನಾಡಿಸಿ ಮದುವೆ ಬಗ್ಗೆ ಕೇಳಿದರೆ "ಸದ್ಯಕ್ಕೆ ಮದುವೆಯಾಗುವ ಯೋಚನೆಯೇ ಇಲ್ಲ" ಎಂದಿದ್ದಾರೆ.

  "ಸದ್ಯಕ್ಕೆ ನನ್ನ ತಲೆಯಲ್ಲಿರುವ ಯೋಚನೆ ಕೇವಲ ನಟನೆ ಮಾತ್ರ. ಮದುವೆಯ ಯೋಚನೆಯೂ ಇಲ್ಲ. ನಾನೀಗ ಸಾಧು ಕೋಕಿಲಾ ನಿರ್ದೇಶನದ 'ಅನಾರ್ಕಲಿ' ಚಿತ್ರದಲ್ಲಿ ನಟಿಸುತ್ತಿದ್ದೇನೆ. ಶ್ರೀನಗರ ಕಿಟ್ಟಿಗೆ ನಾಯಕಿಯಾಗಿ ಪ್ರಜ್ಞಾ ನಟಿಸುತ್ತಿದ್ದಾರೆ. ನನ್ನದೂ ಕೂಡ ಪ್ರಮುಖ ಪಾತ್ರ" ಎಂದಿದ್ದಾರೆ. ಹಾಗಿದ್ದರೆ ನಿಜವಾದ ಅನಾರ್ಕಲಿ ರಮ್ಯಾ ಅಲ್ಲವೇ ಎಂದರೆ ಅವರೂ ಹೌದು ಎನ್ನುತ್ತಿದೆ ಚಿತ್ರತಂಡ.

  "ನನಗೀಗಲೆ ಮದುವೆ ಬೇಡ, ಅದಕ್ಕೂ ಮೊದಲು ಸಾಧಿಸುವಂತದ್ದು ತುಂಬಾ ಇದೆ. ಸದ್ಯಕ್ಕೆ ಪಾರ್ಟಿ, ಫ್ರೆಂಡ್ಸ್ ಎಂದು ಆರಾಮವಾಗಿ ಓಡಾಡಿಕೊಂಡಿದ್ದೇನೆ. ಈಗಲೇ ಮದುವೆ ಮಾತೇಕೇ? ನಾನೀಗ ಮಾಡೆಲಿಂಗ್‌ ನಲ್ಲೂ ಮತ್ತೆ ಹೆಸರು ಮಾಡುತ್ತಿದ್ದೇನೆ. ಮದುವೆಗೇಕೆ ಅವಸರ?" ಎಂದಿದ್ದಾರೆ ರಮ್ಯಾ.

  ರಮ್ಯಾ ಬಾರ್ನಾ ಕನ್ನಡದ ನಾಲ್ಕು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಯೋಗರಾಜ್ ಭಟ್ಟರ ಪರಮಾತ್ಮ, ಪಂಚರಂಗಿ ಹಾಗೂ ಪುನೀತ್ ನಾಯಕರಾಗಿದ್ದ ಹುಡುಗರು. ಎಲ್ಲದರಲ್ಲೂ ರಮ್ಯಾ ಗಮನ ಸೆಳೆಯುವ ಪಾತ್ರವನ್ನೇ ಮಾಡಿದ್ದರು. ಆದರೂ ಅವಕಾಶಗಳಿಗೆ ಬರ. ಕೈಯಲ್ಲಿ ಅನಾರ್ಕಲಿ ಬಿಟ್ಟರೆ, ಒಂದು ರೂಪಾಯಿ ಎರಡು ಪ್ರೀತಿ ಎಂಬ ಇನ್ನೊಂದು ಚಿತ್ರವಿದೆ. ಅದಕ್ಕೆ ವಿಜಯ ರಾಘವೇಂದ್ರ ಹಾಗೂ ಸಂದೀಪ್ ನಾಯಕರು. (ಒನ್ ಇಂಡಿಯಾ ಕನ್ನಡ)

  English summary
  Actress Ramya Barna told that she wont get Marriage soon. She wants achieve more in filmland. Now acts with Srinagara Kitty's Anarkali.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X