»   » ಜಿಮ್ ಟ್ರೈನರ್ ಜತೆ ಲಕ್ಷ್ಮಿ ರೈ ಸ್ನೇಹಾನಾ ಪ್ರೀತಿನಾ?

ಜಿಮ್ ಟ್ರೈನರ್ ಜತೆ ಲಕ್ಷ್ಮಿ ರೈ ಸ್ನೇಹಾನಾ ಪ್ರೀತಿನಾ?

Subscribe to Filmibeat Kannada

ದಕ್ಷಿಣ ಭಾರತದ ಜನಪ್ರಿಯ ನಟಿ ಲಕ್ಷ್ಮಿ ರೈ ಹಾಗೂ ಆಕೆಯ ವ್ಯಾಯಾಮ ತರಬೇತುದಾರ ಪ್ರಸಾದ್ ಅವರೊಂದಿಗೆ ಸಂಬಂಧ ಇದೆ ಎಂಬ ಸುದ್ದಿಯನ್ನು ತಮಿಳು ದಿನಪತ್ರಿಕೆಯೊಂದು ಪ್ರಕಟಿಸಿ ಗುಲ್ಲೆಬ್ಬಿಸಿತ್ತು. ಆದರೆ ಈ ಸುದ್ದಿಯನ್ನು ಲಕ್ಷ್ಮಿ ರೈ ತಳ್ಳಿಹಾಕಿದ್ದಾರೆ. ಇದೊಂದು ಕೇವಲ ವದಂತಿ ಅಷ್ಟೆ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಲಕ್ಷ್ಮಿ ರೈ ಮಾತನಾಡುತ್ತಾ, ತಳಬುಡವಿಲ್ಲದ ಈ ರೀತಿಯ ಸುದ್ದಿಗಳನ್ನು ಯಾಕಾದರೂ ಬರೆಯುತ್ತಾರೊ ಗೊತ್ತಾಗುತ್ತಿಲ್ಲ. ಈ ರೀತಿಯ ವಿಚಾರಗಳನ್ನು ನನ್ನ ಬಳಿಯಾಗಲಿ ಅಥವಾ ನನ್ನ ಮ್ಯಾನೇಜರ್ ಬಳಿಯಾಗಲಿ ಮೊದಲು ಖಚಿತಪಡಿಸಿಕೊಳ್ಳಬೇಕು. ಆನಂತರವಷ್ಟೇ ಪ್ರಕಟಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

''ಪ್ರಸಾದ್ ನನ್ನ ವ್ಯಾಯಾಮ ತರಬೇತುದಾರ. ನಮ್ಮಿಬ್ಬರ ನಡುವೆ ವೃತ್ತಿಪರವಾದ ಸಂಬಂಧವಿದೆಯೇ ವಿನಃ ನೀವು ತಿಳಿದುಕೊಂಡಂತೆ ಇನ್ಯಾವುದೇ ಸಂಬಂಧವಿಲ್ಲ. ಪ್ರಸಾದ್ ಬಡತನದಿಂದ ಬಂದವರು. ಅವರಿಗೆ ಈಗಾಗಲೇ ಮದುವೆ ನಿಶ್ಚಯವಾಗಿದ್ದು ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ. ವಿನಾ ಕಾರಣ ಈ ರೀತಿಯ ವದಂತಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ'' ಎಂದು ಲಕ್ಷ್ಮಿ ರೈ ವಿನಂತಿಸಿಕೊಂಡಿದ್ದಾರೆ.

ಪ್ರಸ್ತುತ ಲಕ್ಷ್ಮಿ ರೈ ಹಿಂದಿ ಚಿತ್ರವೊಂದರಲ್ಲಿ ನಟಿಸುತ್ತಿದ್ದು ಆ ಚಿತ್ರದ ಪಾತ್ರಕ್ಕಾಗಿ ತೂಕ ಇಳಿಸಿಕೊಳ್ಳಬೇಕಾಗಿದೆ. ಹಾಗಾಗಿ ಪ್ರಸಾದ್ ಬಳಿ ವ್ಯಾಯಾಮ ತರಬೇತಿ ಪಡೆಯುತ್ತಿದ್ದರು. ಪ್ರಸಾದ್ ಮತ್ತು ಲಕ್ಷ್ಮಿ ರೈ ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಹಾಗಾಗಿ ಇಬರಿಬ್ಬರ ಬಗ್ಗೆ ಗುಸುಗುಸು ಮಾತುಗಳು ಕೇಳಿಬಂದಿದ್ದವು. ಕನ್ನಡದಲ್ಲಿ ವಾಲ್ಮೀಕಿ, ಸ್ನೇಹನಾ ಪ್ರೀತಿನಾ ಮತ್ತು ಮಿಂಚಿನ ಓಟ ಚಿತ್ರಗಳಲ್ಲಿ ಲಕ್ಷ್ಮಿ ರೈ ನಟಿಸಿರುವುದು ಗೊತ್ತೆ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada