For Quick Alerts
  ALLOW NOTIFICATIONS  
  For Daily Alerts

  ಚಾಲೇಂಜಿಂಗ್ ಸ್ಟಾರ್ ಕಿವಿ ಹಿಂಡಿದ ನಮ್ಮ ಓದುಗರು

  By Prasad
  |

  ಜನವರಿ 20ರತನಕ ನನಗೆ ಟೈ ಕೊಡಿ. ನಾನು ಜೈಲಿಗೆ ಹೋಗಲು ಕಾರಣರಾದವರ ಬಂಡವಾಳವನ್ನೆಲ್ಲಾ ಬಯಲು ಮಾಡುತ್ತೇನೆ. ಬೆಚ್ಚಿ ಬೀಳಿಸುವ ಸತ್ಯವನ್ನು ಹೊರಹಾಕುತ್ತೇನೆ ಎಂದು ಅಬ್ಬರಿಸಿ ಬೊಬ್ಬಿರಿದ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರು ಮಾಡಿರುವ ಜಾಲೇಂಜ್ ನಮ್ಮ ಓದುಗರ ಭಾರೀ ಟೀಕೆಗೆ ಕಾರಣವಾಗಿದೆ.

  ಮಧು ಎಂಬುವವರ ಪ್ರತಿಕ್ರಿಯೆ ಹೀಗಿದೆ ನೋಡಿ, "ಜೈಲಿನಲ್ಲಿದ್ದಾಗ ದರ್ಶನ್ ಇಲಿ ಮರಿ, ಹೊರಗೆ ಬಂದ ಮೇಲೆ ಹುಲಿ ಮರಿ. ಹೀರೊ ಮಕ್ಕಳು ಎಲ್ಲಾ ಕಡೆಯೂ ಹೀರೋಗಳೇ. ವಿಲನ್ ಮಕ್ಕಳು ಸಿನಿಮಾದಲ್ಲಿ ಮಾತ್ರ ಹೀರೊ, ನಿಜ ಜೀವನದಲ್ಲಿ ವಿಲನ್ ಅಂತಾ ದರ್ಶನ್ ಸಾಹೇಬರು ನಿರೂಪಿಸಿದ್ದಾರೆ."

  ತನ್ನ ಹೆಂಡತಿ ವಿಜಯಲಕ್ಷ್ಮಿಯನ್ನು ಸಾಯುವ ಹಾಗೆ ಹೊಡೆದಿದ್ದನ್ನು ಇಡೀ ಕನ್ನಡ ನಾಡಿನ ಜನತೆಯೇ ನೋಡಿದ್ದಾರೆ. ತಾವು ಕೂಡ ತಪ್ಪೊಪ್ಪಿಕೊಂಡು ಜನತೆಯ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಇನ್ನು ಮುಂದಾದರೂ ತಾಳ್ಮೆಯಿಂದ, ಕಾಮನ್ ಸೆನ್ಸ್ ಬಳಸಿಕೊಂಡು ಸುಖಮಯ ದಾಂಪತ್ಯ ನಡೆಸಿಕೊಂಡು ಹೋಗುವ ಬದಲು ಮತ್ತೆ ಈ ಪ್ರಕರಣವನ್ನು ಕೆಣಕುತ್ತಿರುವುದ್ಯಾಕೆ ಎಂದು ಪ್ರಶ್ನಿಸಿದ್ದಾರೆ.

  ತಾವು ಮಾಡಿದ ತಪ್ಪಿಗೆ ಬೇರೆಯವರ ಮೇಲೆ ಗೂಬೆ ಕೂಡಿಸುವುದ್ಯಾಕೆ. ದರ್ಶನ್ ತಾವು ಹಿಂದೆ ಪಡೆದ ಸಹಾಯಗಳನ್ನೆಲ್ಲ ಮರೆತಿದ್ದಾರೆ ಅಂತ ಕಾಣುತ್ತದೆ. ಹಣ ಕಣ್ಣ ಮುಂದೆ ತಾಂಡವವಾಡುವಾಗ ಮಾನವೀಯತೆ ಎಲ್ಲ ಮರೆತುಹೋಗಬಾರದು. ತಮ್ಮ ತಂದೆಗೆ ಮಾಡಿದ ಸಹಾಯವನ್ನು ಮತ್ತೆ ನೆನೆಸಿಕೊಂಡು ಎಚ್ಚರಿಕೆಯಿಂದ ಜೀವನ ನಡೆಸಬೇಕು ಎಂದು ನಟರಾಜ್ ಕಿವಿಮಾತು ಹೇಳಿ, ದರ್ಶನ್ ಕಿವಿ ಹಿಂಡಿದ್ದಾರೆ.

  English summary
  Readers response to outburst by actor Darshan on is jail episode. Darshan had said that he would expose all the truth behind this. Readers have lambasted the challenging star not to forget his past and asked him to think about the future.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X