»   »  ನಟ ದರ್ಶನ್‌ ಜಾಮೀನು ಅರ್ಜಿ ವಜಾ

ನಟ ದರ್ಶನ್‌ ಜಾಮೀನು ಅರ್ಜಿ ವಜಾ

Posted By:
Subscribe to Filmibeat Kannada
Actor Darshan bail plea rejected
ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ಹುಲಗಿ ಅವರು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ದರ್ಶನ್ ಪ್ರಕರಣ ಕೊಲೆ ಕೃತ್ಯ ಅಲ್ಲ ಗಾಯಗೊಳಿಸುವ ಕೃತ್ಯ ಎಂದು ವಿಜಯಲಕ್ಷ್ಮಿ ಪರ ವಕೀಲ ಕೃಷ್ಟೇಗೌಡ ವಾದಿಸಿದರು. ವಿಜಯಲಕ್ಷ್ಮಿ ಅವರ ಪ್ರಕರಣ ಕೊಲೆ ಕೃತ್ಯವಲ್ಲ (ಐಪಿಸಿ ಸೆಕ್ಷನ್ 307) ಅದು ಗಾಯಗೊಳಿಸುವ ಯತ್ನ (ಐಪಿಸಿ ಸೆಕ್ಷನ್ 324). ಹಾಗಾಗಿ ಅವರ ವಿರುದ್ಧ ದಾಖಲಿಸಿರುವ ಸೆಕ್ಷನ್ 307ರ ಬದಲಾಗಿ ಸೆಕ್ಷನ್ 324 ದಾಖಲಿಸಬೇಕು ಎಂದು ನ್ಯಾಯಾಲಯವನ್ನು ಕೋರಲಾಗಿತ್ತು.

ದರ್ಶನ್ ಪರಿಸ್ಥಿತಿ ಮುಂದೇನು ಎಂಬ ಪ್ರಶ್ನೆ ಕನ್ನಡ ಚಿತ್ರರಂಗ ಸೇರಿದಂತೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಅವರು 1ನೇ ಎಸಿಎಂಎಂ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸೆಷನ್ ಕೋರ್ಟ್‍ ಮೆಟ್ಟಿಲೇರಬೇಕಾಗುತ್ತದೆ. ಪ್ರಕರಣ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಇವಿಷ್ಟು ದರ್ಶನ್ ಮುಂದಿರುವ ಅವಕಾಶಗಳು. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Breaking News : 1st ACMM court rejects bail for wife beating Kannada actor Darshan. Who has been booked for allegedly assaulting wife Vijayalakshmi, will be heard by the first class additional chief magistrate court on Tuesday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada