»   » ತಾರೆ ವಿದ್ಯಾ ಬಾಲನ್ ಕಾಲ್ ಶೀಟ್ ರೇಟು ಬಾಪ್ ರೇ

ತಾರೆ ವಿದ್ಯಾ ಬಾಲನ್ ಕಾಲ್ ಶೀಟ್ ರೇಟು ಬಾಪ್ ರೇ

Posted By:
Subscribe to Filmibeat Kannada

ಬಾಲಿವುಡ್‌ನಲ್ಲಿ ಸಖತ್ ಹಾಟ್ ಬೆಡಗಿಯಾಗಿ ಹೊರಹೊಮ್ಮಿರುವ ವಿದ್ಯಾ ಬಾಲನ್ ಈಗ ಬಲು ಬೇಡಿಕೆಯ ನಟಿಯಾಗಿ ಚಲಾವಣೆಯಲ್ಲಿದ್ದಾರೆ. ತಮ್ಮ 'ದಿ ಡರ್ಟಿ ಪಿಕ್ಚರ್' ಯಶಸ್ವಿಯಾಗಿದ್ದೇ ತಡ ವಿದ್ಯಾ ಬಾಲನ್ ತಮ್ಮ ಸಂಭಾವನೆಯನ್ನು ಸಿಕ್ಕಾಪಟ್ಟೆ ಏರಿಸಿಕೊಂಡಿದ್ದಾರೆ.

ಬಾಲಿವುಡ್ ಮೂಲಗಳ ಪ್ರಕಾರ ಈಗ ವಿದ್ಯಾ ಬಾಲನ್ ಕಾಲ್ ಶೀಟ್ ಬೇಕಾದರೆ ರು.7 ಕೋಟಿ ಕೊಡಬೇಕು. ಈ ಮೂಲಕ ವಿದ್ಯಾ ಬಾಲನ್ ಬಾಲಿವುಡ್‌ನ ಅತ್ಯಧಿಕ ಸಂಭಾವನೆ ಪಡೆಯುವ ಕತ್ರಿನಾ ಕೈಫ್, ಕರೀನಾ ಕಪೂರ್ ಹಾಗೂ ಐಶ್ವರ್ಯ ರೈ ಬಳಗ ಸೇರ್ಪಡೆಯಾದಂತೆ ಆಗಿದೆ.

ಸದ್ಯಕ್ಕೆ ಈಕೆ ಮತ್ತೊಂದು ಬಾಲಿವುಡ್ ಚಿತ್ರಕ್ಕೆ ಸಹಿಹಾಕಿದ್ದಾರೆ. ಆ ಚಿತ್ರದ ಹೆಸರು 'ಶಾದಿ ಕೆ ಸೈಡ್ ಎಫೆಕ್ಟ್ಸ್'. ಈ ಚಿತ್ರಕ್ಕಾಗಿ ವಿದ್ಯಾ ರು.7 ಕೋಟಿ ಸಂಭಾವನೆಗೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಈ ಚಿತ್ರದ ನಾಯಕ ನಟ ಫರಾನ್ ಅಕ್ತರ್.

ವಿಚಿತ್ರ ಎಂದರೆ ನಾಯಕ ನಟನಿಗಿಂತಲೂ ನಾಯಕಿಯ ರೇಟು ಈ ಚಿತ್ರದಲ್ಲಿ ಜಾಸ್ತಿಯಾಗಿದೆ. ಈ ಕಾರಣಕ್ಕೆ 'ಶಾದಿ ಕೆ ಸೈಡ್ ಎಫೆಕ್ಟ್ಸ್' ಚಿತ್ರದ ನಿರ್ಮಪಕರು ಇನ್ನೊಮ್ಮೆ ಯೋಚಿಸಿ ಒಂದು ರೇಟು ಹೇಳಿ ಮೇಡಂ ಎಂದಿದ್ದಾರಂತೆ. ಆದರೆ ವಿದ್ಯಾ ಇದೇ ಫೈನಲ್ ರೇಟು ಎಂದಿದ್ದಾಗಿ ಸುದ್ದಿ. (ಏಜೆನ್ಸೀಸ್)

English summary
After her bolder act in ‘The Dirty Picture’ actress Vidya Balan hiked her acting fees upto Rs. 7 crore. It was lastly reported that the film makers of forthcoming film, ‘Shaadi ke Side Effects’ Vidya demands huge amount.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada