»   » ನಟರಾಜ್ ಥೇಟರ್ ನಲ್ಲಿ 'ಬಿಸಿನೆಸ್ಮೆನ್' ಕರವೇ ಪ್ರತಿಭಟನೆ

ನಟರಾಜ್ ಥೇಟರ್ ನಲ್ಲಿ 'ಬಿಸಿನೆಸ್ಮೆನ್' ಕರವೇ ಪ್ರತಿಭಟನೆ

Posted By:
Subscribe to Filmibeat Kannada
KaravE protest
ಕರ್ನಾಟಕದಲ್ಲಿ ಹಬ್ಬ ಹರಿದಿನಗಳು ಬಂದಾಗ ಚಿತ್ರಮಂದಿರಗಳಲ್ಲಿ ನೋಡಲು ಕನ್ನಡ ಸಿನಿಮಾಗಳು ಸಿಗುವುದಿಲ್ಲ. ನಟರಾಜ ಚಿತ್ರಮಂದಿರದಲ್ಲಿ ಕೂಡಲೇ ಬಿಸಿನೆಸ್ ಮನ್ ತೆಲುಗು ಚಿತ್ರ ತೆಗೆದು ಕನ್ನಡ ಚಿತ್ರ 'ಕೋ ಕೋ' ಹಾಕಿದರೆ ಒಳ್ಳೆಯದು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಗುಡುಗಿದೆ.


ಮಲ್ಲೇಶ್ವರದಲ್ಲಿರುವ ನಟರಾಜ್ ಚಿತ್ರಮಂದಿರಲ್ಲಿ ಕನ್ನಡ ಚಿತ್ರದ ಬದಲು ಮಹೇಶ್ ಬಾಬು ಅಭಿನಯದ ಬಿಸಿನೆಸ್ ಮನ್ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಇದನ್ನು ಖಂಡಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಶ್ರೀನಗರ ಕಿಟ್ಟಿ, ಪ್ರಿಯಾಮಣಿ ಅಭಿನಯದ ಕೋ.ಕೋ. ಚಿತ್ರವನ್ನು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಯೋಜಿಸಲಾಗಿತ್ತು. ಅದೇ ರೀತಿ ಲೂಸ್ ಮಾದ ಯಾನೆ ಯೋಗೀಶ್ ಹಾಗೂ ರಮ್ಯಾ ಅಭಿನಯದ ಚಿತ್ರಕ್ಕೆ ಕೂಡಾ ಪರಭಾಷೆ ಸಿನ್ಮಾ ಪೆಟ್ಟುಕೊಟ್ಟಿದೆ.

ಬಳ್ಳಾರಿಯಲ್ಲಿ ಕೂಡಾ ಚಿತ್ರಮಂದಿರ ಸಮಸ್ಯೆ ವಿವಾದ ಪ್ರತಿಭಟನೆ, ಘರ್ಷಣೆಗೆ ಕಾರಣವಾಗಿದೆ ಎಂಬ ಸುದ್ದಿಯಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ

English summary
Karnataka Rakshana Vedike staged protest against Businessman Telugu Movie today at Nataraj Theater Bangalore. Karave demanded Kannada original movies are not getting enough theater for release on time. Karnataka film chamber of commerce is keeping mum on the issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada