For Quick Alerts
  ALLOW NOTIFICATIONS  
  For Daily Alerts

  ರಾಖಿ ಸಾವಂತ್ ನೆತ್ತಿ ಮೇಲೆ ಕಾನೂನು ತೂಗು ಕತ್ತಿ

  By Rajendra
  |

  ಡ್ರಾಮಾ ಕ್ವೀನ್ ರಾಖಿ ಸಾವಂತ್ ನೆತ್ತಿ ಮೇಲೆ ಕಾನೂನು ಕತ್ತಿ ತೂಗುತ್ತಿದೆ. ಯಾವ ಕ್ಷಣದಲ್ಲಾದರೂ ಆಕೆ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ. 'ರಾಖಿ ಕ ಇನ್ಸಾಫ್' ಎಂಬ ರಿಯಾಲಿಟಿ ಶೋನ ಸ್ಪರ್ಧಿ ಲಕ್ಷ್ಮಣ್ ಪ್ರಸಾದ್ (24)ಅವರನ್ನು ರಾಖಿ 'ನಾಮರ್ದ' ಎಂದು ಜರಿದಿದ್ದರು. ಮನನೊಂದ ಆ ಯುವಕ ಆತ್ಮಹತ್ಯೆಗೆ ಶರಣಾಗಿದ್ದ.

  ಈ ಸಂಬಂಧ ಲಕ್ಷ್ಮಣ ಪ್ರಸಾದ್ ಸಂಬಂಧಿಕರು ರಾಖಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಝಾನ್ಸಿಯ ಪ್ರೇಮ್ ನಗರ್ ಪೊಲೀಸ್ ಠಾಣೆಯಲ್ಲಿ ರಾಖಿ ವಿರುದ್ಧ ದೂರನ್ನು ನೀಡಲಾಗಿದೆ. ರಾಖಿ ವಿರುದ್ಧ ಪೊಲೀಸರು ಏನು ಕ್ರಮ ಕೈಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

  ವೈವಾಹಿಕ ಸಮಸ್ಯೆಗಳಿಂದ ಕಂಗೆಟ್ಟಿದ್ದ ಲಕ್ಶ್ಮಣ್ ಪ್ರಸಾದ್ ಅಕ್ಟೋಬರ್ ತಿಂಗಳಲ್ಲಿ ತನ್ನ ಪತ್ನಿಯೊಂದಿಗೆ 'ರಾಖಿ ಕಾ ಇನ್ಸಾಫ್'(ರಾಖಿಯ ನ್ಯಾಯ) ಭಾಗವಹಿಸಿದ್ದ. ಈ ಕಾರ್ಯಕ್ರಮದಲ್ಲಿ ನೀನೊಬ್ಬ 'ನಾಮರ್ಧ', 'ನಪುಂಸಕ' ಎಂದು ಜರಿದಿದ್ದರು. ಈ ಕಾರ್ಯಕ್ರಮದಿಂದ ಪ್ರಭಾವಿತರಾದಲಕ್ಷ್ಮಣ್ ನೆರೆಹೊರೆಯವರು ಅವರನ್ನು ನಾಮರ್ಧ ಎಂದು ಹಂಗಿಸತೊಡಗಿದರು.

  ಕಡೆಗೆ ಆತ ಮನನೊಂದು ನ.10ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ತಾಯಿ ಅಲವತ್ತುಕೊಂಡಿದ್ದಾರೆ. ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಬ್ರಿಜ್ ಲಾಲ್ ಅವರು ಮಾತನಾಡುತ್ತಾ, ರಾಖಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರೇರಣೆ) ಪ್ರಕಾರ ಕ್ರಮಕೈಗೊಳ್ಳುತ್ತೇವೆ. ಹಾಗೆಯೇ ಸೆಕ್ಷನ್ 504 (ಉದ್ದೇಶಪೂರ್ವಕವಾಗಿ ಅವಮಾನ ಮಾಡಿ ಆತನ ಮನಃಶಾಂತಿಗೆ ಭಂಗ ತಂದಿದ್ದಕ್ಕೆ) ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X