For Quick Alerts
  ALLOW NOTIFICATIONS  
  For Daily Alerts

  ಕಠಾರಿವೀರ, ಗಾಡ್ ಫಾದರ್ ನಡುವೆ ಮೆಗಾ ಫೈಟ್

  By Rajendra
  |

  'ಕಠಾವೀರ ಸುರಸುಂದರಾಂಗಿ' ಹಾಗೂ 'ಗಾಡ್ ಫಾದರ್' ಚಿತ್ರಗಳ ಬಿಡುಗಡೆ ವಿವಾದ ಬಿಗಡಾಯಿಸಿದೆ. ಇವೆರಡೂ ಚಿತ್ರಗಳ ನಿರ್ಮಾಪಕರು ತಾ ಮುಂದು ನಾ ಮುಂದು ಎಂದು ಬಿಡುಗಡೆಗೆ ಪಟ್ಟು ಹಿಡಿದಿದ್ದು ಸಮಸ್ಯೆ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ.

  ಶುಕ್ರವಾರ (ಏ.13) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ. 'ಕಠಾರಿವೀರ' ಚಿತ್ರದ ನಿರ್ಮಾಪಕ ಮುನಿರತ್ನ ಹಾಗೂ 'ಗಾಡ್ ಫಾದರ್' ನಿರ್ಮಾಪಕ ಕೆ ಮಂಜು ಇಬ್ಬರೂ ತಮ್ಮ ಪಟ್ಟನ್ನು ಬಿಡದೆ ಸಭೆಯಿಂದ ವಾಕೌಟ್ ಮಾಡಿದರು.

  ಇಂದು ಸಂಜೆ 4 ಗಂಟೆಗೆ ಮತ್ತೆ ಮಾತುಕತೆಗ ಆಹ್ವಾನಿಸಲಾಗಿದೆ. ಸಭೆಯಲ್ಲಿ ಯಾವ ಚಿತ್ರ ಮೊದಲು ಬಿಡುಗಡೆ ಮಾಡಬೇಕು, ಎಷ್ಟು ದಿನಗಳ ಅಂತರದಲ್ಲಿ ಬಿಡುಗಡೆ ಮಾಡಬೇಕು ಎಂಬ ಬಗ್ಗೆ ಚರ್ಚಿಸಲಾಗುತ್ತದೆ. ಆದರೆ ಇಬ್ಬರೂ ನಿರ್ಮಾಪಕರು ತಮ್ಮ ಚಿತ್ರಗಳನ್ನು ಏ.27ರಂದೇ ಬಿಡುಗಡೆ ಮಾಡಲು ಪಟ್ಟುಹಿಡಿದಿದ್ದಾರೆ.

  ಮೊದಲು ಶೂಟಿಂಗ್ ಆರಂಭಿಸಿದ್ದು ನಾನು. ಹಾಗಾಗಿ ನನ್ನ ಚಿತ್ರ 'ಗಾಡ್ ಫಾದರ್' ಮೊದಲು ಬಿಡುಗಡೆಯಾಗಲಿ ಎಂಬುದು ಕೆ ಮಂಜು ವಾದ. ಈ ವಾದನ್ನು 'ಕಠಾರಿವೀರ' ಚಿತ್ರದ ನಿರ್ಮಾಪಕ ಮುನಿರತ್ನ ಸುತಾರಾಂ ಒಪ್ಪುತ್ತಿಲ್ಲ. ವಿಶೇಷ ಎಂದರೆ ಈ ಎರಡೂ ಚಿತ್ರಗಳಿಗೆ ಉಪೇಂದ್ರ ಅವರೇ ನಾಯಕ. (ಒನ್‌ಇಂಡಿಯಾ ಕನ್ನಡ)

  English summary
  A tug of war betweeen producers K Manju and Munirathna regarding release of their movies on same day (27th April 2012) to end in smoke. Katariveera and Godfather - Both movies are set for release. But, a new controversy arised on release date. Producers K.Manju and Munirathna lock horns over this issue. Incidently, Upendra is the hero of both the movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X