»   » ಶಾರುಖ್ ಮತ್ತು ಪತ್ನಿ ನಡುವೆ ಆಲ್ ಈಸ್ ನಾಟ್ ವೆಲ್

ಶಾರುಖ್ ಮತ್ತು ಪತ್ನಿ ನಡುವೆ ಆಲ್ ಈಸ್ ನಾಟ್ ವೆಲ್

Posted By:
Subscribe to Filmibeat Kannada

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಕುಟುಂಬದಲ್ಲಿ ಆಲ್ ಈಸ್ ನಾಟ್ ವೆಲ್ ಎಂಬ ಅಂಶ ಬೆಳಕಿಗೆ ಬಂದಿದೆ. ಶಾರುಖ್ ಪತ್ನಿ ಗೌರಿ ಖಾನ್‌ಗೆ ಗಂಡನ ಮೇಲೆ ಸಣ್ಣ ಅನುಮಾನ ಶುರುವಾಗಿದ್ದು ಮುನಿಸಿಕೊಂಡು ಮೂದೇವಿ ಆಗಿರುವುದಾಗಿ ಬಾಲಿವುಡ್‌ನಿಂದ ಇದೀಗ ತಾನೆ ಸುದ್ದಿ ಬಂದಿದೆ.

'ಡಾನ್ 3' ಚಿತ್ರದಲ್ಲಿ ಶಾರುಖ್ ಜೊತೆ ಬಿಂಕದ ಬೆಡಗಿ ಪ್ರಿಯಾಂಕಾ ಚೋಪ್ರಾ ಅಭಿನಯಿಸುತ್ತಿದ್ದಾರೆ. ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಚೆನ್ನಾಗಿದ್ದು ಅದು ಆಫ್ ಸ್ಕ್ರೀನ್‌ವರೆಗೂ ಮುಂದುವರಿದಿದೆ ಎಂಬ ಮಾತುಗಳು ಕೇಳಿಬಂದಿದೆ. ಇದನ್ನೇ ಸೀರಿಯಸ್ಸಾಗಿ ತೆಗೆದುಕೊಂಡಿರುವ ಗೌರಿ ಗರಂ ಆಗಿದ್ದಾರಂತೆ.

ಆದರೆ ಗರಂ ಆಗಿರುವುದು ಗಂಡನ ಮೇಲಲ್ಲ ಹಾಲಿನಂತಹ ಸಂಸಾರದಲ್ಲಿ ಹುಳಿ ಹಿಂಡಿತ್ತಿರುವವರ ಮೇಲೆ. ಈ ಸುದ್ದಿ ಹಬ್ಬಿಸುತ್ತಿರುವುದು ಬೇರಾರು ಅಲ್ಲ ಗೌರಿ ಪರಮಾಪ್ತ ಗೆಳತಿ ನೀಲಂ ಕೊಠಾರಿ. ಆಕೆಯನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರಂತೆ ಗೌರಿ. ಆದರೆ ಇದನ್ಯಾವುದನ್ನೂ ತಲೆಗೆ ಹಾಕಿಕೊಳ್ಳದ ಶಾರುಖ್ ತಮ್ಮ ಪಾಡಿಗೆ ತಾವು ಸಿಗರೇಟು ಸೇದಿಕೊಂಡು ಹಾಯಾಗಿದ್ದಾರಂತೆ. (ಏಜೆನ್ಸೀಸ್)

English summary
There's a turbulence in the Khan household, or so it seems. Gauri Khan, wife to Shahrukh Khan is upset about the recent rumours of an alleged link-up between him and his Don co-star Priyanka Chopra reports Times of India.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada