»   » ಟೆನ್ನಿಸ್ ಪಟು ಮಹೇಶ್ ಭೂಪತಿ ಸಂಸಾರದಲ್ಲಿ ಸುನಾಮಿ

ಟೆನ್ನಿಸ್ ಪಟು ಮಹೇಶ್ ಭೂಪತಿ ಸಂಸಾರದಲ್ಲಿ ಸುನಾಮಿ

Posted By:
Subscribe to Filmibeat Kannada

ಟೆನ್ನಿಸ್ ಪಟು ಮಹೇಶ್ ಭೂಪತಿ ಸಂಸಾರ ಸಾಗರದಲ್ಲಿ ಸುನಾಮಿ ಎದ್ದಿದೆ. ಚಿತ್ರನಟಿ ಲಾರಾ ದತ್ತ ಜೊತೆ ಮಹೇಶ್ ಭೂಪತಿ ಕಣ್ಣಾಮುಚ್ಚಾಲೆ ಆಡಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಮಹೇಶ್ ಪತ್ನಿ ಶ್ವೇತ ಜೈಶಂಕರ್ ತನ್ನ ಗಂಡ ಮಹಾ ವಂಚಕ ಎಂದು ಆರೋಪಿಸಿದ್ದಾರೆ.

ಆಕೆ ಹೀಗೆ ಹಾದಿ ರಂಪ ಬೀದಿ ರಂಪ ಮಾಡುತ್ತಿರುವುದು ಇದೇ ಮೊದಲು. ಮಹೇಶ್ ಜೊತೆ ಸಂಬಂಧ ಹೊಂದಿರುವವರಲ್ಲಿ ಲಾರಾ ಮೊದಲಿಗಳೇನಲ್ಲ. ಈ ಹಿಂದೆ ಮಹೇಶ್ ಹಲವಾರು ಹುಡುಗಿರ ಜೊತೆ ಹಾಸಿಗೆ ಹಂಚಿಕೊಂಡಿದ್ದಾನೆ ಎಂದು ಶ್ವೇತಾ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ಮಹೇಶ್ ಜೊತೆ ಯಾರು ಯಾರು ಪಲ್ಲಂಗ ಹಂಚಿಕೊಂಡಿದ್ದಾರೆ ಎಂಬುದು ನನಗೆ ಗೊತ್ತು. ಆದರೆ ಕೊಚ್ಚೆ ಮೇಲೆ ನಾನ್ಯಾಕೆ ಕಲ್ಲು ಹಾಕಲಿ? ಎಂದು ಸುಮ್ಮನಾಗಿದ್ದಾರೆ. ಮಹೇಶ್ ಜೊತೆಗೆ ವಿವಾಹ ವಿಚ್ಛೇದನ ಸಿಗುವವರೆಗೆ ಕಾಯುತ್ತೇನೆ. ಬಳಿಕ ಎಲ್ಲರಿಗೂ ಗೊತ್ತಾಗುತ್ತದೆ ಲಾರಾ ದತ್ತ ಜೊತೆಗಿನ ಮಹೇಶ್ ಸಂಬಂಧ ಏನು ಅಂಥ ಎನ್ನುತ್ತಾರೆ ಶ್ವೇತಾ.

ನನ್ನನ್ನು ವಂಚಿಸಿದಂತೆ ಒಂದು ದಿನ ಲಾರಾಳನ್ನು ಮಹೇಶ್ ವಂಚಿಸುತ್ತಾನೆ. ಆಗಷ್ಟೆ ಅವನ ಬಣ್ಣ ಬಯಲಾಗುತ್ತದೆ. ಮಹೇಶ್ ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ. ಆತನ ಜೀವನದಲ್ಲಿ ನಾನು ಮತ್ತೊಂದು ಟ್ರೋಫಿಯಾಗಿ ಉಳಿದೆ ಅಷ್ಟೆ ಎಂದು ಶ್ವೇತಾ ತಮ್ಮ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada