»   »  ದಿಗಂತ್ ಬೇಜಬ್ದಾರಿ ನಟ ; ಹೇಮಂತ್ ಸಿಡಿಮಿಡಿ

ದಿಗಂತ್ ಬೇಜಬ್ದಾರಿ ನಟ ; ಹೇಮಂತ್ ಸಿಡಿಮಿಡಿ

Subscribe to Filmibeat Kannada

'ಹೌಸ್‌ಫುಲ್" ಚಿತ್ರದ ಇಬ್ಬರು ನಾಯಕರಲ್ಲಿ ಒಬ್ಬರಾದ ದಿಗಂತ್ ಚಿತ್ರದುದ್ದಕ್ಕೂ ಇರುವೆ ಕಡಿಸಿಕೊಂಡಂತೆ ಚಡಪಡಿಸುತ್ತಾರೆ. ತೆರೆಯ ಆಚೆಯೂ ಅವರದ್ದು ಇಂತಹುದೇ ಚಡಪಡಿಕೆ, ಬೇಜವಾಬ್ದಾರಿ ನಡವಳಿಕೆಯಂತೆ. ಇದನ್ನು ಬಹಿರಂಗಪಡಿಸಿದ್ದು 'ಹೌಸ್‌ಫುಲ್"ನ ಮತ್ತೊಬ್ಬ ಹೀರೋ ಹಾಗೂ ನಿರ್ದೇಶಕ ಹೇಮಂತ್ ಹೆಗ್ಡೆ.

'ಹೌಸ್‌ಫುಲ್" ಚಿತ್ರ ಐವತ್ತು ದಿನ ಪೂರೈಸಿದ ಸಂದರ್ಭದಲ್ಲಿ ನಡೆದ ಸಂತೋಷಕೂಟದಲ್ಲಿ ಹೇಮಂತ್ ತಮ್ಮ ಅಳಲನ್ನು ತೋಡಿಕೊಂಡರು. 'ನಿನ್ನೆ ರಾತ್ರಿ ಈ ಸಮಾರಂಭಕ್ಕೆ ಬರ್ತೇನೆ ಎಂದು ದಿಗಂತ್ ಹೇಳಿದ್ದರು. ಇವತ್ತು ಬೆಳಿಗ್ಗೆ ಬರಲಿಕ್ಕೆ ಸಾಧ್ಯವಿಲ್ಲ ಎಂದು ಮೆಸೇಜ್ ಕಳಿಸಿದ್ದಾರೆ. ಶೂಟಿಂಗ್ ಸಂದರ್ಭದಲ್ಲೂ ಹೀಗೆಯೇ ಸತಾಯಿಸಿದ್ದರು. ದಿಗಂತ್ ಕಾರಣದಿಂದಾಗಿ ಗೋವಾದ ಶೆಡ್ಯೂಲ್‌ನಲ್ಲಿ ಏರುಪೇರುಂಟಾಗಿತ್ತು. ಸಮಯ ಹೊಂದಾಣಿಕೆಯಲ್ಲಿ ಆತನದ್ದು ಅಶಿಸ್ತಿನ ನಡವಳಿಕೆ...".

ಹೇಮಂತ್ ಹೇಳುತ್ತಲೇ ಹೋದರು. ಚಿತ್ರದ ನಿರ್ಮಾಪಕ ಅನೂಜ್ ಸಕ್ಸೇನ ಸಂತೋಷಕೂಟಕ್ಕೆಂದು ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಇಲ್ಲಿಯ ಕಲಾವಿದರೇ ನಾಪತ್ತೆಯಾದರೆ ಹೇಗೆ ಎನ್ನೋದು ಹೇಮಂತ್ ಹಳಹಳಿ.

'ಹೌಸ್‌ಫುಲ್-50" ಸಂಭ್ರಮದ ಕೇಂದ್ರದಲ್ಲಿ ನಟ ವಿಷ್ಣುವರ್ಧನ್ ಮಿಂಚುತ್ತಿದ್ದರು. ಸಿನಿಮಾಗಳಿಗೆ ಜನ ಬರೋದು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಹೌಸ್‌ಫುಲ್ ಅರ್ಧ ಸೆಂಚುರಿ ಬಗ್ಗೆ ವಿಷ್ಣು ಖುಷಿ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಚಿತ್ರದ ತಂತ್ರಜ್ಞರಿಗೆ-ಕಲಾವಿದರಿಗೆ ಫಲಕಗಳನ್ನು ವಿತರಿಸಲಾಯಿತು.ಅಂದಹಾಗೆ, ಹೌಸ್‌ಫುಲ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಂದರ್ಭದಲ್ಲೂ ದಿಗಂತ್ ಗೈರುಹಾಜರಾಗಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada