For Quick Alerts
  ALLOW NOTIFICATIONS  
  For Daily Alerts

  ಅಮೆರಿಕದಲ್ಲಿ ಕಾಲಿಡಲು ಮುಜುಗರ: ಖಾನ್

  |

  ನನಗೆ ಆದ ಅಪಮಾನಕ್ಕೆ ಕ್ಷಮೆಯಾಚನೆ ಬೇಕೆಂದು ಕೇಳುವುದಿಲ್ಲ. ಆದರೆ, ಅಮೆರಿಕದ ನೆಲದ ಮೇಲೆ ಮತ್ತೆ ಕಾಲಿಡಲು ಮುಜುಗರವಾಗುತ್ತದೆ ಎಂದು ಬಾಲಿವುಡ್ ನ ಬಾದ್ ಷಹ ಕಿಂಗ್ ಖಾನ್ ಶಾರುಖ್ ಪ್ರತಿಕ್ರಿಯಿಸಿದ್ದಾರೆ.ವಿಮಾನನಿಲ್ದಾಣದ ತಪಾಸಣೆ ಪ್ರಸಂಗ ಮುಗಿದ ನಂತರ ಅಟ್ಲಾಂಟಿಕ್ ನಗರದ ತಾಜ್ ಮಹಲ್ ಹೋಟೆಲ್ ನಲ್ಲಿ ನಡೆದ ರಸಸಂಜೆಗೆ ಎರಡು ಗಂಟೆ ತಡವಾಗಿ ಆಗಮಿಸಿದ ಶಾರುಖ್, ತನ್ನನ್ನು ಅಮೆರಿಕದ ಅಧಿಕಾರಿಗಳು ನಡೆಸಿಕೊಂಡ ಬಗ್ಗೆ ಖೇದ ವ್ಯಕ್ತಪಡಿಸಿ, ತಡವಾಗಿದ್ದಕ್ಕೆ ಪ್ರೇಕ್ಷಕರಲ್ಲಿ ಕ್ಷಮೆ ಯಾಚಿಸಿದರು.

  ಅಮೆರಿಕ ಸ್ಪಷ್ಟನೆ

  ಖಾನ್ ಪದ ರಾದ್ದಾಂತ, ಜನಾಂಗ ಬೇಧವಲ್ಲ ಇದು ಸಾಮಾನ್ಯ ತಪಾಸಣಾ ಕ್ರಮ, ನೆರ್ವಾಕ್ ವಿಮಾನ ನಿಲ್ದಾಣದ ಸಿಬ್ಬಂದಿ ವೃತಿಪರತೆ ಮೆರೆದಿದ್ದಾರೆ. ಶಾರುಖ್ ನಮ್ಮ ಅತಿಥಿ. ಇದರಲ್ಲಿ ಯಾವುದೇ ಜನಾಂಗೀಯ ಬೇಧಭಾವ ಕ್ರಮ ಇಲ್ಲ. ಶಾರುಖ್ ಅವರ ಸಾಮಾಗ್ರಿಗಳು ವಿಮಾನ ನಿಲ್ದಾಣ ತಲುಪಲು ತಡವಾದ ಕಾರಣ, ಅವರನ್ನು ತಪಾಸಣೆಗೆ ಒಳಪಡಿಸಲಾಯಿತು. ಎಂದು ಅಮೆರಿಕದ ಕಸ್ಟಮ್ಸ್ ಆಧಿಕಾರಿ ಎಲ್ಮಾರ್ ಕಮಾಚೋ ಸ್ಪಷ್ಟಪಡಿಸಿದ್ದಾರೆ.

  ಕಲಾಂ, ಜಾರ್ಜ್ ಫರ್ನಾಂಡಿಸ್, ಆಮೀರ್, ಮುಕೇಶ್, ಶಾರುಖ್... ಇದಕ್ಕೆ ಕೊನೆ ಎಲ್ಲಿ ?

  ಅಮೆರಿಕದಲ್ಲಿ ಎಸ್‌ಆರ್‌ಕೆ ಸ್ವಾತಂತ್ರ್ಯ ಹರಣ ನಡೆದದ್ದೇನು ಇದು ತಪಾಸಣೆಯ ಪರಿ ಈ ರೀತಿಯ ಘಟನೆ ಮೊದಲಲ್ಲ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲು ಶಿಕಾಗೊಗೆ ತೆರಳುತ್ತಿದ್ದ ಶಾರುಖ್ ಹೆಸರು ನಿಲ್ದಾಣದ ಕೌಂಟರ್‌ನಲ್ಲಿರುವ ಕಂಪ್ಯೂಟರ್ ಪರದೆಯಲ್ಲಿ ಮೂಡಿಬರುತ್ತಿದ್ದಂತೆ ವಲಸೆ ಅಧಿಕಾರಿಗಳು ಅವರನ್ನು ತಡೆದರು. ಅಮೆರಿಕ ಭೇಟಿಯ ಉದ್ದೇಶ ಸೇರಿದಂತೆ ಹಲವಾರು ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿದರು. ಇದು (ಖಾನ್) ಮುಸ್ಲಿಂ ಹೆಸರು. ತಪಾಸಣೆಗೆ ಒಳಪಡಬೇಕಾದವರ ಪಟ್ಟಿಯಲ್ಲಿ ಈ ಹೆಸರು ಸಾಮಾನ್ಯವಾಗಿರ

  ಬಹುದು' ಎಂದು ಶಾರುಖ್ ಈ ಘಟನೆಗೆ ಪ್ರತಿಕ್ರಿಯಿಸಿದ್ದಾರೆ.

  ನಾನೊಬ್ಬ ನಟ ಎಂದು ಹೇಳಿದೆ. ಪರಿಚಯಸ್ಥ ಅಧಿಕಾರಿಗಳ ಜತೆ ಮಾತನಾಡಲು ಅನುಮತಿ ನೀಡುವಂತೆ ಮನವಿ ಮಾಡಿದೆ. ಆದರೆ, ವಲಸೆ ಅಧಿಕಾರಿಗಳು ಆರಂಭದಲ್ಲಿ ಫೋನ್ ಮಾಡಲೂ ಬಿಡಲಿಲ್ಲ. ಬಳಿಕ ಯಾರಿಗಾದರೂ ಒಬ್ಬರಿಗೆ ಮಾತ್ರ ಫೋನ್ ಮಾಡಲು ಅನುಮತಿ ನೀಡಿದರು. ತಕ್ಷಣವೇ ನನ್ನ ಕಾರ್ಯದರ್ಶಿ, ಮನೆಗೆ ಹಾಗೂ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಅವರಿಗೆ ಸಂದೇಶ ರವಾನಿಸಿದೆ .

  ಶುಕ್ಲಾ ಅವರು ಭಾರತೀಯ ದೂತಾವಾಸ ಕಚೇರಿಗೆ ಮಾಹಿತಿ ನೀಡಿದರು. ತಕ್ಷಣವೇ ಅವರು ಕಾರ್ಯಪ್ರವೃತ್ತರಾಗಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ, ಬಿಡುಗಡೆ ಮಾಡಿಸಿದರು.ಈ ರೀತಿಯ ಘಟನೆ ನಡೆಯುತ್ತಿರುವುದು ಇದು ಮೊದಲ ಬಾರಿಯೇನಲ್ಲ.ಅಮೆರಿಕನ್ನರು ಯಾವಾಗಲೂ ಇದೇ ರೀತಿ ನಡೆದುಕೊಳ್ಳುವುದರಿಂದ ಇಲ್ಲಿಗೆ ಭೇಟಿ ನೀಡುವ ಇಚ್ಛೆ ಇರಲಿಲ್ಲ. ನಿಜಕ್ಕೂ ಈ ಘಟನೆ ತುಂಬಾ ಕೆಟ್ಟದೆನಿಸಿತು. ಅಷ್ಟೇ ಕೋಪವೂ ಬಂತು. ನನ್ನ ಕುಟುಂಬ ಜತೆಯಲ್ಲಿ ಇಲ್ಲದಿರುವುದು ಒಂದು ರೀತಿಯ ನೆಮ್ಮದಿಯ ವಿಷಯವಾಗಿತ್ತು ಎಂದು ಶಾರುಖ್ ಹೇಳಿದ್ದಾರೆ.

  ಅಂತೂ ಇಂತೂ ಎಲ್ಲಾ ಮುಗಿದಾಗ....

  ಶಾರುಖ್ ಅವರನ್ನು ವಿಚಾರಣೆಗೊಳಪಡಿ ಸಿದ ಬಗ್ಗೆ ಭಾರತದಲ್ಲಿರುವ ಅಮೆರಿಕ ದೂತಾ ವಾಸ ಕಚೇರಿ ಅಧಿಕಾರಿಗಳ ಜತೆ ಚರ್ಚಿಸಿರುವು ದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾ ಲಯದ ವಕ್ತಾರ ವಿಷ್ಣು ಪ್ರಕಾಶ್ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದ ಮಾಹಿತಿ ಪಡೆಯ ಲಾಗುತ್ತಿದೆ ಎಂದು ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿರುವ ಟಿಮೋತಿ ಜೆ.ರೋಮರ್ ಹೇಳಿದ್ದಾರೆ.

  ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರನ್ನು ಅಮೆರಿಕದ ನೆವಾರ್ಕ್ ವಿಮಾನ ನಿಲ್ದಾಣದಲ್ಲಿ 2 ಗಂಟೆಗೂ ಹೆಚ್ಚು ಕಾಲ ಅವರನ್ನು ತಡೆದು, ವಿಚಾರಣೆಗೊಳಪಡಿಸಿದ ಘಟನೆ ಶನಿವಾರ ನಡೆದಿದ್ದು ಭಾರತೀಯರಿಗೆ ದಿಗ್ಭ್ರಮೆ ಮೂಡಿಸಿದೆ. ಬಳಿಕ ಭಾರತೀಯ ದೂತಾವಾಸ ಅಧಿಕಾರಿಗಳು ಮಧ್ಯಪ್ರವೇಶಿಸಿ, ಶಾರುಖ್ ರನ್ನು ಬಿಡುಗಡೆ ಮಾಡಿಸಿದರು. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ, ನಾನು ಸಹ ಅಮೆರಿಕದಲ್ಲಿ ತಪಾಸಣೆಗೆ ಒಳಗಾಗಿದ್ದೆ. ನಮ್ಮನ್ನು ತಪಾಸಣೆಗೊಳಪಡಿಸುವ ರೀತಿಯಲ್ಲೇ ಅಮೆರಿಕನ್ನರನ್ನು ತಪಾಸಣೆಗೊಳಪಡಿಸಬೇಕು' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X