»   »  ನನ್ನ ಪತಿ ಅಮಾಯಕ : ಅನುಪಮಾ ಶೈನಿ

ನನ್ನ ಪತಿ ಅಮಾಯಕ : ಅನುಪಮಾ ಶೈನಿ

Subscribe to Filmibeat Kannada

ಮುಂಬೈ, ಜೂ. 16 : ಮನೆಕೆಲಸದ ಯುವತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ನಿಜ ಎಂದು ಒಪ್ಪಿಕೊಂಡಿರುವ ಬಾಲಿವುಡ್ ನಟ ಶೈನಿ ಅಹುಜಾ ಪರಸ್ಪರ ಸಮ್ಮತಿಯ ಮೇರೆಗೆ ಘಟನೆ ನಡೆದಿತ್ತು ಎಂದು ಮುಂಬೈ ಪೊಲೀಸರಿಗೆ ವಿಚಾರಣೆಯಲ್ಲಿ ಹೇಳಿದ್ದಾನೆ. ಆದರೆ, ಇತ್ತ ಶೈನಿ ಪತ್ನಿ ಅನುಪಮ ಮಾತ್ರ ನನ್ನ ಪತಿ ಅಮಾಯಕ, ಶ್ರೀರಾಮಚಂದ್ರ ಇದ್ದ ಹಾಗೆ. ಈ ವರೆಗಿನ ಎಲ್ಲ ಘಟನೆಗಳನ್ನು ಸೃಷ್ಟಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗೆ ಮುಂಬೈ ಪೊಲೀಸರು ಶೈನಿ ಅಹುಜಾನನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರಿಂದ ಲೈಂಗಿಕ ಸಂಬಂಧ ಹೊಂದಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಇದ್ದ ಮನೆಕೆಲಸದಾಕೆ ರಜೆ ಹಾಕಿದ್ದಳು. ಒಂದು ತಿಂಗಳ ಮಟ್ಟಿಗೆ 18 ವರ್ಷದ ಯುವತಿ ಬಂದಿದ್ದಳು. ಭಾನುವಾರ ಮಧ್ಯಾಹ್ನ ಯಾರೂ ಇರಲಿಲ್ಲ. ಈ ವೇಳೆ ನಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ಲೈಂಗಿಕ ಕ್ರಿಯೆ ನಡೆಸಿದೆವು. ಮನೆಕೆಲಸದಾಕೆ ಆರೋಪಿಸಿದಂತೆ ಕೋಣಿಗೆ ಕರೆದೊಯ್ದು ಬಲತ್ಕಾರದಿಂದ ಅತ್ಯಾಚಾರ ಎಸಗಿಲ್ಲ. ಈ ಆರೋಪ ನನ್ನ ವಿರುದ್ಧ ನಡೆಸಿದ ಸಂಚು ಎಂದು ಆರೋಪಿಸಿದ್ದಾನೆ.

ನನ್ನ ಪತಿ ನಿರ್ದೋಷಿ. ಅವರು ತಪ್ಪೊಪ್ಪಿಕೊಂಡಿದ್ದಾರೆ ಎನ್ನುವುದು ಕೇವಲ ಕಟ್ಟುಕತೆ. ನನ್ನ ಪತಿ ಅತ್ಯಂತ ಸಂಭಾವಿತ. ಆತ ಯಾವುದೇ ತಪ್ಪು ಮಾಡಿಲ್ಲ ಎಂದು ಶೈನಿ ಪತ್ನಿ ಅನುಪಮ ಸಮರ್ಥಿಸಿಕೊಂಡಿದ್ದಾರೆ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada