»   »  ಕುಕ್ಕೆ ಸುಬ್ರಹ್ಮಣ್ಯದಲ್ಲಿಯೂ ಶುಭಾ, ವಿಜಿ ಪೂಜೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿಯೂ ಶುಭಾ, ವಿಜಿ ಪೂಜೆ

Subscribe to Filmibeat Kannada

ಶಿವಮೊಗ್ಗದಲ್ಲಿ ರಹಸ್ಯವಾಗಿ ಹೋಮ ನಡೆಸಿದ ಬಳಿಕ ನಟ ವಿಜಯ್ ಮತ್ತು ಶುಭಾ ಪೂಂಜಾ ಜೋಡಿ ಕಣ್ಮರೆಯಾಗಿತ್ತು. ಈ ಜನಪ್ರಿಯ ಜೋಡಿ ಭಾನುವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತ್ಯಕ್ಷವಾಗಿದೆ. ಪತ್ರಕರ್ತರ ಮೇಲೆ ನಟ ವಿಜಯ್ 'ತಾಕತ್ತು' ತೋರಿಸಿದ ಬಳಿಕ ಶುಭಾರೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

ಕುಕ್ಕೆ ಸುಬ್ರಹ್ಮಣ್ಯದ 'ಶೇಷನಾಗ' ಅತಿಥಿ ಗೃಹದಲ್ಲಿ ಇವರಿಬ್ಬರು ತಂಗಿದ್ದರು ಎನ್ನುತ್ತವೆ ಮೂಲಗಳು. ಭಾನುವಾರ ಮಧ್ಯಾಹ್ನದ ನಂತರ ದೇವಸ್ಥಾನದಲ್ಲಿ ವಿಜಯ್ ಮತ್ತು ಶುಭಾ ಪೂಂಜಾ 'ತುಲಾಭಾರ' ಮಾಡಿಸಿದರು. ಸುಮಾರು 60 ಕೆಜಿಯಷ್ಟು ಉದ್ದಿನ ಬೇಳೆಯನ್ನು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ.

ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬಿಸಿಲೆ ಘಾಟ್ ನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಸಹಇಬ್ಬರೂ ಪೂಜೆ ಸಲ್ಲಿಸಿದರು. ಗುಂಡ್ಯದಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಬೆಂಗಳೂರಿಗೆ ಸದ್ದಿಲ್ಲದಂತೆ ಹಿಂತಿರುಗಿದ್ದಾರೆ.

ಶನಿವಾರ ಇವರಿಬ್ಬರೂ ಶಿವಮೊಗ್ಗದಲ್ಲಿ ರಹಸ್ಯವಾಗಿ 'ಲಕ್ಷ್ಮಿ ನರಸಿಂಹ ಹೋಮ' ಮಾಡುತ್ತಿದ್ದರು. ಅದನ್ನು ಚಿತ್ರೀಕರಿಸಲು ಹೊರಟ ಖಾಸಗಿ ವಾಹಿನಿಯ ವರದಿಗಾರ ಮೇಲೆ ವಿಜಯ್ 'ತಾಕತ್ತು' ಪ್ರದರ್ಶಿಸಿದ್ದರು. ಈ ಪೂಜೆಯನ್ನು ಸಾಮಾನ್ಯವಾಗಿ ದಂಪತಿಗಳು ನಿರ್ವಹಿಸುತ್ತಾರೆ ಎನ್ನಲಾಗಿದೆ.

ಜ್ಯೋತಿಷಿ ಶಾಮಶಂಕರ್ ಭಟ್ ಅವರ ಮನೆಯಲ್ಲಿ ಈ ಹೋಮವನ್ನು ಇಬ್ಬರೂ ಕೂಡಿ ಮಾಡಿದ್ದರು. ವರದಿಗಾರನಿಗೆ ಗೂಸ ಕೊಟ್ಟು ಆ ಬಳಿಕ ವಿಜಯ್ ಕ್ಷಮೆಯಾಚಿಸಿದ್ದರು. ಮೂರು ಮಕ್ಕಳ ತಂದೆ ವಿಜಿಯೊಂದಿಗೆ ಶುಭಾಗೆ ಅಫೇರ್ ಇದೆ ಎಂದು ಪತ್ರಿಕೆಗಳು ಬರೆದಾಗ, ಶುಭಾ ನಾವಿಬ್ಬರೂ ಗೆಳೆಯರಷ್ಟೇ ಎಂದಿದ್ದರು. ಈಗ ಒಳ್ಳೆಯ ಗೆಳೆಯರು ಒಟ್ಟಿಗೆ ಕೂತು ಹೋಮ ಮಾಡಿಸಿದ್ದಾರೆ!

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada