»   » ಪಾಕಿಸ್ತಾನದ ಹೊಸ ಕಿಕ್; ಸಾನಿಯಾ ಬಾಭಿ ಗುಟ್ಕಾ!

ಪಾಕಿಸ್ತಾನದ ಹೊಸ ಕಿಕ್; ಸಾನಿಯಾ ಬಾಭಿ ಗುಟ್ಕಾ!

Posted By:
Subscribe to Filmibeat Kannada

ಹೊಸದಾಗಿ ಸಾನಿಯಾ ಗುಟ್ಕಾ ಬಂದೈತಂತೆ ನಿಮ್ಮಲೇನಾದರೂ ಉಂಟಾ? ಎಂದು ಗುಟ್ಕಾ ಪ್ರಿಯರು ಕೇಳುತ್ತಿದ್ದರೆ ಅಂಗಡಿಯಾತ ಕಕ್ಕಾಬಿಕ್ಕಿಯಾಗಿ ಅದ್ಯಾವುದಪ್ಪ್ಪ ಹೊಸ ಗುಟ್ಕಾ ಎಂದು ತಲೆಕೆರೆದುಕೊಳ್ಳುವಂತಾಗಿದೆ. ಹೌದ್ರಿ ಸಾನಿಯಾ ಗುಟ್ಕಾ ಶೇ.72ರಷ್ಟು ಸ್ಟ್ರಾಂಗ್ ಅಂತೆ. ಇದಕ್ಕೆ ಮತ್ತೊಂದು ಹೆಸರು ಪಾಕಿಸ್ತಾನಿ ಗುಟ್ಕಾ. ಇದು ನಿಜವೇ?

ನೀವಂದುಕೊಂಡಂತೆ ಸಾನಿಯಾ ಹೆಸರಿನ ಯಾವುದೇ ಗುಟ್ಕಾ ಮಾರುಕಟ್ಟೆಗೆ ಬಂದಿಲ್ಲ. ಇಂಟರ್ ನೆಟ್ ನಲ್ಲಿ ಕಿಡಿಗೇಡಿಗಳು ಗುಟ್ಕಾ ಪಾಕೆಟ್ ಮೇಲೆ ಸಾನಿಯಾರನ್ನು ಚಿತ್ರಿಸಿ, ಆಕೆಯ ಹೆಸರನ್ನಿಟ್ಟು ಹೀಗೆ ಮಜಾ ತಗೋತಿದ್ದಾರೆ. ಪಾಕಿಸ್ತಾನದ ಹೊಸ ಗುಟ್ಕಾ ಎಂದು ಪಾಕೆಟ್ ಮೇಲೆ ಬರೆದು ಕಿತಾಪತಿ ಮಾಡಿದ್ದಾರೆ. ಈ ಗುಟ್ಕಾ ಇ-ಮೇಲ್ ಗಳಲ್ಲಿ ಹರಿದಾಡುತ್ತಿದೆ ಅಷ್ಟೆ.

ಕಿಡಿಗೇಡಿಗಳು ಸೃಷ್ಟಿಸಿದ ಪಾಕಿಸ್ತಾನದ ಈ ಹೊಸ ಗುಟ್ಕಾ ಪಾಕೆಟ್ ಇಂಟರ್ ನೆಟ್ ನಲ್ಲಿ ಸಂಚಲನ ಉಂಟು ಮಾಡುತ್ತಿದೆ. ಎರಡು ವರ್ಷಗಳ ಹಿಂದೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ಬಗ್ಗೆ ಇ-ಮೇಲ್ ಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಮುಂಬೈನ ಬಾಂದ್ರಾದಲ್ಲಿ ಸಚಿನ್ ಐಶಾರಾಮಿ ಮನೆಯೊಂದನ್ನು ಖರೀದಿಸಿದ್ದಾರೆ. ಆಕರ್ಷಕ ಎಂಟು ಕೋಣೆಗಳನ್ನು ತೋರಿಸಿ ಇದೇ ಸಚಿನ್ ಮನೆ ಎಂದು ನಂಬಿಸಿದ್ದರು.

ಈ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿದ ಸಚಿನ್, ಇಂಥಹ ಮನೆಯನ್ನು ತಾನೇ ನೋಡಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಕಡೆಗೆ ಇದು ಮೆಕ್ಸಿಕೋ ಮೂಲದ ಎಂಜಿನಿಯರ್ ಒಬ್ಬನ ಕಿತಾಪತಿ ಎಂಬುದು ಗೊತ್ತಾಯಿತು. ಇದೀಗ ಕಿಡಿಗೇಡಿಗಳ ಕೃತ್ಯಕ್ಕೆ ಸಾನಿಯಾ ಬಲಿಯಾಗಿದ್ದಾರೆ ಅಷ್ಟೆ.

ಸಾನಿಯಾ ಬಾಭಿ ಗುಟ್ಕಾ ತಿಂದ್ರೆ, 'Taazgi bhara ho ang ang, jab ho Sania bhabhi gutkha sang' ಎಂಬ ಸಾಲುಗಳು ಈ ಕಾಲ್ಪನಿಕ ಗುಟ್ಕಾ ಪಾಕೆಟ್ ಮೇಲಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಸಾನಿಯಾ, ನಾನು ಯಾವುದೇ ಗುಟ್ಕಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ. ಇದು ಕಿಡಿಗೇಡಿಗಳ ಕೃತ್ಯ ಎಂದಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada