»   » ಕೋರ್ಟ್ ಮೆಟ್ಟಿಲೇರಲಿದೆ ರಿಷಿಕಾ ಸಿಂಗ್ ನಗ್ನ ಚಿತ್ರ

ಕೋರ್ಟ್ ಮೆಟ್ಟಿಲೇರಲಿದೆ ರಿಷಿಕಾ ಸಿಂಗ್ ನಗ್ನ ಚಿತ್ರ

Posted By:
Subscribe to Filmibeat Kannada

ಕನ್ನಡ ಚಲನಚಿತ್ರಗಳ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಗಳು ರಿಷಿಕಾ ಸಿಂಗ್ ಅಭಿನಯದ 'ಯಾರಾದ್ರೆ ನನಗೇನು' ಚಿತ್ರಕ್ಕೆ ಮತ್ತೊಂದು ವಿಘ್ನ ಎದುರಾಗಿದೆ. ಈ ಚಿತ್ರದ 'ನಗ್ನ' ಪೋಸ್ಟರ್‌ಗಳನ್ನು ನಾಡಿನ ಪತ್ರಿಕೆಗಳಿಗೆ ಬಿಡುಗಡೆ ಮಾಡಲಾಗಿತ್ತು. ರಿಷಿಕಾರ ಈ ಪೋಸ್ಟರ್ ತೀವ್ರ ವಿವಾದಕ್ಕೂ ಕಾರಣವಾಗಿತ್ತು.

ರಿಷಿಕಾರ ವಿವಾದಾತ್ಮಕ ಪೋಸ್ಟರ್ ಬಗ್ಗೆ ಈಗ ದಲಿತ, ಬ್ರಾಹ್ಮಣ, ಲಿಂಗಾಯಿತ ಕ್ಷೇಮಾಭಿವೃದ್ಧಿ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಚಿತ್ರವನ್ನು ನಿಷೇಧಿಸುವಂತೆ ತಾವು ಕೋರ್ಟ್ ಮೆಟ್ಟಿಲೇರುವುದಾಗಿ ಸಂಘ ಎಚ್ಚರಿಸಿದೆ. ಸೋಮವಾರ ಸಂಘದ ಅಧ್ಯಕ್ಷೆ ಸುನಂದಮ್ಮ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಅಶ್ಲೀಲ, ನಗ್ನ ದೃಶ್ಯಗಳು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ರೀತಿಯ ಪ್ರಚಾರವನ್ನು ತಕ್ಷಣ ನಿಲ್ಲಿಸಬೇಕೆಂದು ಅವರು ಚಿತ್ರದ ನಿರ್ಮಾಪಕರಿಗೆ ಮನವಿ ಮಾಡಿದ್ದಾರೆ. ಸಮಾಜದ ಶ್ರೇಯಸ್ಸಿಗೆ ಚಲನಚಿತ್ರ ವಾಣಿಜ್ಯ ಮಂಡಳಿಯೂ ಕಠಿಣ ಚರ್ಯೆಗಳನ್ನು ತೆಗೆದುಕೊಳ್ಳಬೇಕೆಂದು ಸುನಂದ ವಿನಂತಿಸಿಕೊಂಡಿದ್ದಾರೆ. (ಒನ್‍ಇಂಡಿಯಾ ಕನ್ನಡ)

English summary
Actress Rishika Singh skin show photo in the posters of ‘Yaaradre Nanagenu’ trouble again. Dalit, Brahmins and Lingayat welfare association decides to move court against the movie said the association president Sunandamma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada