»   »  ಅತ್ಯಾಚಾರಿ ಶೈನಿ ಅಹುಜಾಗೆ ಡಿಎನ್ ಎ ಪರೀಕ್ಷೆ

ಅತ್ಯಾಚಾರಿ ಶೈನಿ ಅಹುಜಾಗೆ ಡಿಎನ್ ಎ ಪರೀಕ್ಷೆ

Posted By:
Subscribe to Filmibeat Kannada

ಮುಂಬೈ, ಜೂ. 18 : ಮನೆಗೆಲಸದ ಯುವತಿಯನ್ನು ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಬಾಲಿವುಡ್ ನಟ ಶೈನಿ ಅಹುಜಾನನ್ನು ಮುಂಬೈ ಪೊಲೀಸರು ಡಿಎನ್ಎ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದ್ದಾರೆ.

ಅತ್ಯಾಚಾರಕ್ಕೊಳಗಾದ ಯುವತಿಗೆ 18 ವರ್ಷ ಎಂದು ಹೇಳಲಾದರೂ ಅವರ ತನಿಖೆ ನಡೆಸುತ್ತಿರುವ ಪೊಲೀಸರು ಆಕೆಯ ವಿದ್ಯಾಭ್ಯಾಸ ಮಾಡಿದ ಶಾಲೆಗೆ ತೆರಳಿ ವಯಸ್ಸಿನ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ, ಆಕೆಯ ನಿಖರವಾದ ವಯಸ್ಸನ್ನು ಕಂಡುಹಿಡಿಯವ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ. ವಿಧಿ ವಿಜ್ಞಾನ ಪ್ರಯೋಗಾಯಲಕ್ಕೆ ಯುವತಿಯ ವ್ಯಾಜೈನಲ್ ಸ್ಮಿಯರ್ ಹಾಗೂ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೇ ಆರೋಪಿ ಶೈನಿಯ ಸೆಮೆನ್ ನನ್ನು ಕೂಡಾ ಪರೀಕ್ಷೆ ಕಳುಹಿಸಲಾಗಿದ್ದು, ಆಕೆ ರಕ್ತ ಮತ್ತು ಅವನ ಶೈನಿಯ ಸೆಮೆನ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನುರಿತ ತಂಡ ಪರೀಕ್ಷೆ ನಡೆಸಿದೆ.

ಶೈನಿ ನ್ಯಾಯಾಂಗ ಬಂಧನದ ಅವಧಿ ಇಂದು ಕೊನೆಗೊಂಡಿದ್ದು, ಶೈನಿ ಅತ್ಯಾಚಾರ ಎಸಗಿರುವುದು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಬಂಧನದ ಅವಧಿಯನ್ನು ವಿಸ್ತರಿಸಬೇಕು ಎಂದು ನ್ಯಾಯಾಲಯಕ್ಕೆ ಸರಕಾರಿ ವಕೀಲ ಎಸ್ ಎಸ್ ಕಸ್ತೂರೆ ಮನವಿ ಮಾಡಿಕೊಂಡಿದ್ದರು. ಜುಲೈ 2 ರ ವರೆಗೆ ಶೈನಿ ಬಂಧನ ವಿಸ್ತರಣೆ ಮಾಡಲಾಗಿದೆ. ನನ್ನ ಪತಿ ಶೈನಿ ಅಮಾಯಕ. ಆತನನ್ನು ಕೆಲ ಹಿತಾಸಕ್ತಿಗಳು ಈ ಪ್ರಕರಣದಲ್ಲಿ ಬಲಿಪಶು ಮಾಡಿವೆ ಎಂದು ಶೈನಿ ಅಹುಜಾ ಪತ್ನಿ ಅನುಪಮಾ ಅಹುಜಾ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada