»   » ರಾಧಿಕಾಗೂ, ಎಚ್ಡಿಕೆಗೂ ನಮ್ಮ ಚಿತ್ರಕ್ಕೂ ಸಂಬಂಧವಿಲ್ಲ

ರಾಧಿಕಾಗೂ, ಎಚ್ಡಿಕೆಗೂ ನಮ್ಮ ಚಿತ್ರಕ್ಕೂ ಸಂಬಂಧವಿಲ್ಲ

Posted By:
Subscribe to Filmibeat Kannada

ಹಾಸ್ಯ ನಟ ಕೋಮಲ್ ಕೈಗೆತ್ತಿಕೊಂಡಿರುವ ವಿಭಿನ್ನ ಚಿತ್ರ 'ರಾಧಿಕನ್ ಗಂಡ'. ಈ ಚಿತ್ರದ ಶೀರ್ಷಿಕೆ ಬಗ್ಗೆ ಶ್ರೀಮತಿ ರಾಧಿಕಾ ಕುಮಾರಸ್ವಾಮಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಗೊತ್ತೇ ಇದೆ. ಗಾಂಧಿನಗರದಿಂದ ಗಾಂಧಿ ಬಜಾರ್ ತನಕ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಚಿತ್ರವಿದು. ಈ ಬಗ್ಗೆ ಕೋಮಲ್ ಏನು ಹೇಳುತ್ತಾರೆ ಬನ್ನಿ ಕೇಳೋಣ.

ತಮ್ಮ ಚಿತ್ರದ ಶೀರ್ಷಿಕೆ ಬಗ್ಗೆ ನಟಿ ರಾಧಿಕಾ ಅವರು ವಿರೋಧ ವ್ಯಕ್ತಪಡಿಸಿದ್ದು ನಿಜ. ಆದರೆ ರಾಧಿಕಾ ಎಂದರೆ ಅವರೊಬ್ಬರೇ ಆಗಬೇಕು ಎಂದೇನು ಇಲ್ಲವಲ್ಲ. ರಾಧಿಕಾ ಪಂಡಿತ್ ಅವರೂ ಆಗಬಹುದು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ರಾಧಿಕಾ ಅವರ ಬಗ್ಗೆ ತಮಗೆ ಅಪಾರ ಗೌರವ ಇದೆ.

ಅವರ ಪರ್ಸನಲ್ ಲೈಫ್ ನಮಗ್ಯಾಕೆ ಬೇಕು. ಅವರ ವೈಯಕ್ತಿಕ ವಿಚಾರಗಳಿಗೂ ನಮ್ಮ ಚಿತ್ರಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಈ ಹಿಂದೆ 'ವಿಶಾಲಾಕ್ಷ್ಮಮ್ಮನ ಗಂಡ' ಎಂಬ ಚಿತ್ರ ಬಂದಿತ್ತು. ಚಿತ್ರದ ಶೀರ್ಷಿಕೆ ಆಕರ್ಷಕವಾಗಿಲ್ಲದ ಕಾರಣ ಆ ಚಿತ್ರ ಬಾಕ್ಸಾಫೀಸಲ್ಲಿ ಡುಂಕಿ ಹೊಡೀತು. ನಾವೂ ಅದೇ ರೀತಿ ಶೀರ್ಷಿಕೆ ಇಟ್ಟು ಕೈಸುಟ್ಟುಕೊಳ್ಳಬೇಕೆ ಎಂದಿದ್ದಾರೆ ಕೋಮಲ್.

ಆಂಗ್ಲ ಚಿತ್ರ My Wife is an Actress ಕತೆಯ ಆಧಾರವಾಗಿ ರಾಧಿಕನ್ ಗಂಡ ಚಿತ್ರಕತೆಯನ್ನು ಹೆಣೆದಿದ್ದೇವೆ. ಚಿತ್ರದಲ್ಲಿ ತಾನು ನಟಿಯೊಬ್ಬಳ ಗಂಡನಾಗಿ ಅಭಿನಯಿಸಿದ್ದೇನೆ. ಶೂಟಿಂಗ್ ಸ್ಪಾಟ್‌ಗಳಲ್ಲಿ ಅವಳಿಗೆ ಛತ್ರಿ ಹಿಡಿದುಕೊಂಡು ಅವಳ ಹಿಂದೆ ಹಿಂದೆ ಓಡಾಡುವ ಪಾತ್ರ ನನ್ನದು. ಕಡೆಗೆ ಅವಳ ಏಳಿಗೆಯನ್ನು ಸಹಿಸಲಾಗದೆ ವಿಲವಿಲ ಒದ್ದಾಟ ಶುರುವಾಗುತ್ತದೆ. ವ್ಯಕ್ತಿತ್ವದ ಸಂಕ್ಷೋಭೆಯಲ್ಲಿ ಪರಿತಪಿಸುವ ಪಾತ್ರ ನನ್ನದು.

ಮೂಲ ಕತೆಯನ್ನು ಇನ್ನಷ್ಟು ವಿಸ್ತಾರಗೊಳಿಸಿ ತೆರೆಗೆ ತರುತ್ತಿರುವುದಾಗಿ ಕೋಮಲ್ ತಿಳಿಸಿದ್ದಾರೆ. ಚಿತ್ರದಲ್ಲಿ ತಮ್ಮ ಪತ್ನಿಯ ಪಾತ್ರವನ್ನು 'ಜೋಷ್' ಚಿತ್ರದಲ್ಲಿ ಅಭಿನಯಿಸಿದ್ದ ಪೂರ್ಣ ಪೋಷಿಸಲಿದ್ದಾರೆ. 'ರಾಧಿಕನ್ ಗಂಡ' ಚಿತ್ರೀಕರಣ ಕೊನೆಯ ಹಂತ ತಲುಪಿದೆ ಎಂದು ಕೋಮಲ್ ತಿಳಿಸಿದ್ದಾರೆ. (ಏಜೆನ್ಸೀಸ್)

English summary
Actor Komal Kumar clarifies that his upcoming movie Radhikan Ganda is not about actress Radhika and former chief minister HD Kumaraswamy. The movie is loosely based on the French romcom, My Wife is an Actress. amil actor Poorna, who also did Josh in Kannada, plays the actor said Komal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada