For Quick Alerts
  ALLOW NOTIFICATIONS  
  For Daily Alerts

  ಉಪ್ಪಿ ಪ್ರೇಮ್ ಚಿತ್ರದ ಹೆಸರು ಗಾಂಧಿನಗರ ಮಹಾತ್ಮೆ

  By Rajendra
  |

  ಪ್ರೇಮ್ ಹಾಗೂ ಉಪೇಂದ್ರ ಕಾಂಬಿನೇಷನ್ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಮುನಿರತ್ನ ಎಂಬುದುಗೊತ್ತೆ ಇದೆ. ಈ ಚಿತ್ರ ಉಪ್ಪಿ ಬರ್ತ್‌ಡೇ ದಿನ (ಸೆಪ್ಟೆಂಬರ್ 18) ಸೆಟ್ಟೇರಲಿದೆ. ಇಷ್ಟಕ್ಕೂ ಚಿತ್ರದ ಹೆಸರೇನು ಎಂದರೆ 'ಗಾಂಧಿನಗರ ಮಹಾತ್ಮೆ' ಎನ್ನುತ್ತಿವೆ ಮೂಲಗಳು.

  ಆದರೆ ಶೀರ್ಷಿಕೆ ಇನ್ನೂ ಅಧಿಕೃತವಾಗಿ ಪ್ರಕಟವಾಗದಿದ್ದರೂ ಗಾಂಧಿನಗರದಲ್ಲಿ ಆಗಲೆ ಈ ಸುದ್ದಿ ಲೀಕ್ ಆಗಿದೆ. ಇದೇ ಏನೋ ಗಾಂಧಿನಗರ ಮಹಾತ್ಮೆ! ಕನ್ನಡ ಚಿತ್ರರಂಗದ ಹೃದಯ ಭಾಗವಾದ ಗಾಂಧಿನಗರಲ್ಲಿ ಈ ಚಿತ್ರ ಸಾಕಷ್ಟು ಕುತೂಹಲ ಕೆರಳಿಸಿದೆ.

  ಚಿತ್ರ ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ಮುನಿರತ್ನ, ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಸೂರಪ್ಪ ಬಾಬು ಹಾಗೂ ರೆಹಮಾನ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ವಿಶೇಷಗಳಲ್ಲಿ ಒಂದು. ಚಿತ್ರದ ನಾಯಕಿಯ ಆಯ್ಕೆ ನಡೆಯುತ್ತಿದ್ದು, ಗೋಲ್ಡನ್ ಗರ್ಲ್ ರಮ್ಯಾ ಅವರ ಆಯ್ಕೆ ಬಹುತೇಕ ಖಚಿತವಾಗಿದೆ.

  ಅಂದಹಾಗೆ ಇದು ಮಲೆಯಾಳಂನ 'ಅಭಿಯುನಾನುಂ ಥರುಂ' ಎಂಬ ಚಿತ್ರದ ರೀಮೇಕ್. ಇಬ್ಬರು ಗೆಳೆಯರು ಬದ್ಧಶತ್ರುಗಳಾಗಿ ಬದಲಾಗುವ ಚಿತ್ರಕಥಾ ಹಂದರವನ್ನು ಒಳಗೊಂಡಿದೆ. ಮೂಲದಲ್ಲಿ ಮೋಹನ್ ಲಾಲ್ ಹಾಗೂ ಶ್ರೀನಿವಾಸನ್ ಅಭಿನಯಿಸಿದ್ದರು. (ದಟ್ಸ್‌ಕನ್ನಡ ಚಿತ್ರವಾರ್ತೆ)

  English summary
  A film in the combination of Real Star Upendra and director Prem to be launch on Upendra birthday (Sep 18). The latest buzz is the film titled as 'Gandhinagara Mahatme'.Though producer Muniratna has not yet zeroed the director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X