Just In
Don't Miss!
- News
ನಮ್ಮನ್ನು ಬಿಟ್ಟು ಓಡುತ್ತಿವೆ 500 ನಕ್ಷತ್ರಗಳು, ವಿಜ್ಞಾನಿಗಳಿಂದ ರಹಸ್ಯ ರಿವೀಲ್..!
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರಗುಪ್ತರ ಕಿವಿಗೆ ಬಿದ್ದ ಗಾಂಧಿನಗರದ ಆಘಾತಕಾರಿ ಸುದ್ದಿ!
ಲೊಕೇಷನ್: ಯಮಲೋಕದ ಪಕ್ಕದ ಬಣ್ಣದಲೋಕ!
ಸಮಯ: ಸಾಡೇ ಸಾತ್!
ಯಮಧರ್ಮ: ಯಾಕೆ ಚಿತ್ರಗುಪ್ತರೇ? ಇಲ್ಲಿ ಕೂತು ಏನು ಯೋಚಿಸುತ್ತಿರುವಿರಿ?
ಚಿತ್ರಗುಪ್ತ: ಏನೆಂದು ಹೇಳಲಿ ಮಹಾಪ್ರಭು... ಹಾಗೇ ಒಂದು ಸುತ್ತ ಗಾಂಧೀನಗರಕ್ಕೆ ಹೋಗಿದ್ದೆ... ಅಲ್ಲಿ ಒಂದು ಆಘಾತಕಾರೀ ಸುದ್ದಿ ಕೇಳಿ ಮನಸ್ಸು ಪದರುಗುಟ್ಟಿಬಿಟ್ಟಿತು!
ಯಮಧರ್ಮ: ಅಂಥದ್ದೇನಾಯಿತು ಚಿತ್ರಗುಪ್ತರೇ?
ಚಿತ್ರಗುಪ್ತ: ಹೇಗೆ ಹೇಳಲಿ ಯಮದೊಂಗ ...
ಯಮಧರ್ಮ: ಬಾಯಲ್ಲೇ ಹೇಳಿ ಚಿತ್ರಗುಪ್ತಾ...
ಚಿತ್ರಗುಪ್ತ: ನಿಮಗೆ ನಿರ್ದೇಶಕ ಪ್ರೇಮ್ ಬಗ್ಗೆ ಗೊತ್ತಿರಬೇಕು ಅಲ್ಲವೇ ಯಮಧರ್ಮಾ...
ಯಮಧರ್ಮ: ಹಾ... ಕೇಳಿದ್ದೇನೆ... ಅದೇ ಜೋಗಿ ಎಂಬ ಚಿತ್ರ ಕೊಟ್ಟವರಲ್ಲವೇ... ಗೊತ್ತುಂಟು...
ಚಿತ್ರಗುಪ್ತ: ಅದೇ ಪ್ರೇಮ್ ಅವರು ಜೋಗಿ ಚಿತ್ರದಲ್ಲಿ ಒಂದು ಹಾಡು ಬರೆದಿದ್ದಾರೆ... ಏಳು ಮಲೆ ಮೇಲೇರಿ ಕುಂತಾನ್ ನಮ್ಮಾ ಮಾದೇವಾ...
ಯಮಧರ್ಮ: ಹಾ... ಎಲ್ಲೋ ಕೇಳಿದ ನೆನಪು....
ಚಿತ್ರಗುಪ್ತ: ಅಹುದು... ಅದೇ ಹಾಡನ್ನು ತಾನೇ ಕೈಯಾರೇ ಬರೆದಿದ್ದೇನೆ ಎಂದು ಪ್ರೇಮ್ ಎಲ್ಲಾ ಕಡೆ ಹೇಳಿಕೊಂಡಿದ್ದಾರೆ. ಆದರೆ, ನನಗೆ ಬಂದ ಮಾಹಿತಿಯ ಪ್ರಕಾರ ಆ ಹಾಡನ್ನು ಬರೆದದ್ದು ಪ್ರೇಮ್ ಅಲ್ಲ!
ಯಮಧರ್ಮ: ಏನು ಮಾತನಾಡುತ್ತಿರುವೆ ಚಿತ್ರಗುಪ್ತಾ? ತಮಾಷಿ ಮಾಡುವ ಹೊತ್ತೇ ಇದು?
ಚಿತ್ರಗುಪ್ತ: ಇಲ್ಲ ಯಮಾ ಮಾಮಾ... ಆ ಹಾಡನ್ನು ಬರೆದಿದ್ದು ಎರಡು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬರೆದಿರುವ, ರಾ ರಾ... ಹಾಡಿನ ಖ್ಯಾತಿಯ ಗೋಟೂರಿ...!!!
ಯಮಧರ್ಮ: !!!???!!!