»   » ಫಣಿ ಫಟ್‌: ‘ಸಾಹಸ ಲಕ್ಷ್ಮಿ’ಯರಾಗಿ ‘ದರಿದ್ರ ಲಕ್ಷ್ಮಿಯರು’

ಫಣಿ ಫಟ್‌: ‘ಸಾಹಸ ಲಕ್ಷ್ಮಿ’ಯರಾಗಿ ‘ದರಿದ್ರ ಲಕ್ಷ್ಮಿಯರು’

Subscribe to Filmibeat Kannada

* ದಟ್ಸ್‌ಕನ್ನಡ ಬ್ಯೂರೋ

‘ದರಿದ್ರ ಲಕ್ಷ್ಮಿಯರು’ ಇನ್ನು ಮುಂದೆ ‘ಸಾಹಸ ಲಕ್ಷಿ’್ಮಯರಾಗಲಿದ್ದಾರೆ. ‘ಸಾಹಸ ಸಿಂಹ’ನ ಪೊರಕೆ ಸೇವೆಯ ಕರೆಗೆ ಬೆಚ್ಚಿ ಫಣಿ ರಾಮಚಂದ್ರ ಈ ಬದಲಾವಣೆ ತಂದಿಲ್ಲ ; ವಿಶ್ವ ಕನ್ನಡಿಗರ ವೇದಿಕೆಯ ಜೋರು ಪ್ರತಿಭಟನೆಯಿಂದ ಫಣಿ ಬುಸುಗುಟ್ಟಿವಿಕೆಯನ್ನು ನಿಲ್ಲಿಸಿದ್ದಾರೆ.

ಈ ಬದಲಾವಣೆಗೆ ಫಣಿ ಒಲ್ಲದ ಮನಸ್ಸಿನಿಂದ ಒಪ್ಪಲೇಬೇಕಾಯಿತು. ಶುಕ್ರವಾರ ಉದಯ ಟಿವಿ ಕಚೇರಿ ಮುಂದೆ ವಿಶ್ವ ಕನ್ನಡ ವೇದಿಕೆಯ ಸದಸ್ಯರು ಚಕ್ಕಳಮಕ್ಕಳ ಹಾಕಿ ಕುಂತು ಫಣಿಯ ‘ದರಿದ್ರ ಲಕ್ಷ್ಮಿಯರ’ ವಿರುದ್ಧ ಬುಸುಗುಟ್ಟಿದರು. ಮಾಜಿ ಶಾಸಕ ಪಿ.ಎಸ್‌.ಪ್ರಕಾಶ್‌ ಕೂಡ ಪ್ರತಿಭಟನಾ ತಂಡದಲ್ಲಿದ್ದರು. ಕನ್ನಡ ಬಾವುಟ ಹಿಡಿದ ಅನೇಕ ಹೆಂಗಸರು ಮೊದಲೇ ಶೋಷಣೆಗೆ ಗುರಿಯಾಗಿರುವ ಹೆಂಗಸರನ್ನು ‘ದರಿದ್ರ ಲಕ್ಷ್ಮಿಯರು’ ಅನ್ನುವುದರಿಂದ ಪರಿಸ್ಥಿತಿ ಇನ್ನೂ ಹದಗೆಡುತ್ತದೆ ಎಂದು ಕಿಡಿ ಕಾರಿದರು.

ಪ್ರತಿಭಟನೆಗೆ ಕುಂತವರ ಪಟ್ಟನ್ನು ಸಡಿಲಿಸುವಲ್ಲಿ ವಿಫಲವಾದ ಉದಯ ಟಿವಿ ಸಿಬ್ಬಂದಿ, ಫಣಿಯ ಮೆಗಾ ಧಾರಾವಾಹಿ ‘ದರಿದ್ರ ಲಕ್ಷ್ಮಿಯರು’ ಹೆಸರನ್ನು ‘ಸಾಹಸ ಲಕ್ಷ್ಮಿಯರು’ ಎಂದು ಬದಲಾಯಿಸುವುದಾಗಿ ಮಾತು ಕೊಟ್ಟರು. ಆಮೇಲೆ ಪ್ರತಿಭಟನೆ ತಣ್ಣಗಾಯಿತು.

‘ದರಿದ್ರ ಲಕ್ಷ್ಮಿಯರು ಅಂತ ಹೆಸರಿಡೋಕೆ ಬಲವಾದ ಸಮರ್ಥನೆಯಿತ್ತು. ಸಂಬದ್ಧ ಕಾರಣವೂ ಇತ್ತು. ಧಾರಾವಾಹಿ ಇನ್ನೂ ಅನೇಕ ತಿರುವುಗಳನ್ನು ಪಡೆದುಕೊಳ್ಳಲಿದೆ. ನಾನು ಹೇಳೋಕೆ ಹೊರಟಿದ್ದನ್ನು ಅರ್ಥ ಮಾಡಿಕೊಳ್ಳದೆ ವಿನಾ ಕಾರಣ ನನ್ನ ಮೇಲೆ ಕಿಡಿ ಕಾರುತ್ತಿದ್ದಾರೆ. ಬೇಸರವಾಗುತ್ತಿದೆ. ಆದರೂ ಬದಲಾವಣೆ ತರುವುದು ಈಗ ಅನಿವಾರ್ಯವಾಗಿದೆ’ ಎಂದು ಫಣಿ ಹ್ಯಾಪುಮೋರೆ ಹಾಕಿಕೊಂಡು ಪ್ರತಿಕ್ರಿಯಿಸಿದರು.

ಅಂದಹಾಗೆ, ಸೋಮವಾರ (ಜ.20) ದಿಂದ ಧಾರಾವಾಹಿಯ ಟೈಟಲ್‌ ಹಾಡು ‘ದರಿದ್ರ ಲಕ್ಷ್ಮಿಯರು ಇವರು ದರಿದ್ರ ಲಕ್ಷ್ಮಿಯರು...’ ಬದಲಿಗೆ ‘ಪೂಜಿಪೆನೆ ನಿನ್ನ ಜಾಜಿ ಪುಷ್ಪಗಳಿಂದ...’ ಎಂದು ಬದಲಾಗಲಿದೆ.

ಫಣಿ ಜಾರಿ ಬಿದ್ದದ್ದನ್ನು ಕಂಡು ವಿಷ್ಣುವರ್ಧನ್‌ ಅಂಟಿಸಿಕೊಂಡ ದೊಡ್ಡ ಮೀಸೆಯಡಿ ನಗುತ್ತಿದ್ದರೆ, ಫಣಿ ಇಡೀ ಧಾರಾವಾಹಿಯ ತಿದ್ದುವ ಕೆಲಸದಲ್ಲಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಫಣಿ ಪಾಪ, ಅದೃಷ್ಟ ವಂಚಿತರು !

ವಾರ್ತಾ ಸಂಚಯ
ಜಯಮಾಲಿನಿ ಜತೆ ಕುಣಿದ ವಿಷ್ಣುಗೆ ರೋಷ ಯಾಕೋ?
ವಿಷ್ಣು ಹೇಳಿದ್ದು ಸರಿ, ಇಲ್ಲಾರೀ ಅದು ಚೂರು ಅತಿ !
ಫಣಿಗೆ ಹೆಂಗಸರೆಲ್ಲ ಪೊರಕೇಲಿ ಹೊಡೀಬೇಕು- ವಿಷ್ಣುವರ್ಧನ್‌
ಫಣಿ ರಾಮಚಂದ್ರ ಮೇಲೆ ಹೆಂಗಸರ ಫಣಿ !

Post your Views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada