»   » ಉಪ್ಪಿ 'ಸೂಪರ್' ಚಿತ್ರದಿಂದ ಗುರುಕಿರಣ್ ಔಟ್

ಉಪ್ಪಿ 'ಸೂಪರ್' ಚಿತ್ರದಿಂದ ಗುರುಕಿರಣ್ ಔಟ್

Posted By:
Subscribe to Filmibeat Kannada

ಈಗಾಗಲೇ ಚಾಲನೆ ಪಡೆದುಕೊಂಡಿರುವ ಉಪೇಂದ್ರ ಅವರ 'ಸೂಪರ್' ಚಿತ್ರದಿಂದ ಸಂಗೀತ ನಿರ್ದೇಶಕ ಗುರುಕಿರಣ್ ಹೊರಬಿದ್ದಿದ್ದಾರೆ. ಉಪ್ಪಿ ನೆಚ್ಚಿನ ಸಂಗೀತ ನಿರ್ದೇಶಕರಲ್ಲಿ ಗುರುಕಿರಣ್ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.ಕನ್ನಡ ಚಿತ್ರರಂಗದ ಮೂಲಗಳ ಪ್ರಕಾರ, ಗುರುಕಿರಣ್ ಸ್ಥಾನಕ್ಕೆ ವಿ ಮನೋಹರ್ ಅವರು ಆಯ್ಕೆಯಾಗಿದ್ದಾರಂತೆ.

ಈಗಾಗಲೇ ಉಪ್ಪಿ ತಮ್ಮ 'ಸೂಪರ್' ಚಿತ್ರಕ್ಕೆ ನಯನತಾರಾ ನಾಯಕಿ ಎಂದು ಪ್ರಕಟಿಸಿಯಾಗಿದೆ. ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸುದ್ದಿಗೋಷ್ಠಿಯನ್ನು ಕರೆದು ಚಿತ್ರದ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಿದ್ದಾರೆ. ಇದೀಗ ಚಿತ್ರದಿಂದ ಗುರುಕಿರಣ್ ಹೊರಬಿದ್ದ ಸುದ್ದಿ ಸ್ಫೋಟಗೊಂಡಿದೆ.

ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಎ' ಚಿತ್ರದ ಮೂಲಕ ಗುರುಕಿರಣ್ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದರು. ಉಪ್ಪಿಯ ಬಹುತೇಕ ಚಿತ್ರಗಳಲ್ಲಿ ಗುರುಕಿರಣ್ ಗೆ ಖಾಯಂ ಸ್ಥಾನ ಇರುತ್ತಿತ್ತು. ಹೀಗಿದ್ದೂ ಉಪ್ಪಿ ಹೊಸ ಚಿತ್ರದಿಂದ ಗುರು ಹೊರಬಿದ್ದದ್ದು ಯಾಕೆ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಒಟ್ಟಿನಲ್ಲಿ ವಿ ಮನೋಹರ್ ಗೆ ಉತ್ತಮ ಅವಕಾಶ ಸಿಕ್ಕಂತಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada