»   » ದರ್ಶನ್, ಪುನೀತ್, ಸುದೀಪ್, ಉಪ್ಪಿ ಮಲ್ಟಿಸ್ಟಾರ್ ಚಿತ್ರ

ದರ್ಶನ್, ಪುನೀತ್, ಸುದೀಪ್, ಉಪ್ಪಿ ಮಲ್ಟಿಸ್ಟಾರ್ ಚಿತ್ರ

Posted By:
Subscribe to Filmibeat Kannada

ಇವರಿಷ್ಟು ಸ್ಟಾರ್‌ಗಳು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡರೆ ಹೇಗೆ? ಕನ್ನಡ ಚಿತ್ರಪ್ರೇಮಿಗಳಿಗೆ ಒಮ್ಮೆಲೆ ಯುಗಾದಿ, ಸಂಕ್ರಾಂತಿ, ದೀಪಾವಳಿ. ಇಷ್ಟು ಸ್ಟಾರ್‌ಗಳ ಕಾಲ್‌ಶೀಟ್ ಹೊಂದಿಸುವುದು ಹೇಗೆ? ಆಕ್ಷನ್ ಕಟ್ ಹೇಳುವವರು ಯಾರು? ಬಜೆಟ್ ಎಷ್ಟಾಗಬಹುದು? ನಾಯಕಿಯರು ಯಾರಾಗಬಹುದು?

ಇದೇ ರೀತಿಯ ಪ್ರಶ್ನೆಗಳು ಗಾಂಧಿನಗರದಲ್ಲಿ ತಲೆ ಕೊರೆಯುತ್ತಿವೆ. ಇದಕ್ಕೆ ಕಾರಣವಾಗಿರುವುದು ಪ್ರಚಂಡ ಕುಳ್ಳ ದ್ವಾರಕೀಶ್. 'ವಿಷ್ಣುವರ್ಧನ' ಚಿತ್ರದ ಸಕ್ಸಸ್ ಬಳಿಕ ದ್ವಾರಕೀಶ್ ಮತ್ತೊಂದು ಚಿತ್ರದ ಭಾರಿ ಸಿದ್ಧತೆಯಲ್ಲಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಜೀವಮಾನದ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.

ಇಷ್ಟು ಮಂದಿ ನಾಯಕ ನಟರನ್ನು ಹಾಕಿಕೊಂಡು ಚಿತ್ರ ಮಾಡಲು ಹೊರಟಿದ್ದಾರೆ. ತಮ್ಮ ಮಹತ್ವಾಕಾಂಕ್ಷಿ ಚಿತ್ರಕ್ಕೆ 'ಕರ್ನಾಟಕ ಗತವೈಭವ' ಎಂದು ಹೆಸರಿಟ್ಟಿದ್ದಾರೆ. ಐದು ಮಂದಿ ನಿರ್ದೇಶಕರನ್ನು ಹಾಕಿಕೊಂಡು ಚಿತ್ರ ಮಾಡುವ ಮತ್ತೊಂದು ಸಾಹಸ ದ್ವಾರಕೀಶ್ ಅವರದು. ಸೂರಿ, ಯೋಗರಾಜ್ ಭಟ್, ದಿನಕರ್ ತೂಗುದೀಪ ಹಾಗೂ ಸುದೀಪ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವವರು.

ಇಷ್ಟಕ್ಕೂ ಕತೆ ಏನೆಂದರೆ, ಕರ್ನಾಟಕವನ್ನು ಆಳಿದ ಐದು ರಾಜವಂಶಸ್ಥರದ್ದು. ಇದೆಲ್ಲಾ ಕೇಳೋದಕ್ಕೆ ಸೊಗಸಾಗಿಯೇ ಇದೆ. ಆದರೆ ದ್ವಾರಕೀಶ್ ಇನ್ನೂ ಯಾವೊಬ್ಬ ನಟನೊಂದಿಗೂ ಮಾತನಾಡಿಲ್ಲ. ಅವರಲ್ಲೇ ಒಂದು ಕನಸಿನ ಬೀಜ ಬಿತ್ತಿದ್ದಾರೆ. ಅದು ಇನ್ನಷ್ಟೇ ಮೊಳಕೆಯೊಡೆದು ಗಿಡವಾಗಬೇಕು. ಅಲ್ಲಿಯವರೆಗೂ 'ಕರ್ನಾಟಕ ಗತವೈಭವ' ಗೊಟಕ್ ಎಂದರೂ ಎನ್ನಬಹುದು. (ಏಜೆನ್ಸೀಸ್)

English summary
Kannada film producer Dwarakish plans to do a multistar film in Kannada titled as Karnataka Gatavaibhava. Probabaly the film has Sudeep, Darshan, Puneeth Rajkumar and Sudeep in lead.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X