»   » ಹುಲಿ ಚಿತ್ರತಂಡಮೇಲೆ ಕಿಡಿಗೇಡಿಗಳ ದಾಂಧಲೆ

ಹುಲಿ ಚಿತ್ರತಂಡಮೇಲೆ ಕಿಡಿಗೇಡಿಗಳ ದಾಂಧಲೆ

Posted By:
Subscribe to Filmibeat Kannada

 ಕಿಶೋರ್ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಹುಲಿ' ಚಿತ್ರೀಕರಣದ ವೇಳೆ ಕಿಡಿಗೇಡಿಗಳು ದಾಂಧಲೆ ನಡೆಸಿದ ಘಟನೆ ಮೈಸೂರಿನ ದೊಡ್ಡಕೆರೆ ಆವರಣದಲ್ಲಿ ಮಂಗಳವಾರ(ಏ.20) ಮಟ ಮಟ ಮಧ್ಯಾಹ್ನ ನಡೆದಿದೆ. ಕಿಡಿಗೇಡಿಗಳು ಚಿತ್ರೀಕರಣದ ವಾಹನಗಳನ್ನು ಜಖಂಗೊಳಿಸಿದ್ದಾರೆ.

ಓಂಪ್ರಕಾಶ್ ರಾವ್ ನಿರ್ದೇಶನದ ಹುಲಿ ಚಿತ್ರೀಕರಣ ಅರಮನೆ ಆವರಣ ಎದುರಿನ ದೊಡ್ಡಕೆರೆ ಆವರಣದಲ್ಲಿ ಸಾಗುತ್ತಿತ್ತು. ಆ ಸಮಯದಲ್ಲಿ ಫುಟ್ಬಾಲ್ ಮೈದಾನದಲ್ಲಿ ಆಟವಾಡುತ್ತಿದ್ದ ಹುಡುಗರು ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಹುಡುಗರ ನಡುವೆ ಮಾತಿನ ಚಕಮಕಿ ನಡೆದಿದೆ.

ಚಿತ್ರತಂಡ ಹಾಗೂ ಹುಡುಗರ ನಡುವಿನ ವಾಗ್ವಾದ ವಿಕೋಪಕ್ಕೆ ಹೋಗಿ ಚಿತ್ರತಂಡದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದ ಪರಿಣಾಮ ಚಿತ್ರೀಕರಣಕ್ಕೆ ಬಳಸಲಾದ ಜನರೇಟರ್ ವಾಹನ, 2 ಟಾಟಾ ಸುಮೋ, 2 ಬೈಕ್ ಹಾಗೂ ನಾಯಕ ನಟ ಕಿಶೋರ್ ಅವರ ಕಾರು ಜಖಂಗೊಂಡಿದೆ.

ಸುದ್ದಿ ತಿಳಿದ ಮೈಸೂರು ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕಿಡಿಗೇಡಿಗಳು ಕಾಲಿಗೆ ಬುದ್ಧಿ ಹೇಳಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದ್ದು ಚಿತ್ರೀಕರಣ ನಡೆಯುತ್ತಿದೆ ಎಂದು ಕಿಶೋರ್ ತಿಳಿಸಿದ್ದಾರೆ. ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಚಿತ್ರೀಕರಣ ಮಾಡುವಾಗಲೂ ಹುಲಿ ಚಿತ್ರತಂಡ ವಿವಾದಕ್ಕೆ ಸಿಲುಕಿತ್ತು. ಈ ಘಟನೆ ಕಳೆದ ಮಂಗಳವಾರ ನಡೆದಿತ್ತು.

ಮೃಗಾಲಯದಲ್ಲಿನ ಹುಲಿಯನ್ನು ಚಿತ್ರೀಕರಣ ನಡೆಸಲು ಅನುಮತಿ ಪಡೆಯಲಾಗಿತ್ತು. ಮೃಗಾಲಯ ಸಿಬ್ಬಂದಿಯ ಎಚ್ಚರಿಕೆಯನ್ನು ಗಮನಿಸದೆ ಚಿತ್ರತಂಡ ಅತಿಯಾದ ಶಬ್ದ, ಬೆಳಕು ಜನರೇಟರ್ ಬಳಸಿ ಪ್ರಾಣಿಗಳು ಬೆದರುವಂತ ಮಾಡಿದ್ದರು. ಈ ಕಾರಣಕ್ಕೆ ಚಿತ್ರೀಕರಣ ಬಂದ್ ಮಾಡಲಾಗಿತ್ತು. ಚಿತ್ರದ ನಾಯಕಿ ಜೆನ್ನಿಫರ್ ಕೊತ್ವಾಲ್ ಇಂದಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada