»   » 'ಡೈರೆಕ್ಟರ್ಸ್ ಸ್ಪೆಷಲ್'ಗೆ ಉಪೇಂದ್ರ ಎಲ್ಲಾ ಬರಿ ಓಳು

'ಡೈರೆಕ್ಟರ್ಸ್ ಸ್ಪೆಷಲ್'ಗೆ ಉಪೇಂದ್ರ ಎಲ್ಲಾ ಬರಿ ಓಳು

Posted By:
Subscribe to Filmibeat Kannada

'ಡೈರೆಕ್ಟರ್ಸ್ ಸ್ಪೆಷಲ್'ಗೆ ಉಪೇಂದ್ರ ನಾಯಕ ನಟನಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕೇವಲ ಗಾಸಿಪ್ ಅಷ್ಟೆ ಎಂಬುದನ್ನು ನಿರ್ದೇಶಕ ಗುರು ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಚಿತ್ರಕ್ಕೆ ಸಂಬಂಧ ಪಟ್ಟಂತೆ ಉಪೇಂದ್ರ ಬಳಿ ನಾನು ಎಲ್ಲಿಯೂ ಮಾತನಾಡಿಯೇ ಇಲ್ಲ.ಈ ರೀತಿಯ ಸುದ್ದಿಗಳು ಹೇಗೆ ಹಬ್ಬುತ್ತವೋ ಆ ದೇವರೇ ಬಲ್ಲ ಎಂದು ಗುರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಗುರು ಪ್ರಸಾದ್ ಮಾತನಾಡುತ್ತಾ, ಚಿತ್ರದ ಬಗೆಗೆ ನನ್ನದೇ ಆದಂತಹ ಕೆಲವು ಧೋರಣೆಗಳಿವೆ. ದೊಡ್ಡ ಸ್ಟಾರ್ ಗಳಿಲ್ಲದೆ ಕಡಿಮೆ ಬಜೆಟ್ ನಲ್ಲಿ ಉತ್ತಮ ಚಿತ್ರಗಳನ್ನು ನೀಡಬೇಕು ಎಂಬುದು ನನ್ನ ಆಸೆ. ಹಾಗಾಗಿ ಉಪೇಂದ್ರ ನನ್ನ ಚಿತ್ರದಲ್ಲಿ ನಟಿಸುತ್ತಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎನ್ನುತ್ತ್ತಾರೆ ಗುರು.

ಏತನ್ಮಧ್ಯೆ ಗುರು ಪ್ರಸಾದ್ ಅವರ 'ಎದ್ದೇಳು ಮಂಜುನಾಥ'ಸಿಡಿಗಳು ದಾಖಲೆ ಮಾರಾಟ ಕಂಡಿವೆ. ಕ್ರಿಸ್ ಮಸ್ ಹಬ್ಬದಂದು ಜೀ ಕನ್ನಡದಲ್ಲಿ 'ಎದ್ದೇಳು ಮಂಜುನಾಥ' ಚಿತ್ರ ಪ್ರಸಾರವಾಗಿತ್ತು. ಚಿತ್ರ ಪ್ರಸಾರವಾದ ಬಳಿಕ 'ಎದ್ದೇಳು ಮಂಜುನಾಥ'ನ 10 ಸಾವಿರ ಡಿವಿಡಿಗಳು ಬಿಸಿ ದೋಸೆಯಂತೆ ಖರ್ಚಾಗಿವೆ. 'ಎದ್ದೇಳು ಮಂಜುನಾಥ 'ಸಿಡಿಗಳಿಗೆ ಬೇಡಿಕೆ ಹೆಚ್ಚಾದ ಕಾರಣ ಝೇಂಕಾರ್ ಆಡಿಯೋ ಕಂಪನಿ ಎರಡನೆ ಕಂತಿನ ಡಿವಿಡಿಗಳನ್ನು ಭರದಿಂದ ತಯಾರಿಸುತ್ತಿದೆ.

ಈ ಹಿಂದೆ ತೆರೆಕಂಡಂತಹ 'ಮಠ' ಚಿತ್ರದ ಡಿವಿಡಿಗಳು 4 ಲಕ್ಷ ದಾಖಲೆ ಮಾರಾಟ ಕಂಡಿದ್ದವು. ಗುರುಪ್ರಸಾದ್ ಅವರ 'ಎದ್ದೇಳು ಮಂಜುನಾಥ' ಮತ್ತು 'ಮಠ' ಚಿತ್ರಗಳನ್ನು ಪ್ರೇಕ್ಷಕರು ಚಿತ್ರಮಂದಿರಕ್ಕಿಂತ ಹೆಚ್ಚಾಗಿ ಟಿವಿ ಮುಖಾಂತ ನೋಡಿ ಆನಂದಿಸಿದ್ದಾರೆ. ಇದೀಗ ಡಿವಿಡಿಗಳಿಗೆ ಮುಗಿಬಿದ್ದಿರುವ ಪ್ರೇಕ್ಷಕರು ಗುರುಪ್ರಸಾದ್ ಚಿತ್ರಗಳಿಗೆ ಹಾತೊರೆಯುವಂತಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada