For Quick Alerts
  ALLOW NOTIFICATIONS  
  For Daily Alerts

  ಅವಳು ಜಮುನಾ ಅಲ್ಲ, ಯಮುನಾ: ಶಂಕರ ಬಿದರಿ

  By Mahesh
  |

  ಬೆಂಗಳೂರಿನವಿಠಲ್ ಮಲ್ಯ ರಸ್ತೆಯಲ್ಲಿರುವ ಐಟಿಸಿ ರಾಯಲ್ ಗಾರ್ಡೇನಿಯಾ ಪಂಚತಾರಾ ಹೋಟೆಲ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಬಂಧಿತಳಾದ ನಟಿ ಹೆಸರು ಜಮುನಾ ಅಲ್ಲ ಯಮುನಾ ಅಲಿಯಾಸ್ ಸೌಮ್ಯ ಎಂದು ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಸ್ಪಷ್ಟಪಡಿಸಿದ್ದಾರೆ. ಕಳೆದ ಹಲವು ಖಾಗಿ ಸುದ್ದಿ ವಾಹಿನಿಗಳಲ್ಲಿ ಬಂಧಿತಳನ್ನು ಜಮುನಾ ಎಂದು ಹೇಳಲಾಗಿತ್ತು. ಕನ್ನಡ ಸೇರಿದಂತೆ ತಮಿಳು, ತೆಲುಗು ವಿವಿಧ ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ನಟಿ ಯಮುನಾ ಸೇರಿದಂತೆ ಒಟ್ಟು 9 ಜನರನ್ನು ಬಂಧಿಸಿದ್ದೇವೆ ವಿಚಾರಣೆ ಜಾರಿಯಲ್ಲಿದೆ ಎಂದು ಬಿದರಿ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

  ನಟಿಮಣಿಯ ಜೊತೆಗಿದ್ದ ಸಾಫ್ಟ್ ವೇರ್ ಕಂಪೆನಿ ಸಿಇಒ ವೇಣುಗೋಪಾಲ್ ಅವರ ವಿವರಗಳನ್ನು ಬಿದರಿ ನೀಡಲಿಲ್ಲ. ಬದಲಿಗೆ ಈ ಹೈಟೆಕ್ ವೇಶ್ಯಾವಾಟಿಕೆ ಬಗ್ಗೆ ಆಂಧ್ರ ಪೊಲೀಸರು ಸುಮಾರು ಮೂರು ತಿಂಗಳ ಹಿಂದೆಯೇ ಸುಳಿವು ನೀಡಿದ್ದರು. ನಾವು ಸರಿಯಾದ ಸಮಯಕ್ಕೆ ಕಾಯುತ್ತಿದ್ದೆವು. ಗುರುವಾರ ಐಟಿಸಿ ಗಾರ್ಡೇನಿಯಾ ಹೋಟೆಲ್ ನಲ್ಲಿ ನಟಿ ಹಾಗೂ ಸಂಗಡಿಗರು ಬೀಡುಬಿಟ್ಟಿರುವುದರ ಬಗ್ಗೆ ಖಚಿತ ಮಾಹಿತಿ ದೊರೆತ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ಬಿದರಿ ಹೇಳಿದರು.

  ಯಾರಿದು ಯಮುನಾ: ಈಕೆ ಚಿತ್ರರಂಗಕ್ಕೆ ಹೊಸಬಳೇನಲ್ಲ. 1994ರಲ್ಲಿ "ಚಿನ್ನ" ಚಿತ್ರದಲ್ಲಿ "ನನ್ನವಳು ನನ್ನವಳು ಮುಟ್ಟಿದರೆ... ನಲುಗುವಳು" ಎಂದು ರವಿಚಂದ್ರನ್ ಹಾಡಿಗೆ ಜೊತೆಯಾದವರು, ನಂತರದ ದಿನಗಳಲ್ಲಿ ತೆಲುಗು, ತಮಿಳು, ಮಲೆಯಾಳಂ ಚಿತ್ರರಂಗಕ್ಕೆ ಹಾರಿ ಸಾಕಷ್ಟು ಹೆಸರು ಗಳಿಸಿದ್ದರು. ಕನ್ನಡದಲ್ಲಿ ಇತ್ತೀಚಿನ ಶಂಭೋ ಶಂಕರ ಚಿತ್ರಕ್ಕೂ ಮುನ್ನ ಶಶಿಕುಮಾರ್ ಜೊತೆ "ಹೆಂಡ್ತೀರ್ ಹುಷಾರ್ ", ಶಿವರಾಜ್ ಕುಮಾರ್ ಜೊತೆ 1991ರಲ್ಲೇ "ಮೋಡದ ಮರೆಯಲ್ಲಿ" ಚಿತ್ರದಲ್ಲಿ ನಾಯಕಿಯಾಗಿದ್ದರು ಕೂಡಾ.

  ಕಿರುತೆರೆಯಲ್ಲೂ ಮಿಂಚುತ್ತಿರುವ ಈಕೆ ವಿವಿಧ ಭಾಷೆಗಳಲ್ಲಿ ಪ್ರೈಮ್ ಸಮಯದ ಸಿರಿಯಲ್ ಗಳಲ್ಲಿ ಪ್ರಧಾನ ಪಾತ್ರವಹಿಸಿದ್ದಾರೆ. ಅಲ್ಲದೆ, ಲಕ್ಷ್ಮಿ, ಪಾರ್ವತಿ ಮುಂತಾದ ದೇವತೆಯರ ಪಾತ್ರಗಳಲ್ಲಿ ಆಗಾಗ ಕಾಣಿಸಿಕೊಂಡು ಜನ ಮೆಚ್ಚುಗೆ ಗಳಿಸಿದ್ದಾರೆ. [ವೇಶ್ಯಾವಾಟಿಕೆ]

  English summary
  Bengaluru Police Commissioner Shankar Bidari clarified that multi lingual actress held last night at ITC Royal Gardenia Hotel is Yamuna not Jamuna. Earlier many media reported her name as Jamuna. CCB Police had information on this hitech prostitution three months back he added.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X