»   » ಶೀಘ್ರದಲ್ಲೆ ಗೀತಾ ಬಸ್ರ ಜೊತೆ ಭಜ್ಜಿ ಮದುವೆ!

ಶೀಘ್ರದಲ್ಲೆ ಗೀತಾ ಬಸ್ರ ಜೊತೆ ಭಜ್ಜಿ ಮದುವೆ!

Posted By:
Subscribe to Filmibeat Kannada

ಕ್ರಿಕೆಟಿಗ ಹರ್ಭಜನ್ ಸಿಂಗ್ ಗೆ ಕಂಕಣಬಲ ಕೂಡಿಬಂದಿದೆ. ಬಾಲಿವುಡ್ ಚಿತ್ರರಂಗದ ಸಖತ್ ಹಾಟ್ ಬೆಡಗಿ ಗೀತಾ ಬಸ್ರ ಜೊತೆಯಾಗಲಿದ್ದಾರೆ ಭಜ್ಜಿ ಎಂಬ ಸುದ್ದಿ ಸ್ಫೋಟಗೊಂಡಿದೆ. ಇದಕ್ಕೆ ಪುರಾವೆ ಎಂಬಂತೆ ಇವರಿಬ್ಬರೂ ಜೊತೆಯಾಗಿ ಓಡಾಡುತ್ತಿರುವುದು, ಕಾಣಿಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಇಷ್ಟು ದಿನ ಇಬರಿಬ್ಬರ ನಡುವೆ ಅನ್ಯೋನ್ಯ ಮೈತ್ರಿಯಿತ್ತು. ಆದರೀಗ ಆ ಮೈತ್ರಿ ಮದುವೆ ತನಕ ಬಂದಿದೆ ಎನ್ನುತ್ತವೆ ಮೂಲಗಳು. ತೀರಾ ಇತ್ತೀಚೆಗಷ್ಟೇ ಭಜ್ಜಿ ಕುಟುಂಬದರವರನ್ನು ಗೀತಾ ಭೇಟಿಯಾಗಿ ತಮ್ಮ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರಂತೆ. ಹೌದಾ! ಇದು ನಿಜವೆ? ಎಂದು ಪ್ರಶ್ನಿಸಿದರೆ ಗೀತಾ ಬಸ್ರ ಪತ್ರಕರ್ತರ ಮೇಲೆ ರಾಂಗ್ ಆಗುತ್ತಾರೆ.

ಅಷ್ಟೆ ಅಲ್ಲ ಇತ್ತೀಚೆಗೆ ಭಜ್ಜಿ ತನ್ನ ತಂಗಿ ಸಂದೀಪ್ ಕೌರ್ ಮದುವೆಗೆ ಗೀತಾರನ್ನು ಆಹ್ವಾನಿಸಿದ್ದ. ಅದೊಂದು ತೀರಾ ಖಾಸಗಿ ಕಾರ್ಯಕ್ರಮವಾಗಿತ್ತು. ಮದುವೆ ಸಮಾರಂಭದಲ್ಲಿ ಭಜ್ಜಿ ಕುಟುಂಬಿಕರು ಗೀತಾರಿಗೆ ಚೆನ್ನಾಗಿ ಸತ್ಕಾರವನ್ನು ಮಾಡಿದ್ದಾರೆ. ಗೀತಾ ಸಹ ಚೆನ್ನಾಗಿ ಹೊಂದಿಕೊಂಡು ಭಜ್ಜಿ ಕುಂಟುಂಬಕ್ಕೆ ಸಖತ್ ಇಷ್ಟವಾಗಿದ್ದಾರಂತೆ.

ಇದೇ ಸೂಕ್ತ ಸಮಯ ಆದಷ್ಟು ಬೇಗ ಮದುವೆ ಬಗ್ಗೆ ಪ್ರಸ್ತಾಪಿಸಿ ಇತ್ಯರ್ಥ ಮಾಡಿಕೊಳ್ಳಿ ಎಂದು ಅತ್ತ ಭಜ್ಜಿ ಇತ್ತ ಗೀತಾ ಗೆಳೆಯರು ಒತ್ತಾಯಿಸಿದ್ದಾರೆ. ಹಾಗಾಗಿ ಗೀತಾ ನೇರವಾಗಿ ತಮ್ಮ ಮದುವೆ ವಿಚಾರನ್ನು ಭಜ್ಜಿ ಪೋಷಕರೊಂದಿಗೆ ಮಾತನಾಡಿದ್ದಾರೆ ಎನ್ನುತ್ತವೆ ಮೂಲಗಳು.

ಸಾಲದಕ್ಕೆ ಐಪಿಎಲ್ ಪಂದ್ಯಾವಳಿಯಲ್ಲಿ ಗೀತಾ ಕಾಣಿಸಿಕೊಂಡು ಭಜ್ಜಿ ಹಾಗೂ ಅವರ ಮುಂಬೈ ಇಂಡಿಯನ್ಸ್ ತಂಡಕ್ಕೆ ಚಿಯರ್ಸ್ ಹೇಳುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾದ ಮುಕೇಶ್ ಮತ್ತು ನೀತಾ ಅಂಬಾನಿ ಸಹ ಗೀತಾ ಪಂದ್ಯ ವೀಕ್ಷಿಸಲು ಆಹ್ವಾನಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ನಡುವೆ ನಡೆದ ಪಂದ್ಯದ ವೇಳೆಯೂ ಗೀತಾ ಕಾಣಿಸಿಕೊಂಡಿದ್ದರು.

ಇಷ್ಟೆಲ್ಲಾ ನಡೆಯುತ್ತಿದ್ದರೂ ಗೀತಾ ಮಾತ್ರ ಎಂದಿನಂತೆ ಭಜ್ಜಿ ಮತ್ತು ನಾನು ಕೇವಲ ಗೆಳೆಯರಷ್ಟೆಎಂದಿದ್ದಾರೆ. ಸದ್ಯಕ್ಕೆ ನಾವು ನಮ್ಮ ದೃಷ್ಟಿಯನ್ನು ನಮ್ಮನಮ್ಮ ವೃತ್ತಿಗಳ ಮೇಲೆ ಕೇಂದ್ರಿಕರಿಸಿದ್ದೇವೆ. ಮದುವೆ ಗಿದುವೆ ಎಂಬುದೆಲ್ಲಾ ಸುಳ್ಳು ಎಂದು ಗೀತಾ ಹೇಳಿದ್ದಾರೆ.ಆದರೆ ಭಜ್ಜಿ ಮಾತ್ರ ಏನನ್ನು ಹೇಳದೆ ಮಗುಮ್ಮಾಗಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada