»   » ಮುಂಬೈ ಕೋರ್ಟ್‌ಗೆ ಶಿಲ್ಪಾ,ರಿಚರ್ಡ್ ಚುಂಬನ ಪ್ರಕರಣ

ಮುಂಬೈ ಕೋರ್ಟ್‌ಗೆ ಶಿಲ್ಪಾ,ರಿಚರ್ಡ್ ಚುಂಬನ ಪ್ರಕರಣ

Posted By:
Subscribe to Filmibeat Kannada

ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ವಿರುದ್ಧದ ಮೂರು ಕೇಸುಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂಬೈ ಕೋರ್ಟ್‌ಗೆ ವರ್ಗಾಯಿಸಿದೆ. 2007ರಲ್ಲಿ ಉತ್ತರ ಪ್ರದೇಶ ಹಾಗೂ ರಾಜಸ್ತಾನದಲ್ಲಿ ಹಾಲಿವುಡ್ ಸ್ಟಾರ್ ರಿಚರ್ಡ್ ಗೇರ್‌ ಜೊತೆ ಸಾರ್ವಜನಿಕವಾಗಿ ಚುಂಬಿಸಿದ್ದಕ್ಕೆ ಶಿಲ್ಪಾ ವಿರುದ್ಧ ಕೇಸ್‌ಗಳು ದಾಖಲಾಗಿದ್ದವು.

ಶಿಲ್ಪಾ ಪರ ವಕೀಲರಾದ ಆನಂದ್ ಗ್ರೋವರ್ ಅವರು ಈ ಕೇಸುಗಳ ವಿಚಾರಣೆಯನ್ನು ಮುಂಬೈಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್‌ನ್ನು ಕೋರಿದ್ದರು. ಅದರಂತೆ ನ್ಯಾಯಮೂರ್ತಿಗಳಾದ ಎಕೆ ಗಂಗೂಲಿ ಹಾಗೂ ಜೆಎಸ್ ಖೇಹರ್ ಅವರು ಕೇಸನ್ನು ಮುಂಬೈ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ಗೆ ವರ್ಗಾಯಿಸಿದ್ದಾರೆ.

ಸಾರ್ವಜನಿಕವಾಗಿ ಒಬ್ಬರನ್ನೊಬ್ಬರು ಚುಂಬಿಸಿಕೊಂಡು ಇರುಸುಮುರುಸು ಉಂಟುಮಾಡಿದ್ದರು. ಈ ಬಗ್ಗೆ ಮುಂಬೈ ಕೋರ್ಟ್ ಏನು ತೀರ್ಪು ನೀಡಲಿದೆ ಎಂಬ ಕುತೂಹಲ ಮನೆಮಾಡಿದೆ. ದೆಹಲಿಯಲ್ಲಿ ಏಡ್ಸ್‌ ಜಾಗೃತಿ ಕಾರ್ಯಕ್ರಮದ ವೇದಿಕೆ ಮೇಲೆ ಹಾಲಿವುಡ್‌ ನಟ ರಿಚರ್ಡ್‌ ಗೇರ್‌, ಶಿಲ್ಪಾ ಶೆಟ್ಟಿಯನ್ನು ಅಪ್ಪಿ ಮುದ್ದಾಡಿದ ಘಟನೆ ಎಲ್ಲೆಡೆ ಟೀಕೆಗೆ ಗುರಿಯಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಜೈಪುರದ ನ್ಯಾಯಾಲಯ ಗೇರ್ ಅವರನ್ನು ಬಂಧಿಸುವಂತೆ ಆದೇಶಿಸಿತ್ತು. (ಏಜೆನ್ಸೀಸ್)

English summary
Three cases that were filed against Bollywood actress Shilpa Shetty in 2007 in Uttar Pradesh and Rajasthan for kissing Richard Gere, Hollywood star and AIDS awarness campaigner, in public have been transferred by the Supreme Court to a Mumbai Court on Nov 21.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada