»   »  ಅತ್ಯಾಚಾರ ಸಮಯದಲ್ಲಿ ಶೈನಿ ಮಧ್ಯ ಸೇವಿಸಿಲ್ಲ

ಅತ್ಯಾಚಾರ ಸಮಯದಲ್ಲಿ ಶೈನಿ ಮಧ್ಯ ಸೇವಿಸಿಲ್ಲ

Subscribe to Filmibeat Kannada

ಮುಂಬೈ, ಜೂ. 23 : ಮನೆ ಕೆಲಸದ ಯವತಿಯನ್ನು ಅತ್ಯಾಚಾರ ಕೃತ್ಯ ನಡೆಸಿದ ಸಂದರ್ಭದಲ್ಲಿ ಬಾಲಿವುಡ್ ನಟ ಶೈನಿ ಅಹುಜಾ ಮಧ್ಯಪಾನವಾಗಲಿ ಇಲ್ಲವೆ ಮಾದಕ ವಸ್ತುಗಳನ್ನಾಗಲಿ ಸೇವಿಸಿರಲಿಲ್ಲ ಎಂದು ಇತ್ತೀಚೆಗೆ ನಡೆಸಿದ ವೈದ್ಯಕೀಯ ವರದಿಯಿಂದ ಸ್ಪಷ್ಟವಾಗಿದೆ.

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಡಿಎನ್ಎ ಪರೀಕ್ಷೆ ನಡೆಸಲಾಗಿದೆ, ಅದರ ಬಗ್ಗೆ ವರದಿ ಬರಬೇಕಿದೆ. ಶೈನಿ ಮೂತ್ರ ಹಾಗೂ ರಕ್ತ ಪರೀಕ್ಷೆ ಮಾಡಲಾಗಿದ್ದು, ಅತ್ಯಾಚಾರ ಮಾಡಿದ ಸಮಯದಲ್ಲಿ ಶೈನಿ ಮದ್ಯಪಾನ ಮಾಡಿರುವುದಾಗಲಿ, ಇಲ್ಲವೇ ಮಾದಕ ವಸ್ತುಗಳ ಸೇವನೆ ಮಾಡಿಲ್ಲ. ಸಹಜವಾಗಿ ಇರುವಾಗಲೇ ಈ ಕೃತ್ಯ ಎಸಗಿದ್ದಾನೆ ಎಂದು ಮುಂಬೈ ಪೊಲೀಸ್ ಆಯುಕ್ತ ದಿಲೀಪ್ ಸೂರ್ಯವಂಶಿ ತಿಳಿಸಿದ್ದಾರೆ.

ನಗರದ ಕಾಲಿನ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಶೈನಿ ಹಾಗೂ ಅತ್ಯಾಚಾರಕ್ಕೊಳಗಾದ ಯುವತಿಯ ಮೂತ್ರ ಮತ್ತು ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಇಬ್ಬರು ಡಿಎನ್ಎ ಪರೀಕ್ಷೆ ಮುಗಿದ ಬಳಿಕ ವೈದ್ಯರು ನೀಡುವ ಪ್ರಮಾಣ ಪತ್ರ ಪೊಲೀಸರ ಕೈಗೆ ಸಿಗಲಿದೆ. ಅಲ್ಲದೇ ಶೈನಿಯ ಬಲಭಾಗಕ್ಕೆ ಗಾಯವಾಗಿರುವುದು ವೈದ್ಯಕೀಯ ಪರೀಕ್ಷೆ ವೇಳೆ ತಿಳಿದು ಬಂದಿದೆ ಎಂದು ಅವರು ಹೇಳಿದರು. ಶೈನಿಯ ನ್ಯಾಯಾಂಗ ಬಂಧನ ಜುಲೈ 2 ರ ವರೆಗೆ ವಿಸ್ತರಣೆ ಮಾಡಲಾಗಿದೆ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada