twitter
    For Quick Alerts
    ALLOW NOTIFICATIONS  
    For Daily Alerts

    ದಾವಣಗೆರೆಯಲ್ಲಿ ಪ್ರಕಾಶ್ ರೈ ಪ್ರತಿಕೃತಿ ದಹಿಸಿ ಪ್ರತಿಭಟನೆ

    By Rajendra
    |
    <ul id="pagination-digg"><li class="previous"><a href="/gossips/23-hindi-movie-singham-controversy-ends-aid0052.html">« Previous</a>

    ಕನ್ನಡಿಗರನ್ನು ನಾಯಿಗಳು ಎಂದು ಜರಿದಿರುವ 'ಸಿಂಗಂ' ಚಿತ್ರದಲ್ಲಿ ಪ್ರಕಾಶ್ ರೈ ಅಭಿನಯಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಉದ್ಭವಿಸಿದೆ. ಶನಿವಾರ (ಜು.23)ಕರವೇ ಕಾರ್ಯಕರ್ತರ ದಾವಣಗೆರೆಯಲ್ಲಿ ಪ್ರಕಾಶ್ ರೈ ಪ್ರತಿಕೃತಿಯನ್ನು ದಹಿತಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ಕರವೇ ಪ್ರವೀಣ್ ಶೆಟ್ಟಿ ಬಳಗದ ಕಾರ್ಯಕರ್ತರು ಪ್ರಕಾಶ್ ರೈ ವಿರುದ್ಧ ತೀವ್ರವಾಗಿ ಮಾತಿನ ದಾಳಿ ನಡೆಸಿದರು. ಕನ್ನಡಿಗರನ್ನು ಹೀಗಳೆದಿರುವ 'ಸಿಂಗಂ' ಚಿತ್ರವನ್ನು ಬ್ಯಾನ್ ಮಾಡಬೇಕು. ಹಾಗೆಯೇ ಪ್ರಕಾಶ್ ರೈ ಹಾಗೂ ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

    ಪ್ರಕಾಶ್ ರೈ ಕೇವಲ ತೆರೆಯ ಮೇಲಷ್ಟೇ ಈ ಚಿತ್ರ ನೋಡಿದರೆ ನಿಜಜೀವನದಲ್ಲೂ ಅವರು ಖಳನಟನಿರಬೇಕು ಎಂಬ ಅನುಮಾನ ಬರುತ್ತದೆ. ಈ ಚಿತ್ರದ ಪ್ರದರ್ಶನವನ್ನು ನಿಲ್ಲಿಸಬೇಕು ಎಂದು ಕರವೇ ಕಾರ್ಯಕರ್ತರು ಒಕ್ಕೊರಲಿನಿಂದ ಆಗ್ರಹಿಸಿದರು.

    'ಸಿಂಗಂ'ಗೆ ಕೆಎಫ್ ಸಿಸಿ ಗಡುವು: ಸಿಂಗಂ ಚಿತ್ರದಲ್ಲಿನ ವಿವಾದಾತ್ಮಕ ಸನ್ನಿವೇಶಗಳಿಗೆ ಕರ್ನಾಟಕದಲ್ಲಷ್ಟೇ ಅಲ್ಲ ಈ ಚಿತ್ರ ಎಲ್ಲೆಲ್ಲಿ ಬಿಡುಗಡೆಯಾಗಿದೆಯೋ ಅಲ್ಲೆಲ್ಲ ಕತ್ತರಿ ಹಾಕಬೇಕು. ಪ್ರಕಾಶ್ ರೈ ಹಾಗೂ ರೋಹಿತ್ ಶೆಟ್ಟಿ ಕನ್ನಡಿಗರಾಗಿದ್ದುಕೊಂಡೂ ಈ ರೀತಿಯ ಚಿತ್ರದಲ್ಲಿ ಅಭಿನಯಿಸಿದ್ದು ಸರಿಯಲ್ಲ. ಇವರಿಬ್ಬರೂ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಹೇಳಿದರು.

    ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಂಬಂಧ ಇಂದು ಸಂಜೆ ವೇಳೆಗೆ ರಿಲಯನ್ಸ್ ಸಂಸ್ಥೆಗೆ ಪತ್ರ ಬರೆಯುತ್ತೇವೆ. ಮುಂದಿನ 24 ಗಂಟೆಗಳ ಸಮಯದಲ್ಲಿ ಚಿತ್ರದಲ್ಲಿನ ಆಕ್ಷೇಪಾರ್ಹ ಸನ್ನಿವೇಶಗಳನ್ನು ತೆಗೆಯಬೇಕು ಎಂದು ಬಸಂತ್ ಕುಮಾರ್ ಆಗ್ರಹಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

    <ul id="pagination-digg"><li class="previous"><a href="/gossips/23-hindi-movie-singham-controversy-ends-aid0052.html">« Previous</a>

    English summary
    Activists of Karnataka Rakshana Vedike today burnt an effigy of renowned actor Prakash Raj to protest against his controversial dialogues in latest Hindi movie Singham. KaRaVe activists demands that the director Rohit Shetty and Prakash Raj apologize Kannadigas.
    Saturday, July 23, 2011, 17:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X