»   » ನಿತ್ಯಾನಂದನನೊಂದಿಗೆ ರಾಸಲೀಲೆ ಅಪ್ಪಟ ಸುಳ್ಳು

ನಿತ್ಯಾನಂದನನೊಂದಿಗೆ ರಾಸಲೀಲೆ ಅಪ್ಪಟ ಸುಳ್ಳು

Posted By:
Subscribe to Filmibeat Kannada

ಸ್ವಾಮಿ ನಿತ್ಯಾನಂದ ಜೊತೆಗಿನ ರಾಸಲೀಲೆ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ತಮಿಳು ನಟಿ ಯುವರಾಣಿ ಸ್ಪಷ್ಟಪಡಿಸಿದ್ದಾರೆ. ಸ್ವಾಮಿ ನಿತ್ಯಾನಂದನ ಜೊತೆ ರಾಸಲೀಲೆಯಲ್ಲಿ ಈಕೆಯೂ ತೊಡಗಿದ್ದರು ಎಂಬ ಸುದ್ದಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ನಟಿ ಯುವರಾಣಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಏತನ್ಮಧ್ಯೆ ಯುವರಾಣಿ ಜೊತೆಗಿನ ನಿತ್ಯಾನಂದನ ರಾಸಲೀಲೆ ವಿಡಿಯೋ ಬ್ರೆಜಿಲ್ ನಲ್ಲಿರುವ ಸರ್ವರ್ ಮೂಲಕ ಅಂತರ್ಜಾಲಕ್ಕೆ ಸೇರ್ಪಡೆಯಾಗಿದೆ ಎಂಬ ಮಹತ್ವದ ಮಾಹಿತಿಯೂ ಹೊರಬಿದ್ದಿದೆ. ವಿಡಿಯೋದಲ್ಲಿ ಯುವರಾಣಿ ಮುಖಚಹರೆಯ ನಟಿಯೊಬ್ಬಳು ನಿತ್ಯಾನಂದನೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯಗಳಿವೆ ಎನ್ನಲಾಗಿದೆ.

ಈ ವಿಡಿಯೋವನ್ನು ಆಧರಿಸಿ ಅನೇಕ ಪತ್ರಿಕೆಗಳು ಸುದ್ದಿ ಪ್ರಕಟಿಸುತ್ತಿದ್ದು, ಕೆಲವು ಅಂತರ್ಜಾಲ ತಾಣಗಳು ನಿತ್ಯಾನಂದನೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ನಟಿ ಮತ್ತ್ಯಾರು ಅಲ್ಲ ಆಕೆ ನಟಿ ಯುವರಾಣಿ ಎಂಬುದನ್ನು ಸ್ಪಷ್ಟಪಡಿಸಿದ್ದವು. ಆದರೆ ನಟಿ ಯುವರಾಣಿ ಈ ಎಲ್ಲಾ ಸುದ್ದಿ ಹಾಗೂ ವಿಡಿಯೋಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ತಮಗೆ ಮದುವೆಯಾಗಿದ್ದು ಇಬ್ಬರು ಮಕ್ಕಳು ಹಾಗೂ ಗಂಡನ ಜೊತೆ ಸುಖಿ ಸಂಸಾರ ನಡೆಸುತ್ತಿರುವುದಾಗಿ ಯುವರಾಣಿ ತಿಳಿಸಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ನಿತ್ಯಾನಂದ ಒಬ್ಬ ಸ್ವಾಮಿ ಎಂಬುದಷ್ಟೆ ನನಗೂ ಗೊತ್ತಿರುವ ಸತ್ಯ. ಇದಕ್ಕೆ ಹೊರತಾಗಿ ಆತನ ಬಗ್ಗೆ ನನಗೆ ಏನೂ ಗೊತ್ತ್ತಿಲ್ಲ. ನನಗೆ ಯಾವುದೇ ರೀತಿಯಲ್ಲಿ ಸಂಬಂಧವೂ ಇಲ್ಲ ಎಂದು ಯುವರಾಣಿ ತಿಳಿಸಿದ್ದಾರೆ.

ತಮಿಳು ಸಂಜೆ ಪತ್ರಿಕೆ 'ಮಾಲೈ ಮಲಾರ್'ನಲ್ಲಿ ನಿತ್ಯಾನಂದ ಮತ್ತು ಯುವರಾಣಿಯ ರಾಸಲೀಲೆ ಪ್ರಕರಣ ಮೊದಲ ಪ್ರಕಟವಾಗಿತ್ತು. ಈ ಸುದ್ದಿಯನ್ನು ಆಧರಿಸಿ ಹಲವಾರು ಪತ್ರಿಕೆಗಳು ನಿತ್ಯಾನಂದನ ಹೊಸ ರಾಸಲೀಲೆಯನ್ನು ಬಯಲಿಗೆ ಎಳೆದಿದ್ದವು. ಮಾರ್ಚ್23ರ ಸಂಚಿಕೆಯಲ್ಲಿ ಯುವರಾಣಿಯ ವಿಶೇಷ ಸಂದರ್ಶನ ಪ್ರಕಟಿಸುವುದಾಗಿ 'ಮಾಲೈ ಮಲಾರ್' ಪತ್ರಿಕೆ ತನ್ನ ಓದುಗರಿಗೆ ತಿಳಿಸಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada