»   » ನಟಿ ರಮ್ಯಾ ಕೈ ಮುರಿದುಕೊಂಡ ಸುದ್ದಿ ದಿಟವೇ?

ನಟಿ ರಮ್ಯಾ ಕೈ ಮುರಿದುಕೊಂಡ ಸುದ್ದಿ ದಿಟವೇ?

By: * ವಿನಾಯಕ ರಾಮ್
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಒಂದು ಬಹುನಿರೀಕ್ಷಿತ ಚಿತ್ರ ಬಿಡುಗಡೆಯಾಗುವ ಸುದ್ದಿ ಹೇಗೆ ಕ್ಷಣಾರ್ಧದಲ್ಲಿ ಊರೆಲ್ಲ ತುಂಬಿಕೊಳ್ಳುತ್ತದೆಯೋ, ಒಂದು ಗಾಳಿ ಸುದ್ದಿಯೂ ಅಷ್ಟೇ ಬೇಗ ಕಿವಿಯಿಂದ ಕಿವಿಗೆ ನುಗ್ಗುತ್ತದೆ. ಈಗ ಅದೇ ಥರದ ಗಾಳಿಸುದ್ದಿಯೊಂದು ಗಲ್ಲಿ ಗಲ್ಲಿ ಸುತ್ತುತ್ತಿದೆ.

ಅದೇನಪ್ಪಾಅಂದ್ರೆ 'ನಟಿ ರಮ್ಯಾ ಕೈಗೆ ಬಲವಾದ ಪೆಟ್ಟು ಬಿದ್ದಿದೆಯಂತೆ. ಮೊನ್ನೆಯಷ್ಟೇ ಗೆಳತಿಯರ ಜತೆ ಬೈಕ್ ರೈಡಿಂಗ್‌ಗೆ ಹೋದಾಗ ಜಾರಿ ಬಿದ್ದಿದ್ದಾರೆ. ಬಿದ್ದಾಗ ಪಕ್ಕದಲ್ಲಿ ಹೋಗುತ್ತಿದ್ದ ಬೈಕ್ ಕೈ ಮೇಲೆ ಹರಿದ ಕಾರಣ ಬಲವಾದ ಏಟಾಗಿದೆ. ತುರ್ತು ಚಿಕಿತ್ಸೆ ಮಾಡಿಸಿಕೊಂಡು, ಆದಷ್ಟು ಬೇಗ ವಾಸಿ ಮಾಡಿಕೊಳ್ಳಲು ಮುಂಬಯಿಗೂ ಹೋಗಿ ಬಂದಿದ್ದಾರೆ. ಹಾಗಾಗಿ ಹದಿನೈದು ದಿನದಿಂದ
ಯಾವುದೇ ಫೋನ್ ಕಾಲ್ ಎತ್ತುತ್ತಿಲ್ಲ. ಕೈಗೆ ಸಿಗುತ್ತಿಲ್ಲ..'

ಈ ಸುದ್ದಿಯನ್ನು ಯಾರು ಹುಟ್ಟುಹಾಕಿದರೋ ಗೊತ್ತಿಲ್ಲ. ಕೆಲವರ ಪ್ರಕಾರ ಅವರು ಸಂಪರ್ಕಿಸಿದ ಮೂಳೆ ತಜ್ಞರೇ ಹೇಳಿದ್ದಾರಂತೆ. ಇನ್ನು ಕೆಲವರಿಗೆ ಸುದ್ದಿ ಮುಂಬಯಿ ಟು ಬೆಂಗಳೂರು ರೈಲಿನ ಬೋಗಿಯಲ್ಲಿ ಸಿಕ್ಕಿದೆ. ಇದರಲ್ಲಿ ಯಾವುದು ಸತ್ಯ ಎಂದು ಸ್ವತಃ ರಮ್ಯಾ ಅವರನ್ನು ಕೇಳುವ ಅಂದರೆ, ಯಾರದೂರವಾಣಿಯನ್ನೂ ಎತ್ತುತ್ತಿಲ್ಲವಂತೆ.

ಮೊದಲಾದರೆ ಕೆಲವರಿಗಾದರೂ ಸಂಪರ್ಕಕ್ಕೆ ಸಿಗುತ್ತಿದ್ದರು. ಹದಿನೈದುದಿನದಿಂದೀಚೆಗೆ ಪತ್ತೆಯೇ ಇಲ್ಲ ಎನ್ನುತ್ತಿದೆ ಇನ್ನೊಂದು ಮೂಲೆ. ಆದರೆ, ಇದು ಸುಳ್ಳು ಸುದ್ದಿ ಎನ್ನುತ್ತಿದ್ದಾರೆ ನಿರ್ದೇಶಕ ನಾಗಶೇಖರ್ ಹಾಗೂ ನಿರ್ಮಾಪಕ ಸುರೇಶ್. ಮೊನ್ನೆಯಷ್ಟೇ ಅವರು ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ನಟಿಸಿ ಹೋಗಿದ್ದಾರೆ ಎನ್ನುವುದು ನಾಗಣ್ಣನಹೇಳಿಕೆ.

ಎರಡನೇ ಮದ್ವೆ ಚಿತ್ರವನ್ನು ತೆರೆ ಕಾಣಿಸುವ ತರಾತುರಿಯಲ್ಲಿರುವ ನಿರ್ಮಾಪಕ ಸುರೇಶ್ ಹೇಳುವಂತೆ "ರಮ್ಯಾ ಅವರು ನಮ್ಮ ಮುಂದಿನ 'ಸಿದ್ದ ಲಿಂಗು' ಚಿತ್ರಕ್ಕೆ ನಾಯಕಿ. ಮೊನ್ನೆಯಷ್ಟೇ ಸಂಪರ್ಕ ಮಾಡಿದ್ದೇನೆ. ಫೋನಿಗೆ ಸಿಗುತ್ತಿಲ್ಲ ಎನ್ನುವುದು ನಿಜವೋ ಗೊತ್ತಿಲ್ಲ. ಆದರೆ, ನಾನು ಮೂರು ದಿನದ ಮುಂಚೆ ಮೀಟ್ ಮಾಡಿ, ಮಾತನಾಡುವಾಗ ಅವರ ಕೈ ಕಾಲೆಲ್ಲ ಚೆನ್ನಾಗಿಯೇ ಇತ್ತು.. ಹಾಗಾದರೆ ಹೀಗೆ ಸುಳ್ಳು ಸುದ್ದಿ ಹಬ್ಬಿಸಿದವರು ಯಾರು ? ಇದು ರಮ್ಯಾಗೆ ಆಗದ ನಾಯಕಿಯರ ಬಣದ ಕೆಲಸವಾ? ಕೇಳೋಣ ಎಂದು ಫೋನ್ ಮಾಡಿದರೂ ಆ ಕಡೆಯಿಂದ ನೋ ರಿಪ್ಲೈ (ಸ್ನೇಹಸೇತು: ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada