»   »  ತಾರೆ ಜಮೀನ್ ಪರ್ ಡಬ್ಬಿಂಗ್ ಕೈಬಿಟ್ಟ ಸರ್ಕಾರ

ತಾರೆ ಜಮೀನ್ ಪರ್ ಡಬ್ಬಿಂಗ್ ಕೈಬಿಟ್ಟ ಸರ್ಕಾರ

Subscribe to Filmibeat Kannada
Taare Zameen par
ಅಮೀರ್ ಖಾನ್ ರ 'ತಾರೆ ಜಮೀನ್ ಪರ್' ಹಿಂದಿ ಚಿತ್ರವನ್ನ್ನು ಕನ್ನಡಕ್ಕೆ ಡಬ್ ಮಾಡಿ ಶಾಲಾ ಮಕ್ಕಳಿಗೆ ತೋರಿಸಬೇಕು ಎಂಬ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಈ ಯೋಜನೆಯನ್ನು ಕರ್ನಾಟಕ ಸರ್ಕಾರ ಕೈಗೆತ್ತಿಕೊಂಡಿದ್ದೇ ಆದರೆ ನಾವು ಉಗ್ರವಾಗಿ ಪ್ರತಿಭಟಿಸುವುದಾಗಿ ಕನ್ನಡ ಚಲನಚಿತ್ರ ಕಾರ್ಮಿಕರ ಒಕ್ಕೂಟ ಬೆದರಿಕೆ ಒಡ್ಡಿದೆ. ವಿರೋಧದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಯೋಜನೆಯನ್ನು ಕೈಬಿಟ್ಟಿದೆ.

ಹಿಂದಿ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಸರ್ಕಾರದ ಈ ಕ್ರಮವನ್ನು ಖಂಡಿಸುತ್ತಿರುವುದಾಗಿ ಅಶೋಕ್ ತಿಳಿಸಿದರು. ಈ ಹಿಂದೆ ಕರ್ನಾಟಕ ಸರ್ಕಾರ ರಮಾನಂದ ಸಾಗರ್ ಅವರ ರಾಮಾಯಣ ಹಾಗೆಯೇ ಟಿಪ್ಪು ಸುಲ್ತಾನ್ ಟಿವಿ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಲು ನಿರ್ಧರಿಸಿತ್ತು. ಆದರೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ಯೋಜನೆಗಳಿಂದ ಹಿಂದೆ ಸರಿದಿತ್ತು.

ತಾರೆ ಜಮೀನ್ ಪರ್ ತರಹದ ಚಿತ್ರಕಥೆ ನನ್ನ ತಲೆಯಲ್ಲೂಇತ್ತು. ಆದರೆ ಬಜೆಟ್ ಕೊರತೆಯ ಕಾರಣ ಆ ಚಿತ್ರವನ್ನು ಕನ್ನಡಲ್ಲಿ ಮಾಡಲು ಸಾಧ್ಯವಾಗಲಿಲ್ಲ ಎಂದು ಹಾಸ್ಯ ನಟ ಕೋಮಲ್ ಈ ಹಿಂದೆ ಹೇಳಿಕೊಂಡಿದ್ದರು. ತಾರೆ ಜಮೀನ್ ಪರ್ ಚಿತ್ರಕ್ಕಿಂತಲೂ ಕೆಲವೊಂದು ಉತ್ತಮ ಮಕ್ಕಳ ಚಿತ್ರಗಳು ಕನ್ನಡಲ್ಲೂ ಬಂದಿವೆ. ಅಂತಹ ಚಿತ್ರಗಳಿಗೆ ಕರ್ನಾಟಕ ಸರ್ಕಾರ ಪ್ರೋತ್ಸಾಹ ಕೊಡಬೇಕಾಗಿರುವುದು ಧರ್ಮ ಅಲ್ಲವೆ?

(ದಟ್ಸ್ ಕನ್ನಡ ಚಿತ್ರವಾರ್ತೆ)

ಸಿಡಿ ಮುಖಾಂತರಎಲ್ಲಾ ಶಾಲೆಗಳಲ್ಲಿ 'ಸತ್ಯಹರಿಶ್ಚಂದ್ರ'

Please Wait while comments are loading...