»   »  ಸ್ಟಾರ್ ಪ್ಲಸ್ ನ ಸಚ್ ಕಾ ಸಾಮ್ನಾ ವಿರುದ್ಧ ನೋಟೀಸ್!

ಸ್ಟಾರ್ ಪ್ಲಸ್ ನ ಸಚ್ ಕಾ ಸಾಮ್ನಾ ವಿರುದ್ಧ ನೋಟೀಸ್!

Subscribe to Filmibeat Kannada

ಟಿ ಆರ್ ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಮತ್ತು ಜನಪ್ರಿಯತೆಗೋಸ್ಕರ ಹಿಂದಿ ಚಾನಲ್ ಗಳಲ್ಲಿ ಅಸಭ್ಯ ಮತ್ತು ಅನೈತಿಕತೆಯನ್ನು ಬಿಂಬಿಸುವ ಕಾರ್ಯಕ್ರಮಗಳು ಹೆಚ್ಚಾಗಿ ಪ್ರಸಾರವಾಗುತ್ತಿವೆ. ಇತ್ತೀಚಿಗೆ ಬರುತ್ತಿರುವ ಕೆಲವೊಂದು ರಿಯಾಲಿಟಿ ಶೋಗಳು ಇದಕ್ಕೆ ಕನ್ನಡಿ ಹಿಡಿಯುತ್ತಿವೆ.

ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗುತ್ತಿರುವ 'ಸಚ್ ಕಾ ಸಾಮ್ನಾ' ಎನ್ನುವ ರಿಯಾಲಿಟಿ ಶೋ ಈಗ ಸಂಸದರ ಮತ್ತು ಕೇಂದ್ರ ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಸ್ಟಾರ್ ಪ್ಲಸ್ ವಾಹಿನಿ ನೋಟೀಸ್ ಸ್ವೀಕರಿಸುವಂತಾಗಿದೆ. ಈ ಕಾರ್ಯಕ್ರಮ ಕುರಿತು ಜುಲೈ 27ರ ಒಳಗೆ ವಿವರಣೆ ನೀಡುವಂತೆ ಆದೇಶ ನೀಡಿದೆ.

ಕ್ರಿಕೆಟಿಗ ವಿನೋದ್ ಕಾಂಬ್ಳಿ ತನ್ನ ಬಾಲ್ಯದ ಗೆಳೆಯ ತೆಂಡೂಲ್ಕರ್ ವಿರುದ್ಧ ಆರೋಪ ಮಾಡಿದ್ದಾರೆಂಬ ವಿವಾದ ಹುಟ್ಟಿದ್ದು ಈ ಕಾರ್ಯಕ್ರಮದಿಂದಲೇ. ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗೆ ಸುಳ್ಳು ಪತ್ತೆ ಪರೀಕ್ಷೆ ಮೂಲಕ ಅವರು ಹೇಳಿದ ಉತ್ತರ ಸರಿಯೋ ಅಥವಾ ತಪ್ಪೋ ಎಂದು ಕಂಡುಹಿಡಿಯಲಾಗುತ್ತದೆ. 21 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದರೆ ಒಂದು ಕೋಟಿ ರುಪಾಯಿ ಬಹುಮಾನ. ಇಲ್ಲಿ ಕೇಳುವ ಕೆಲವೊಂದು ಅಸಂಬದ್ಧ ಪ್ರಶ್ತ್ನೆಗಳ ಸ್ಯಾಂಪಲ್ ಗಳು ಹೀಗಿವೆ...

* ನಿಮ್ಮ ಗಂಡನನ್ನು ಯಾವತ್ತಾದರೂ ಕೊಲ್ಲಲು ಯೋಚಿಸಿದ್ದಿರಾ ?
* ವಿವಾಹಿತ ಪುರುಷನ ಜೊತೆ ನಿಮಗೆ ಸಂಬಂಧವಿದೆಯಾ?
* ಕಾಲೇಜ್ ಓದುವ ಸಮಯದಲ್ಲಿ ನೀವು ಗರ್ಭಿಣಿಯಾಗಿ ಕಾಲೇಜ್ ನಿಂದ ಡಿಬಾರ್ ಆಗಿದ್ರಾ ?
* ಕುಡಿತದ ದಾಸರಾಗಿದ್ದೀರಾ?

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada