»   »  ಲೈವ್ ಪ್ರೋಗ್ರಾಂನಲ್ಲಿ ಬೂಸಿ ಬಿಟ್ಟ ಹಂಸಲೇಖ

ಲೈವ್ ಪ್ರೋಗ್ರಾಂನಲ್ಲಿ ಬೂಸಿ ಬಿಟ್ಟ ಹಂಸಲೇಖ

Posted By: * ಜಯಂತಿ
Subscribe to Filmibeat Kannada

ಟಿವಿ ವಾಹಿನಿಯಲ್ಲಿ ರಿಯಾಲಿಟಿ ಶೋ. ತೀರ್ಪುಗಾರರ ಸಾಲಿನಲ್ಲಿ ಕೂತಿದ್ದವರು ಹಂಸಲೇಖ. ಅಲ್ಲಾದ ತಮಾಷೆ ನೋಡಿ; ಒಂದು ಮಗು ಪ್ರೀತೀನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಹಾಡಿತು. ಹಾಡು ಮುಗಿದ ಮೇಲೆ ಹಂಸ್ ಉದ್ದುದ್ದವಾಗಿ ಮಾತಾಡಿದರು.

ದಿನವು ನಿತ್ಯ ಉಗಾದಿನೇ ಎಂಬ ದ್ವಿರುಕ್ತಿಯನ್ನು ಸಾಹಿತಿ ಬಹಳ ಚೆನ್ನಾಗಿ ಬಳಸಿದ್ದಾರೆ ಎಂದರು. ಖುದ್ದು ಚಿ.ಉದಯಶಂಕರ್ ಹತ್ತಿರ ಅವರು ಬರೆದ ಆ ಸಾಲುಗಳ ಕುರಿತು ಚರ್ಚಿಸಿದ್ದಾಗಿ ನುಡಿದರು. ಎಲ್ಲರೂ ಚಪ್ಪಾಳೆ ಹೊಡೆದರು. ಹಂಸಲೇಖ ಮತ್ತೆಮತ್ತೆ ಹಸನ್ಮುಖಿಯಾದರು.

ತಮಾಷೆ ನೋಡಿ, ಆ ಹಾಡನ್ನು ಬರದಿರುವವರು ಉದಯಶಂಕರ್ ಅಲ್ಲ; ಹುಣಸೂರು ಕೃಷ್ಣಮೂರ್ತಿ. ಅನೇಕ ಕಡೆ ಅದು ತಮಗೆ ಇಷ್ಟವಾದ ಹಾಡು ಅಂತ ಅವರೇ ಉಲ್ಲೇಖಿಸಿದ್ದಾರೆ. ಹಾಡೇ ಬರೆಯದವರ ಹತ್ತಿರ ಅದರ ಬಗ್ಗೆ ಹಂಸಲೇಖ ಚರ್ಚೆ ನಡೆಸಿರುವ ಸಂಗತಿಯನ್ನು ಒಂಚೂರೂ ಸಂಕೋಚವಿಲ್ಲದೆ ಹೇಳಿಕೊಳ್ಳುತ್ತಾರೆ. ಹಂಸಲೇಖ ತರಹದವರು ಹೀಗೆ ಜಾಹೀರಾಗುವಂತೆ ಸುಳ್ಳುಗಳನ್ನು ಹೇಳುವುದು ತರವೇ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada